ETV Bharat / sports

ಬೆರಳಿಗೆ ಗಂಭೀರ ಗಾಯ: 13ನೇ ಆವೃತ್ತಿಯ ಐಪಿಎಲ್​ನಿಂದ ಹೊರಬಿದ್ದ ಅಮಿತ್​ ಮಿಶ್ರಾ

ಎಎನ್​ಐ ಜೊತೆ ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಅಧಿಕಾರಿ, ಅಮಿತ್​ ಮಿಶ್ರಾ ಅವರಿಗೆ ಬೆರಳಿನ ನರಕ್ಕೆ ಪೆಟ್ಟು ಬಿದ್ದಿರುವುದು ಖಚಿತವಾಗಿದೆ ಎಂದಿದ್ದಾರೆ.

13ನೇ ಆವೃತ್ತಿಯ ಐಪಿಎಲ್​ನಿಂದ ಹೊರಬಿದ್ದ ಅಮಿತ್​ ಮಿಶ್ರಾ

author img

By

Published : Oct 5, 2020, 4:55 PM IST

ದುಬೈ: ಡೆಲ್ಲಿ ತಂಡದ ಮಂಚೂಣಿ ಬೌಲರ್​ ಅಮಿತ್​ ಮಿಶ್ರಾ 13ನೇ ಆವೃತ್ತಿಯಿಂದ ಹೊರಬಿದ್ದಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಮಿಶ್ರಾ ಕೇವಲ 2 ಓವರ್​​ ಮಾತ್ರ ಬೌಲಿಂಗ್ ಮಾಡಿದ್ದರು.

ಕೆಕೆಆರ್​ ವಿರುದ್ಧ ಶನಿವಾರ ನಡೆದಿದ್ದ ಪಂದ್ಯದಲ್ಲಿ ಲೆಗ್​ ಸ್ಪಿನ್ನರ್​ ಅಮಿತ್ ಮಿಶ್ರಾಗೆ ಚೆಂಡನ್ನು ತಡೆಯುವ ವೇಳೆ ಗಂಭೀರ ಗಾಯವಾಗಿತ್ತು.

ಎಎನ್​ಐ ಜೊತೆ ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಅಧಿಕಾರಿ ಮಾತನಾಡಿದ್ದು , ಅಮಿತ್​ ಮಿಶ್ರಾ ಅವರಿಗೆ ಬೆರಳಿನ ನರಕ್ಕೆ ಪೆಟ್ಟು ಬಿದ್ದಿರುವುದು ಖಚಿತವಾಗಿದೆ ಎಂದಿದ್ದಾರೆ.

ಮಿಶ್ರಾ ವೈದ್ಯಕೀಯ ವರದಿ ಬಂದಿದೆ. ಅದು ತಂಡಕ್ಕೆ ಕೆಟ್ಟ ಸುದ್ದಿಯಾಗಿದೆ. ಅವರು ಈ ಆವೃತ್ತಿಯ ಮುಂದಿನ ಪಂದ್ಯಗಳಿಗೆ ಲಭ್ಯರಿರುವುದಿಲ್ಲ. ಅವರ ಬದಲಿ ಆಟಗಾರನಿಗಾಗಿ ನಾವು ಎದುರು ನೋಡುತ್ತಿದ್ದೇವೆ. ಆದರೆ ಕೆಟ್ಟ ವಿಷಯವೆಂದರೆ ಅವರು ಉತ್ತಮ ಲಯದಲ್ಲಿದ್ದರು, ನಿಜವಾಗಿಯೂ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದರು. ಯುಎಇ ವಾತಾವರಣದಲ್ಲಿ ಅವರ ಅನುಭವ ತಂಡದಲ್ಲಿ ಪ್ರಮುಖವಾಗಿತ್ತು. ಆದರೂ ತಂಡದಲ್ಲಿ ಯುವ ಸ್ಪಿನ್ನರ್​ಗಳಿರುವುದೇ ನಮಗೆ ಸಮಾಧಾನ ಎಂದಿದ್ದಾರೆ.

ವೇಗದ ಬೌಲರ್​ಗಳೇ ಬೌಲಿಂಗ್ ಮಾಡಲು ಹಿಂಜರಿಯುತ್ತಿದ್ದ ಶಾರ್ಜಾದಂಥ ಮೈದಾನದಲ್ಲಿ ಮಿಶ್ರಾ ಉತ್ತಮ ರಿದಮ್ ಕಂಡುಕೊಂಡಿದ್ದರು. ಅವರು ಚಿಕ್ಕ ಕ್ರೀಡಾಂಗಣದ ಹೊರತಾಗಿಯೂ ಶುಬ್ಮನ್ ಗಿಲ್​ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದರು. ಇದೀಗ ಅವರ ಅನುಪಸ್ಥಿತಿ ಖಂಡಿತ ಡೆಲ್ಲಿ ತಂಡಕ್ಕೆ ಕಾಡಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.