ದುಬೈ: ಹೈದರಾಬಾದ್ ವಿರುದ್ಧ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಹಾಗೂ ಡಿ ವಿಲಿಯರ್ಸ್ ಸಿಡಿಸಿದ ಅಬ್ಬರದ ಅರ್ಧಶತಕಗಳ ನೆರವಿನಿಂದ ಆರ್ಸಿಬಿ ತಂಡ ಹೈದರಾಬಾದ್ಗೆ 164 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಐಪಿಎಲ್ಗೆ ಇಂದೇ ಪದಾರ್ಪಣೆ ಮಾಡಿದ್ದ ದೇವದತ್ ಪಡಿಕ್ಕಲ್ ಅನುಭವಿ ಆ್ಯರೋನ್ ಫಿಂಚ್ ಜೊತೆಗೂಡಿ ಮೊದಲ ವಿಕೆಟ್ಗೆ 90 ರನ್ಗಳ ಜೊತೆಯಾಟ ನೀಡಿದರು. 42 ಎಸೆತಗಳನ್ನು ಎದರುಸಿದ ಪಡಿಕ್ಕಲ್ 8 ಬೌಂಡರಿ ಸಹಿತ 56 ರನ್ಗಳಿಸಿದರೆ, ಫಿಂಚ್ 27 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 29 ರನ್ಗಳಿಸಿ ಔಟಾದರು.
6 ತಿಂಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಮೈದಾನಕ್ಕಿಳಿದಿದ್ದ ವಿರಾಟ್ ಕೊಹ್ಲಿ ಕೇವಲ 13 ಎಸೆತಗಳಲ್ಲಿ 14 ರನ್ಗಳಿಸಿ ಎನ್ ನಟರಾಜನ್ ಬೌಲಿಂಗ್ನಲ್ಲಿ ರಶೀದ್ ಖಾನ್ಗೆ ಕ್ಯಾಚ್ ನೀಡಿ ಔಟಾದರು.
-
Innings Break!
— IndianPremierLeague (@IPL) September 21, 2020 " class="align-text-top noRightClick twitterSection" data="
The #RCB have put up a total of 163/5 on the board.
Will the @SunRisers chase this down?#Dream11IPL #SRHvRCB pic.twitter.com/tFzIgGZC2F
">Innings Break!
— IndianPremierLeague (@IPL) September 21, 2020
The #RCB have put up a total of 163/5 on the board.
Will the @SunRisers chase this down?#Dream11IPL #SRHvRCB pic.twitter.com/tFzIgGZC2FInnings Break!
— IndianPremierLeague (@IPL) September 21, 2020
The #RCB have put up a total of 163/5 on the board.
Will the @SunRisers chase this down?#Dream11IPL #SRHvRCB pic.twitter.com/tFzIgGZC2F
ಆದರೆ ಎಬಿ ಡಿ ವಿಲಿಯರ್ಸ್ ಕೊನೆಯ ಮೂರು ಓವರ್ಗಳಲದಲಿ ಅಬ್ಬರ ಬ್ಯಾಟಿಂಗ್ ಪ್ರದರ್ಶನ ತೋರಿ ಅರ್ಧಶತಕ ಗಳಿಸಿ ಕೊನೆಯ ಓವರ್ನಲ್ಲಿ ರನ್ಔಟ್ ಆದರು. ಅವರು 30 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 51 ರನ್ಗಳಿಸಿ ರನ್ಔಟ್ ಆದರು. ದುಬೆ ಕೂಡ 7 ರನ್ಗಳಿಸಿ ಕೊನೆಯ ಎಸೆತದಲ್ಲಿ ರನ್ಔಟ್ ಆದರು.
ಒಟ್ಟಾರೆ ಬೆಂಗಳೂರು ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 163 ರನ್ಗಳಿಸಿತು.
ಸನ್ರೈಸರ್ಸ್ ಹೈದರಾಬಾದ್ ಪರ ಎನ್ ನಟರಾಜನ್ , ಅಭಿಷೇಕ್ ಶರ್ಮಾ ಹಾಗೂ ವಿಜಯ್ ಶಂಕರ್ ತಲಾ ಒಂದು ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ವಿಕೆಟ್ ಪಡೆಯದಿದ್ದರೂ 4 ಓವರ್ಗಳಲ್ಲಿ ಕೇವಲ 25 ರನ್ ನೀಡಿ ಉತ್ತಮ ಎಕಾನಮಿ ಕಾಪಾಡಿಕೊಂಡರು.