ETV Bharat / sports

ಮೊದಲ ಮೂರು ಪಂದ್ಯಗಳಲ್ಲಿನ ವೈಫಲ್ಯಕ್ಕೆ ಕಾರಣ ಬಹಿರಂಗಪಡಿಸಿದ ಜಸ್ಪ್ರೀತ್​ ಬುಮ್ರಾ - MI vs SRH\

ವೈಫಲ್ಯದ ನಂತರ ಬುಮ್ರಾ ಒದ್ದೆ ಚೆಂಡಿನಲ್ಲೇ ಅಭ್ಯಾಸ ಮಾಡಿ ಕೊನೆಗೂ ಲಯ ಕಂಡುಕೊಂಡಿದ್ದಾರೆ. ಈಗಾಗಲೇ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ರಬಾಡ(25) ನಂತರದ ಸ್ಥಾನದಲ್ಲಿದ್ದಾರೆ. ಗುರುವಾರ ಡೆಲ್ಲಿ ತಂಡದ ವಿರುದ್ಧ ಮುಂಬೈ ಕ್ವಾಲಿಫೈಯರ್ ಪಂದ್ಯವನ್ನಾಡಲಿದೆ.

ಜಸ್ಪ್ರೀತ್​ ಬುಮ್ರಾ
ಜಸ್ಪ್ರೀತ್​ ಬುಮ್ರಾ
author img

By

Published : Nov 4, 2020, 6:05 PM IST

ದುಬೈ: ಮುಂಬೈ ಇಂಡಿಯನ್ಸ್​ ತಂಡ ಕೊನೆಯ ಲೀಗ್​ ಪಂದ್ಯವನ್ನು ಸೋತರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಪ್ಲೇ ಆಫ್ ಪ್ರವೇಶಿಸಿದೆ. ಈ ಸರಣಿಯಲ್ಲಿ ಮುಂಬೈ ಯಶಸ್ಸಿಗೆ ಬುಮ್ರಾ ಪಾಲು ಸಾಕಷ್ಟಿದೆ. ಅವರು ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ತಂಡ ಬೇಕೆಂದಾಗಲೆಲ್ಲಾ ವಿಕೆಟ್ ಪಡೆದಿದ್ದಾರೆ.

ಟೂರ್ನಿಯಲ್ಲಿ ಆಡಿರುವ 13 ಪಂದ್ಯಗಳಲ್ಲಿ 23 ವಿಕೆಟ್​ ಪಡೆದು ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬುಮ್ರಾ, ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಅವರು ಮೊದಲ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ 43ಕ್ಕೆ 1, 2ನೇ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ 32 ಹಾಗೂ ಆರ್​ಸಿಬಿ ವಿರುದ್ಧ 42 ರನ್​ ನೀಡಿ ದುಬಾರಿಯಾಗಿದ್ದರು. ಆದರೆ ನಾಲ್ಕನೇ ಪಂದ್ಯದಲ್ಲಿ ಗ್ರಿಪ್ ಕಂಡುಕೊಂಡ ವಿಶ್ವದ ಟಾಪ್​ ಬೌಲರ್​ಗಳಲ್ಲಿ ಒಬ್ಬರಾದ ಬುಮ್ರಾ ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ.

ಟೂರ್ನಿಯ ಮೊದಲಾರ್ಧದ ವೈಫಲ್ಯದ ಬಗ್ಗೆ ಮಾತನಾಡಿರುವ ಬುಮ್ರಾ, ಕೆಲವೊಮ್ಮೆ ಹವಾಮಾನ ಪರಿಸ್ಥಿತಿಗಳು ಯೋಜನೆಯಂತೆ ಬೌಲಿಂಗ್ ಮಾಡಲು ಪರಿಣಾಮ ಬೀರುತ್ತವೆ. ಮೊದಲಾರ್ಧದಲ್ಲಿ ತೀವ್ರವಾದ ಬೆವರುವಿಕೆ ಕಂಡುಬಂದಿದ್ದರಿಂದ ಯಾರ್ಕರ್​ಗಳನ್ನು ಪ್ರಯೋಗಿಸುವುದು ಕಷ್ಟವಾಗುತ್ತಿತ್ತು. ಆದ್ದರಿಂದ ಯಾರ್ಕರ್​ ಬಿಟ್ಟು ಇತರೆ ಎಸೆತಗಳ ಹಿಂದೆ ಬೀಳುವುದು ಅನಿವಾರ್ಯವಾಗಿತ್ತು ಎಂದು ಬುಮ್ರಾ ತಮ್ಮ ವೈಫಲ್ಯದ ಹಿಂದಿನ ಕಾರಣ ಬಹಿರಂಗಪಡಿಸಿದ್ದಾರೆ.

ಜಸ್ಪ್ರೀತ್​ ಬುಮ್ರಾ
ಜಸ್ಪ್ರೀತ್​ ಬುಮ್ರಾ

ಆದರೆ ವಾತಾವರಣ ಇದೀಗ ಬದಲಾಗಿದೆ. ಆದರೆ ನಾವು ಇಲ್ಲಿಗೆ ಆಗಮಿಸಿದ್ದ ವೇಳೆ ತುಂಬಾ ಉಷ್ಣಾಂಶವಿರುತ್ತಿತ್ತು. ಹಾಗಾಗಿ ಹೆಚ್ಚು ಬೆವರುವಿಕೆ ಕಂಡುಬರುತ್ತಿತ್ತು. ಆ ಸಮಯದಲ್ಲಿ ಬೌಲಿಂಗ್ ಮಾಡಿ ವಿಕೆಟ್​ ಪಡೆಯುವುದು ಬೆಕ್ಕು-ಇಲಿಯ ಆಟದಂತಿತ್ತು. ಹಾಗಾಗಿ ಸಾಕಷ್ಟು ಅಭ್ಯಾಸ ಮಾಡಿ, ಬೇರೆ ಆಯ್ಕೆಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ಬುಮ್ರಾ ಸಂದರ್ಶನವೊಂದರಲ್ಲಿ ತಮ್ಮ ಆರಂಭಿಕ ಸಂಕಷ್ಟಗಳನ್ನು ಹೇಳಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.