ನವದೆಹಲಿ: ಯುವ ಆಟಗಾರ ಶುಬ್ಮನ್ ಗಿಲ್ 2018ರಲ್ಲಿ ಭಾರತ ಅಂಡರ್ 19 ವಿಶ್ವಕಪ್ ಗೆಲ್ಲಲು ನಿರ್ಣಾಯಕ ಪಾತ್ರವಹಿಸಿದ್ದರು. ನಂತರ ಐಪಿಎಲ್ನಲ್ಲೂ ಕೆಕೆಆರ್ ಪರ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಬಂದಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಡೀನ್ ಜೋನ್ಸ್ ಶುಬ್ಮನ್ ಗಿಲ್ 2020ರ ಐಪಿಎಲ್ನಲ್ಲಿ ಕೆಕೆಆರ್ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿಯಬೇಕೆಂದು ಬಯಸಿದ್ದಾರೆ.
ನಾನು ಶುಬ್ಮನ್ ಗಿಲ್ ನೈಟ್ ರೈಡರ್ಸ್ ಪರ ಆರಂಭಿಕರಾಗಿ ಬ್ಯಾಟಿಂಗ್ ಆರಂಭಿಸಬೇಕೆಂದು ಬಯಸಿದ್ದೇನೆ. ಇದೀಗ ಅದಕ್ಕೆ ಅವಕಾಶ ಬಂದಿದೆ. ಕೆಕೆಆರ್ಗೂ ಕೂಡ ಅವರನ್ನು ಟಾಪ್ ಆರ್ಡರ್ನಲ್ಲಿ ಆಡಿಸುವುದಕ್ಕೆ ಇದು ಸರಿಯಾದ ಸಮಯ ಎಂದು ಅವರು ತಿಳಿಸಿದ್ದಾರೆ.
ಕ್ರಿಸ್ ಲಿನ್ ಹಾಗೂ ರಾಬಿನ್ ಉತ್ತಪ್ಪ ಕೆಕೆಆರ್ ತಂಡದಲ್ಲಿ ಇಲ್ಲದಿರುವುದರಿಂದ ಯುಎಇನಲ್ಲಿ ಗಿಲ್ ಆರಂಭಿಕನಾಗಿ ಕಣಕ್ಕಿಳಿಯಲು ಸೂಕ್ತವಾದ ವ್ಯಕ್ತಿ ಎಂದು ಜೋನ್ಸ್ ಹೇಳಿದ್ದಾರೆ.
ಜೋನ್ಸ್ ಮತ್ತೊಬ್ಬ ಭಾರತೀಯ ಯುವ ಆಟಗಾರ ರಿಷಭ್ ಪಂತ್ ಡೆಲ್ಲಿ ಪರ ಯಾವ ರೀತಿ ಬ್ಯಾಟಿಂಗ್ ಆಡುತ್ತಾರೆ ಎಂಬುದನ್ನು ಕಾತುರದಿಂದ ಕಾಯುತ್ತಿರುವುದಾಗಿ ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ನಾನು ರಿಷಭ್ ಪಂತ್ ಆಟವನ್ನು ನೋಡಲು ಕಾಯುತ್ತಿದ್ದೇನೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಏಳು ಬೀಳುಗಳನ್ನು ಕಾಣುತ್ತಿದ್ದಾರೆ. ಅವರು ಧೋನಿ ಸ್ಥಾನ ತುಂಬಲು ಇರುವ ಒತ್ತಡವನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಅಗಿದೆ ಎಂದು ಅವರು ಹೇಳಿದ್ದಾರೆ.