ಹೈದರಾಬಾದ್: ಮುಂಬರುವ ಮಿಲಿಯನ್ ಡಾಲರ್ ಟೂರ್ನಿಗೆ ಎಲ್ಲ ಫ್ರಾಂಚೈಸಿಗಳು ಸಿದ್ಧತೆ ನಡೆಸುತ್ತಿವೆ. ಹರಾಜಿಗೂ ಮುನ್ನ ತಂಡಗಳು ಇಂದು ಕೆಲ ಆಟಗಾರರನ್ನು ಕೈಬಿಟ್ಟಿವೆ.
ಡಿಸೆಂಬರ್ 19ರಂದು ಕೋಲ್ಕತಾದಲ್ಲಿ ಆಟಗಾರರ ಹರಾಜು ನಡೆಯಲಿದೆ. ಈ ನಿಟ್ಟಿನಲ್ಲಿ ಕೆಲ ನಂಬಿಕಸ್ಥ ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಂಡಿರುವ ಫ್ರಾಂಚೈಸಿಗಳು ಹಲವರನ್ನ ಕೈಬಿಟ್ಟಿವೆ.
ಐಪಿಎಲ್ 2020.. ಸ್ಟಾರ್ ಆಟಗಾರರನ್ನೇ ಕೈಬಿಟ್ಟ ಐಪಿಎಲ್ ಫ್ರಾಂಚೈಸಿಗಳು.. ಲಿಸ್ಟ್ನಲ್ಲಿ ಯಾರ್ಯಾರಿದ್ದಾರೆ?
ಐಪಿಎಲ್ ಹರಾಜಿಗೂ ಮುನ್ನ ನಡೆದ ಈ ಪ್ರಕ್ರಿಯೆಯ ಬಳಿಕ ಕಿಂಗ್ಸ್ ಇಲೆವೆನ್ ಪಂಜಾಬ್ ಬಳಿ ಅತಿಹೆಚ್ಚು(₹42.70 ಕೋಟಿ) ಉಳಿದಿದ್ದರೆ ಮುಂಬೈ ಇಂಡಿಯನ್ಸ್ ಬಳಿ ಕನಿಷ್ಠ(₹13.05 ಕೋಟಿ) ಹಣ ಉಳಿದುಕೊಂಡಿದೆ. ಆದರೆ, ಗರಿಷ್ಠ ಖರೀದಿ ವಿಚಾರದಲ್ಲಿ ಆರ್ಸಿಬಿ(12) ಅಗ್ರಸ್ಥಾನ ಪಡೆದಿದ್ದರೆ ಚೆನ್ನೈ ಕನಿಷ್ಠ(5) ಹೊಂದಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ..
ತಂಡ | ಬಾಕಿಯಿರುವ ಹಣ | ಗರಿಷ್ಠ ಖರೀದಿ | ವಿದೇಶಿ ಖರೀದಿ |
ಕಿಂಗ್ಸ್ ಇಲೆವೆನ್ ಪಂಜಾಬ್ | ₹42.70 | 9 | 4 |
ಕೋಲ್ಕತ್ತಾ ನೈಟ್ ರೈಡರ್ಸ್ | ₹35.65 | 11 | 4 |
ರಾಜಸ್ಥಾನ ರಾಯಲ್ಸ್ | ₹28.90 | 11 | 4 |
ಡೆಲ್ಲಿ ಕ್ಯಾಪಿಟಲ್ಸ್ | ₹27.85 | 11 | 5 |
ರಾಯಲ್ ಚಾಲೆಂಜರ್ಸ್ ಬೆಂಗಳೂರು | ₹27.90 | 12 | 6 |
ಸನ್ ರೈಸರ್ಸ್ ಹೈದರಾಬಾದ್ | ₹17.00 | 7 | 2 |
ಚೆನ್ನೈ ಸೂಪರ್ ಕಿಂಗ್ಸ್ | ₹14.60 | 5 | 2 |
ಮುಂಬೈ ಇಂಡಿಯನ್ಸ್ | ₹13.05 | 7 | 2 |