ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ 2020ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ತಂಡ ಗೆಲುವು ದಾಖಲು ಮಾಡುತ್ತಿದ್ದಂತೆ ಈ ರೆಕಾರ್ಡ್ ನಿರ್ಮಾಣ ಮಾಡಿದ್ದಾರೆ.
-
100 wins as @ChennaiIPL Captain for @msdhoni 👏#Dream11IPL #MIvCSK pic.twitter.com/jZ91EcCJyF
— IndianPremierLeague (@IPL) September 19, 2020 " class="align-text-top noRightClick twitterSection" data="
">100 wins as @ChennaiIPL Captain for @msdhoni 👏#Dream11IPL #MIvCSK pic.twitter.com/jZ91EcCJyF
— IndianPremierLeague (@IPL) September 19, 2020100 wins as @ChennaiIPL Captain for @msdhoni 👏#Dream11IPL #MIvCSK pic.twitter.com/jZ91EcCJyF
— IndianPremierLeague (@IPL) September 19, 2020
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಂಡ ನಂತರ ಧೋನಿ ಗೆದ್ದ 100ನೇ ಪಂದ್ಯ ಇದಾಗಿದೆ. ಅಬುಧಾಬಿಯ ಶೈಕ್ ಅಲ್ ಶೇಖ್ ಝಹೇದ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಪ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಿತು.
ಮೊದಲ ಪಂದ್ಯ ಸೋತು ದಾಖಲೆ ಬರೆದ ರೋಹಿತ್ ಪಡೆ... ಯಾವುದು ಈ ರೆಕಾರ್ಡ್!?
ಮುಂಬೈ ನೀಡಿದ್ದ 163ರನ್ಗಳ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಅಂಬಾಟಿ ರಾಯುಡು 71 ಹಾಗೂ ಡು ಪ್ಲೆಸಿಸ್ ಅಜೇಯ 58ರನ್ಗಳ ನೆರವಿನಿಂದ 19.2 ಓವರ್ಗಳಲ್ಲಿ 166ರನ್ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು. ವಿಶೇಷವೆಂದರೆ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಧೋನಿ ನಿವೃತ್ತಿ ಘೋಷಣೆ ಮಾಡಿದ್ದಾರೆ.
100 ಕ್ಯಾಚ್ ಹಿಡಿದ ದಾಖಲೆ
-
Milestone Alert!
— IndianPremierLeague (@IPL) September 19, 2020 " class="align-text-top noRightClick twitterSection" data="
💯 catches for @msdhoni in the IPL 👏#Dream11IPL #MIvCSK pic.twitter.com/C1gl2i9jVy
">Milestone Alert!
— IndianPremierLeague (@IPL) September 19, 2020
💯 catches for @msdhoni in the IPL 👏#Dream11IPL #MIvCSK pic.twitter.com/C1gl2i9jVyMilestone Alert!
— IndianPremierLeague (@IPL) September 19, 2020
💯 catches for @msdhoni in the IPL 👏#Dream11IPL #MIvCSK pic.twitter.com/C1gl2i9jVy
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಹಾಗೂ ವಿಕೆಟ್ ಕೀಪರ್ ಆಗಿರುವ ಧೋನಿ ಐಪಿಎಲ್ನಲ್ಲೇ 100 ಕ್ಯಾಚ್ ಪಡೆದಿರುವ ಸಾಧನೆ ಸಹ ನಿರ್ಮಿಸಿದ್ದಾರೆ.
ಈ ಪಂದ್ಯದಲ್ಲಿ ಮುಂಬೈ ತಂಡದ ಮೇಲೆ ಸವಾರಿ ನಡೆಸಿದ ಚೆನ್ನೈ ತಂಡ 5 ವಿಕೆಟ್ಗಳ ಗೆಲುವು ದಾಖಲು ಮಾಡಿ ಆರಂಭಿಕ ಪಂದ್ಯದಲ್ಲೇ ಖಾತೆ ತೆರೆದಿದೆ. ಟೀಂ ಇಂಡಿಯಾ ಪರ ಅವರು 2019ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇದಾದ 14 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಅವರು ಮೈದಾನದಲ್ಲಿ ಕಾಣಿಸಿಕೊಂಡರು.