ದುಬೈ: ರಬಾಡ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಡೆಲ್ಲಿ ತಂಡ ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 59 ರನ್ಗಳ ಭರ್ಜರಿ ಜಯ ಸಾಧಿಸಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 194 ರನ್ಗಳಿಸಿತ್ತು. ಪೃಥ್ವಿ ಶಾ 42 ರನ್ಸ್, ಧವನ್ 32, ಪಂತ್ 37, ಸ್ಟೊಯ್ನಿಸ್ 53 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. 195 ರನ್ಗಳ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ 137 ರನ್ಗಳಿಗೆ ತನ್ನ ಆಟವನ್ನು ಮುಗಿಸಿ 59 ರನ್ಗಳ ಸೋಲುಂಡಿತು.
195 ರನ್ಗಳ ಗುರಿ ಪಡೆದ ಆರ್ಸಿಬಿ ಆರಂಭದಲ್ಲೇ ಆಘಾತ ಆನುಭವಿಸಿತು. ಕಳೆದ ಪಂದ್ಯದ ಹೀರೋ ದೇವದತ್ ಪಡಿಕ್ಕಲ್ ಕೇವಲ 4 ರನ್ಗಳಿಸಿ ಅಶ್ವಿನ್ ಸ್ಪಿನ್ ಬಲೆಗೆ ಬಿದ್ದರು. ಇವರ ಬೆನ್ನಲ್ಲೇ ಆ್ಯರೋನ್ ಫಿಂಚ್ ಅಕ್ಷರ್ ಪಟೇಲ್ ಓವರ್ನಲ್ಲಿ 13 ರನ್ಗಳಿಸಿ ಔಟಾದರು.
ನಂತರ ಬಂದ ಎಬಿ ಡಿ ವಿಲಿಯರ್ಸ್(9) ದೊಡ್ಡ ಹೊಡೆತಕ್ಕೆ ಯತ್ನಿಸಿ ನಾರ್ಟ್ಜ್ ಬೌಲಿಂಗ್ನಲ್ಲಿ ಧವನ್ಗೆ ಕ್ಯಾಚ್ ನೀಡಿ ಹೊರ ನಡೆದರು. ಇಂದೇ ಮೊದಲ ಪಂದ್ಯವನ್ನಾಡಿದ ಮೊಯಿನ್ ಅಲಿ ಕೂಡ ಕೇವಲ 11 ರನ್ಗಳಿಸಿಔಟಾದರು.
39 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 43 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ರಬಾಡ ಬೌಲಿಂಗ್ನಲ್ಲಿ ಔಟಾಗುತ್ತಿದ್ದಂತೆ ಆರ್ಸಿಬಿ ಸೋಲು ಖಚಿತವಾಯಿತು..
-
A big big win for @DelhiCapitals as they beat #RCB by 59 runs.#Dream11IPL pic.twitter.com/Zv6Ep4ELQN
— IndianPremierLeague (@IPL) October 5, 2020 " class="align-text-top noRightClick twitterSection" data="
">A big big win for @DelhiCapitals as they beat #RCB by 59 runs.#Dream11IPL pic.twitter.com/Zv6Ep4ELQN
— IndianPremierLeague (@IPL) October 5, 2020A big big win for @DelhiCapitals as they beat #RCB by 59 runs.#Dream11IPL pic.twitter.com/Zv6Ep4ELQN
— IndianPremierLeague (@IPL) October 5, 2020
ಕೊಹ್ಲಿ ನಂತರ ಬಂದ ವಾಷಿಂಗ್ಟನ್ ಸುಂದರ್ 17, ಶಿವಂ ದುಬೆ 11, ಉದಾನ 1, ಸಿರಾಜ್ 5 ರನ್ಗಳಿಸಿ ಔಟಾದರೆ, ಸೈನಿ 12 ರನ್ಗಳಿಸಿ ಔಟಾಗದೆ ಉಳಿದರು. ಆರ್ಸಿಬಿ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ಗಳಿಸಲಷ್ಟೇ ಶಕ್ತವಾಗಿ 59 ರನ್ಗಳ ಹೀನಾಯ ಸೋಲುಕಂಡಿತು.
ಡೆಲ್ಲಿ ಪರ ಕಗಿಸೋ ರಬಾಡ 24 ರನ್ ನೀಡಿ 4 ವಿಕೆಟ್, ನಾರ್ಟ್ಜ್ 22 ರನ್ ನೀಡಿ 2 ವಿಕೆಟ್ , ಅಕ್ಷರ್ ಪಟೇಲ್ 18 ರನ್ ನೀಡಿ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ 8 ಅಂಕಪಡೆದು ಅಗ್ರಸ್ಥಾನಕ್ಕೇರಿತು. ಬೆಂಗಳೂರು 3ನೇ ಸ್ಥಾನದಲ್ಲಿ ಉಳಿದರೂ ರನ್ರೇಟ್ನಲ್ಲಿ ಭಾರಿ ಕುಸಿತ ಕಂಡಿದೆ.