ETV Bharat / sports

ಐಪಿಎಲ್ ಫೈನಲ್ ಪಂದ್ಯದಲ್ಲಿ ಡೆಲ್ಲಿಗೆ ಪ್ರಶಸ್ತಿ ತಂದುಕೊಡಬಲ್ಲ 'ಫೈವ್‌'ಸ್ಟಾರ್ಸ್!! - ಎನ್ರಿಚ್ ನೋಕಿಯಾ

ಫೈನಲ್ ಕಾದಾಟದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್​ ತಂಡದ ಆಟಗಾರರ ಸವಾಲನ್ನು ಸ್ವೀಕರಿಸಿ ಟ್ರೋಫಿ ಎತ್ತಿ ಹಿಡಿಯಲು ಡೆಲ್ಲಿ ತಂಡಕ್ಕೆ ನೆರವಾಗಬಹುದಾದ ಟಾಪ್​ 5 ಆಟಗಾರರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ..

ಐಪಿಎಲ್ ಫೈನಲ್
ಐಪಿಎಲ್ ಫೈನಲ್
author img

By

Published : Nov 10, 2020, 5:40 PM IST

ದುಬೈ : ಇದೇ ಮೊದಲ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿರುವ ಯುವ ಆಟಗಾರ ಶ್ರೇಯಸ್​ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಐಪಿಎಲ್​ ತನಗೆ ಸರಿಸಾಟಿ ಯಾರೂ ಇಲ್ಲ ಎಂದು ಮೆರೆಯುತ್ತಿರುವ ಮುಂಬೈ ಇಂಡಿಯನ್ಸ್​ ತಂಡವನ್ನು ಇಂದಿನ ಫೈನಲ್ ಪಂದ್ಯದಲ್ಲಿ ಎದುರಿಸುತ್ತಿದೆ.

ಮಿಲಿಯನ್ ಡಾಲರ್​ ಟೂರ್ನಿಯಲ್ಲಿ ಆರಂಭದಲ್ಲಿ ಅಬ್ಬರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್​ ದ್ವಿತೀಯಾರ್ಧದಲ್ಲಿ ಮಂಕಾಗಿತ್ತು. ಆದರೆ, ಮತ್ತೆ ಕೊನೆಯ ಲೀಗ್ ಹಾಗೂ 2ನೇ ಕ್ವಾಲಿಫೈಯರ್​ನಲ್ಲಿ ತಿರುಗಿ ಬಿದ್ದು ಆರ್​ಸಿಬಿ ಮತ್ತು ಸನ್​ರೈಸರ್ಸ್​ ತಂಡವನ್ನು ಮಣಿಸಿ 2ನೇ ಸ್ಥಾನಿಯಾಗಿ ಪ್ಲೇಆಫ್ ಪ್ರವೇಶಿಸಿತ್ತು.

ಆದರೆ, ಕ್ವಾಲಿಫೈಯರ್​ ಪಂದ್ಯದಲ್ಲಿ ಪವರ್‌ಫುಲ್ ತಂಡವಾದ ಮುಂಬೈ ವಿರುದ್ಧ ಮಕಾಡೆ ಮಲಗಿತ್ತು. ಸೋಲಿನಿಂದ ಹಿಂಜರಿಯದ ಡೆಲ್ಲಿ ಮತ್ತೆ 2ನೇ ಕ್ವಾಲಿಫೈಯರ್​ನಲ್ಲಿ ಸನ್​ರೈಸರ್ಸ್​ ವಿರುದ್ಧ ಅಚ್ಚರಿಯ ಪ್ರದರ್ಶನ ನೀಡಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದೆ.

ಫೈನಲ್ ಕಾದಾಟದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್​ ತಂಡದ ಆಟಗಾರರ ಸವಾಲನ್ನು ಸ್ವೀಕರಿಸಿ ಟ್ರೋಫಿ ಎತ್ತಿ ಹಿಡಿಯಲು ಡೆಲ್ಲಿ ತಂಡಕ್ಕೆ ನೆರವಾಗಬಹುದಾದ ಟಾಪ್​ 5 ಆಟಗಾರರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ..

ಕಗಿಸೋ ರಬಾಡ

ದಕ್ಷಿಣ ಆಫ್ರಿಕಾ ಯುವ ಬೌಲರ್ ರಬಾಡ ಟೂರ್ನಿಯ ಆರಂಭದಿಂದಲೂ ಡೆಲ್ಲಿ ಕ್ಯಾಪಿಟಲ್ಸ್​ ಬೌಲಿಂಗ್ ವಿಭಾಗದ ಆಧಾರ ಸ್ತಂಭವಾಗಿದ್ದಾರೆ. 13ನೇ ಆವೃತ್ತಿಯಲ್ಲಿ 16 ಪಂದ್ಯಗಳಿಂದ 28 ವಿಕೆಟ್​ ಪಡೆದಿರುವ ರಬಾಡ ಪರ್ಪಲ್ ಕ್ಯಾಪ್​ ಪಡೆದಿದ್ದಾರೆ. ಹಾಗಾಗಿ, ಈ ಪಂದ್ಯದಲ್ಲಿ ರಬಾಡ ಪ್ರದರ್ಶನದ ಮೇಲೆ ಡೆಲ್ಲಿ ತಂಡದ ಕನಸು ನಿಂತಿದೆ.

ಶಿಖರ್ ಧವನ್​

ಭಾರತ ತಂಡದ ಎಡಗೈ ಆಟಗಾರ ಶಿಖರ್ ಧವನ್​ ಟೂರ್ನಿಗೂ ಮೊದಲು ಭಾರತ ತಂಡದಿಂದ ಹೊರಬೀಳುವ ಆತಂಕದಲ್ಲಿದ್ದರು. ಆದರೆ, ಐಪಿಎಲ್​ನಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದ್ದಾರೆ. ಅವರು ಟೂರ್ನಿಯಲ್ಲಿ ಸತತ 2 ಶತಕ ಸಿಡಿಸಿರುವುದೇ ಇದಕ್ಕೇ ಸಾಕ್ಷಿ.

ಧವನ್ ಟೂರ್ನಿಯಲ್ಲಿ 145.65 ಸ್ಟ್ರೈಕ್​ರೇಟ್​ನಲ್ಲಿ 603 ರನ್​ ಸಿಡಿಸಿದ್ದು, ಹೆಚ್ಚು ರನ್​ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಅಲ್ಲದೆ 2ನೇ ಕ್ವಾಲಿಫೈಯರ್ ಪಂದ್ಯದಲ್ಲೂ 78 ರನ್​ಗಳಿಸಿ ಫೈನಲ್ ಪ್ರವೇಶಿಸಲು ಪ್ರಮುಖ ಪಾತ್ರವಹಿಸಿದ್ದರು. ಇಂದಿನ ಪಂದ್ಯದಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ.

ಮಾರ್ಕಸ್​ ಸ್ಟೋಯ್ನಿಸ್​

ಡೆಲ್ಲಿ ತಂಡ ಫೈನಲ್ ಪ್ರವೇಶಿಸಿರುವುದರ ಹಿಂದಿನ ಬಹುಪಾಲು ಯಶಸ್ಸು ಸ್ಟೋಯ್ನಿಸ್​ಗೆ ಸಲ್ಲುತ್ತದೆ. ಅವರು ಬ್ಯಾಟಿಂಗ್​ನಲ್ಲಿ 352 ಹಾಗೂ ಬೌಲಿಂಗ್ನಲ್ಲಿ​ 12 ವಿಕೆಟ್​ ಪಡೆದು ಡೆಲ್ಲಿ ತಂಡಕ್ಕೆ ಕೆಲವು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಈ ಆವೃತ್ತಿ ಅವರ ಐಪಿಎಲ್​ನ ಹಿಂದಿನ ಆವೃತ್ತಿಗಳಿಗಿಂತ ಹೆಚ್ಚು ಶ್ರೇಷ್ಠವಾಗಿದೆ.

ಪ್ಲೇಆಫ್​ ಪಂದ್ಯದಲ್ಲಿ ಆರಂಭಿಕನಾಗಿ ಯಶಸ್ವಿಯಾಗಿರುವುದರಿಂದ ಇಂದಿನ ಪಂದ್ಯದಲ್ಲೂ ಸ್ಟೋಯ್ನಿಸ್​ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಸ್ಟೋಯ್ನಿಸ್ 38ರನ್ ಹಾಗೂ 3 ವಿಕೆಟ್​ ಪಡೆದಿದ್ದರು.

ಶ್ರೇಯಸ್ ಅಯ್ಯರ್​

ಡೆಲ್ಲಿ ಪರ ಶಿಖರ್ ಧವನ್ ಹೊರೆತುಪಡಿಸಿದರೆ ಹೆಚ್ಚು ರನ್​ಗಳಿಸಿರುವ ಪಟ್ಟಿಯಲ್ಲಿ ನಾಯಕ ಶ್ರೇಯಸ್​ ಅಯ್ಯರ್ ಇದ್ದಾರೆ. ಅವರು 16 ಪಂದ್ಯಗಳಲ್ಲಿ 454 ರನ್​ಗಳಿಸಿದ್ದಾರೆ. ಬುಮ್ರಾ, ಬೌಲ್ಟ್​ ಅಂತಹ ಪೇಸರ್​ಗಳ ವಿರುದ್ಧ ರನ್​ಗಳಿಸಿಲು ಸುಲಭವಲ್ಲದಿದ್ದರೂ, ಸ್ಪಿನ್ನರ್​ಗಳ ವಿರುದ್ಧ ಅಯ್ಯರ್ ದಾಖಲೆ ಚೆನ್ನಾಗಿರುವುದರಿಂದ ಇವರಿಂದ ಉತ್ತಮ ರನ್​ ನಿರೀಕ್ಷಿಸಬಹುದಾಗಿದೆ.

ಎನ್ರಿಚ್ ನೋಕಿಯಾ

ದಕ್ಷಿಣ ಅಫ್ರಿಕಾ ಎನ್ರಿಚ್ ನೋಕಿಯಾ ಡೆಲ್ಲಿ ತಂಡದಲ್ಲಿ ತೆರೆಮರೆ ಕಾಯಿಯಂತೆ ಮಿಂಚುತ್ತಿದ್ದಾರೆ. ಅವರು ರಬಾಡರ ಜೊತೆ ವೇಗದ ಬೌಲಿಂಗ್​ನಲ್ಲಿ ಡೆಲ್ಲಿ ತಂಡಕ್ಕೆ ಆಧಾರವಾಗಿದ್ದಾರೆ. ಎನ್ರಿಚ್​15 ಪಂದ್ಯಗಳಲ್ಲಿ 20 ವಿಕೆಟ್ಸ್​ ಉಡಾಯಿಸಿದ್ದಾರೆ. ಇದೇ ಮೊದಲ ಐಪಿಎಲ್ ಆದರೂ ಅದ್ಭುತ ಪ್ರದರ್ಶನ ತೋರಿರುವ ನೋಕಿಯಾ ಇಂದಿನ ಪಂದ್ಯದಲ್ಲಿ ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಡಬಲ್ಲ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.