ದುಬೈ: ಐಪಿಎಲ್ನ 16 ನೇ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ್ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳನ್ನು ಗೆದ್ದು ಮುನ್ನುಗ್ಗಿದ್ದ ಡೆಲ್ಲಿ ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮುಗ್ಗಿರಿಸಿತ್ತು. ಇದೀಗ ಬಲಿಷ್ಠ ಕೋಲ್ಕತ್ತಾ ತಂಡದ ವಿರುದ್ಧ ಗೆಲುವಿನ ಹಳಿಗೆ ಮರಳುವ ಆಲೋಚನೆಯಲ್ಲಿದೆ.
ಎರಡು ತಂಡಗಳು ಒಂದೊಂದು ಬದಲಾವಣೆ ಮಾಡಿಕೊಂಡಿವೆ. ಡೆಲ್ಲಿ ತಂಡಕ್ಕೆ ಅಕ್ಷರ್ ಪಟೇಲ್ ಬದಲು ಅಶ್ವಿನ್, ಕೆಕೆಆರ್ಗೆ ಕುಲ್ದೀಪ್ ಬದಲು ರಾಹುಲ್ ತ್ರಿಪಾಠಿ ತಂಡಕ್ಕೆ ಸೇರಿಕೊಂಡಿದ್ದಾರೆ.
ಇತ್ತ ಕೆಕೆಆರ್ ಮೊದಲ ಪಂದ್ಯದ ಸೋಲಿನ ಬಳಿಕ ತಿರುಗಿ ಬಿದ್ದಿದ್ದು ನಂತರದ ಎರಡು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 24 ಬಾರಿ ಮುಖಾಮುಖಿಯಾಗಿದ್ದು, 13ರಲ್ಲಿ ಕೆಕೆಆರ್ ಗೆಲುವು ಸಾಧಿಸಿದ್ರೆ, 11 ಪಂದ್ಯದಲ್ಲಿ ಡೆಲ್ಲಿ ಜಯದ ನಗೆ ಬೀರಿದೆ.
ಡೆಲ್ಲಿ ಕ್ಯಾಪಿಟಲ್: ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಾಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ವಾರ), ಶಿಮ್ರಾನ್ ಹೆಟ್ಮೈರ್, ಮಾರ್ಕಸ್ ಸ್ಟೊಯ್ನಿಸ್, ಆರ್ ಅಶ್ವಿನ್, ಅಮಿತ್ ಮಿಶ್ರಾ, ಕಗಿಸೊ ರಬಾಡ, ಆನ್ರಿಚ್ ನಾರ್ಟ್ಜೆ, ಇಶಾಂತ್ ಶರ್ಮಾ
ಕೋಲ್ಕತ್ತಾ ನೈಟ್ ರೈಡರ್ಸ್: ಶುಬ್ಮನ್ ಗಿಲ್, ಸುನಿಲ್ ನರೈನ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ನಾಯಕ ಮತ್ತು ವಿ.ಕೀ), ಇಯೊನ್ ಮಾರ್ಗನ್, ಆಂಡ್ರೆ ರಸ್ಸೆಲ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ಕಮಲೇಶ್ ನಾಗರ್ಕೋಟಿ, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ