ETV Bharat / sports

ಐಪಿಎಲ್​ 2020: ಕ್ರಿಸ್​ ವೋಕ್ಸ್​ ಬದಲಿಗೆ ದ.ಆಫ್ರಿಕಾದ ವೇಗಿ​ಗೆ ಡೆಲ್ಲಿ ಕ್ಯಾಪಿಟಲ್​​ ಮಣೆ

author img

By

Published : Aug 18, 2020, 12:22 PM IST

ಎನ್ರಿಚ್​ ನಾರ್ಟ್ಜೆ​ ಕಳೆದ ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದಲ್ಲಿದ್ದರು. ಆದರೆ ಭುಜದ ಗಾಯಕ್ಕೆ ಒಳಗಾಗಿದ್ದರಿಂದ ಅವರು ಐಪಿಎಲ್​ನಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡಿದ್ದರು.

ಡೆಲ್ಲಿ ಕ್ಯಾಪಿಟಲ್
ಕ್ರಿಸ್​ ವೋಕ್ಸ್​

ನವದೆಹಲಿ: ಇಂಗ್ಲೆಂಡ್​ ಆಲ್​ರೌಂಡರ್​ ಕ್ರಿಸ್​ ವೋಕ್ಸ್​ ಬದಲಿಗೆ ದಕ್ಷಿಣ ಆಫ್ರಿಕಾದ ಬೌಲರ್​ ಎನ್ರಿಚ್​ ನಾರ್ಟ್ಜೆ ​ಅವರನ್ನು ಮುಂದಿನ ಐಪಿಎಲ್​ ಆವೃತ್ತಿಗಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಡೆಲ್ಲಿ ಕ್ಯಾಪಿಟಲ್​ ಫ್ರಾಂಚೈಸಿ ಮಂಗಳವಾರ ಖಚಿತಪಡಿಸಿದೆ.

ಎನ್ರಿಚ್​ ನಾರ್ಟ್ಜೆ​ ಕಳೆದ ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದಲ್ಲಿದ್ದರು. ಆದರೆ ಭುಜದ ಗಾಯಕ್ಕೆ ಒಳಗಾಗಿದ್ದರಿಂದ ಅವರು ಐಪಿಎಲ್​ನಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡಿದ್ದರು.

ಎನ್ರಿಚ್​ ನಾರ್ಟ್ಜೆ​
ಎನ್ರಿಚ್​ ನಾರ್ಟ್ಜೆ​

ನಾರ್ಟ್ಜೆ​ ದಕ್ಷಿಣ ಆಫ್ರಿಕಾ ಪರ 2019ರಲ್ಲಿ ಭಾರತದ ವಿರುದ್ಧ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಒಟ್ಟಾರೆ 6 ಟೆಸ್ಟ್​ ಪಂದ್ಯಗಳಲ್ಲಿ 19 ವಿಕೆಟ್​​, 7 ಏಕದಿನ ಪಂದ್ಯಗಳಲ್ಲಿ 14 ವಿಕೆಟ್​​ ಹಾಗೂ 3 ಟಿ-20ಯಲ್ಲಿ 2 ವಿಕೆಟ್​ ಪಡೆದಿದ್ದಾರೆ. ಇವರು ಕ್ರಿಕೆಟ್​ ದಕ್ಷಿಣ ಆಫ್ರಿಕಾದ 2020ರ ವರ್ಷದ ಉತ್ತಮ ಹೊಸ ಆಟಗಾರ(Newcomer of the Year for 2020)' ಪ್ರಶಸ್ತಿ ಪಡೆದುಕೊಂಡಿದ್ದರು.

2019ರ ಐಪಿಎಲ್​ ಹರಾಜಿನಲ್ಲಿ 1.5 ಕೋಟಿಗೆ ಡೆಲ್ಲಿ ಕ್ಯಾಪಿಟಲ್​ ಖರೀದಿಸಿತ್ತು. ಆದರೆ ವೋಕ್ಸ್​ ಮುಂಬರುವ ಬೇಸಿಗೆ ಆವೃತ್ತಿಯ ಕ್ರಿಕೆಟ್​ಗೆ ತಯಾರಾಗಲು ಹಾಗೂ ಫಿಟ್​ನೆಸ್​ ಕಾಪಾಡಿಕೊಳ್ಳುವ ದೃಷ್ಟಿಯಿಂದ 2020ರ ಐಪಿಎಲ್​ನಿಂದ ಹೊರ ಉಳಿಯುವುದಾಗಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

2020ರ ಐಪಿಎಲ್ ಸೆಪ್ಟೆಂಬರ್​ 19ರಿಂದ ಯುಎಇನಲ್ಲಿ ಆರಂಭವಾಗಲಿದೆ. ನವೆಂಬರ್​ 10ರಂದು ಟೂರ್ನಮೆಂಟ್ ಫೈನಲ್ ಪಂದ್ಯ​ ನಡೆಯಲಿದೆ.​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.