ನವದೆಹಲಿ: ಐಪಿಎಲ್ನ 13ನೇ ಆವೃತ್ತಿಗೆ ಗುವಾಹಟಿಯ ಬರ್ಸಪಾರ ಕ್ರಿಕೆಟ್ ಸ್ಟೇಡಿಯಂ ಕೂಡ ಸೇರ್ಪಡೆಗೊಂಡಿದೆ. ರಾಜಸ್ಥಾನ ರಾಯಲ್ಸ್ ಪ್ರಾಂಚೈಸಿ ತನ್ನ ತವರಿನ ಎರಡು ಪಂದ್ಯಗಳನ್ನು ಈ ಮೈದಾನದಲ್ಲಿ ಆಡಲಿದೆ.
ರಾಜಸ್ತಾನ್ ರಾಯಲ್ಸ್ ಈ ಹಿಂದಿನ ಆವೃತ್ತಿಯಲ್ಲಿ ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಎಲ್ಲ ತವರು ಪಂದ್ಯಗಳನ್ನು ಆಡುತ್ತಿತ್ತು. ಆದರೆ ಈ ಬಾರಿ ಗುವಾಹಟಿಯಲ್ಲಿ ಎರಡು ಪಂದ್ಯಗಳನ್ನು ಆಯೋಜಿಸಲು ಸಿದ್ದವಾಗಿದೆ.
ಏಪ್ರಿಲ್ 5ರಂದು ಡೆಲ್ಲಿ ಕ್ಯಾಪಿಟಲ್ ವಿರುದ್ಧ ಹಾಗೂ ಏಪ್ರಿಲ್ 9ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ಈ ಎರಡು ಪಂದ್ಯಗಳು ಸಂಜೆ 8 ಗಂಟೆಗೆ ಆರಂಭವಾಗಲಿವೆ. ರಾಜಸ್ಥಾನ್ ರಾಯಲ್ಸ್ ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಏಪ್ರಿಲ್ 2 ರಂದು ಕಣಕ್ಕಿಳಿಯಲಿದೆ. ಕಳೆದ ಬಾರಿ ರಾಯಲ್ಸ್ 7ನೇ ಸ್ಥಾನಿಯಾಗಿ ಟೂರ್ನಿ ಮುಗಿಸಿತ್ತು.
2020 ರ ಐಪಿಎಲ್ ಮಾರ್ಚ್ 29ರಂದು ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಕಾದಾಡಲಿವೆ. ಈ ಬಾರಿ ಭಾನುವಾರ ಮಾತ್ರ ಎರಡು ಪಂದ್ಯಗಳು ನಡೆಯಲಿವೆ.