ETV Bharat / sports

ಸೋತು ಸುಣ್ಣವಾದ ಆರ್​ಸಿಬಿಗೆ ಕೋಲ್ಕತಾ ಚಾಲೆಂಜ್​ : ಇವತ್ತಾದರೂ ಗೆಲ್ಲುವುದೇ ಕೊಹ್ಲಿ ಪಡೆ !

ಬ್ಯಾಟಿಂಗ್​ ಹಾಗೂ ಬೌಲಿಂಗ್​ ವಿಭಾಗದಲ್ಲಿ ಸಂಪೂರ್ಣವಾಗಿ ಕುಗ್ಗಿಹೋಗಿರುವ ಆರ್​ಸಿಬಿ ಇಂದಿನ ಪಂದ್ಯದಲ್ಲಿ ಮಹತ್ವದ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ.

ಆರ್​​ಸಿಬಿ ಪ್ಲೇಯರ್ಸ್​​
author img

By

Published : Apr 5, 2019, 5:08 PM IST

ಬೆಂಗಳೂರು : ಪ್ರಸಕ್ತ ಸಾಲಿನ ಐಪಿಎಲ್​​​​ ಲೀಗ್​ನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಸೋತು ಸುಣ್ಣವಾಗಿರುವ ಆರ್​ಸಿಬಿ ಇಂದು ಕೋಲ್ಕತಾ ವಿರುದ್ಧ ಸೆಣಸಾಟ ನಡೆಸಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ರಾತ್ರಿ 8ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ.

ಬ್ಯಾಟಿಂಗ್​ ಹಾಗೂ ಬೌಲಿಂಗ್​ ವಿಭಾಗದಲ್ಲಿ ಸಂಪೂರ್ಣವಾಗಿ ಕುಗ್ಗಿಹೋಗಿರುವ ಆರ್​ಸಿಬಿ ಇಂದಿನ ಪಂದ್ಯದಲ್ಲಿ ಮಹತ್ವದ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕ್ಯಾಪ್ಟನ್​ ಕೊಹ್ಲಿ ಮುನ್ಸೂಚನೆ ಸಹ ನೀಡಿದ್ದಾರೆ. ಇದರ ಮಧ್ಯೆ ಬೌಲಿಂಗ್ ವಿಭಾಗ ಕೂಡ ಸುಧಾರಿಸಿಕೊಳ್ಳಬೇಕಾಗಿದ್ದು, ಇಂದು ಕೆಲ ಹೊಸ ಮುಖಗಳು ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ. ಪ್ರಮುಖವಾಗಿ ಸತತವಾಗಿ ವೈಫಲ್ಯ ಅನುಭವಿಸುತ್ತಿರುವ ಮೊಯಿನ್​ ಅಲಿ, ಶಿಮ್ರಾನ್​ ಸ್ಥಾನಕ್ಕೆ ಬೇರೆ ಆಟಗಾರರು ಚಾನ್ಸ್​ ಪಡೆಯುವ ಸಾಧ್ಯತೆ ಇದೆ. ಇನ್ನು ತವರು ನೆಲದಲ್ಲಿ ಆರ್​ಸಿಬಿಗೆ ಇಂದು ಎರಡನೇ ಪಂದ್ಯವಾಗಿದೆ.

ಇತ್ತ ಕೋಲ್ಕತಾ ನೈಟ್​ ರೈಡರ್ಸ್​ ತಂಡ ಆಡಿರುವ ಮೂರು ಪಂದ್ಯಗಳಲ್ಲಿ 2 ಪಂದ್ಯ ಗೆದ್ದು, ಒಂದು ಪಂದ್ಯ ಸೋತು ಒಟ್ಟು ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಕಠಿಣ ಸವಾಲು ನೀಡಲು ಸಜ್ಜಾಗಿದೆ. ಪ್ರಮುಖವಾಗಿ ತಂಡದಲ್ಲಿ ಅಬ್ಬರಿಸಲು ಸುನೀಲ್​ ನರೈನ್​, ಕ್ರಿಸ್​ ಲೀನ್​, ರಾಬಿನ್​ ಉತ್ತಪ್ಪ, ನಿತೀಶ್​ ರಾಣಾ ಹಾಗೂ ದಿನೇಶ್​ ಕಾರ್ತಿಕ್​ ಸಜ್ಜಾಗಿದ್ದಾರೆ.

ಇಂದಿನ ಪಂದ್ಯ ಆರ್‌ಸಿಬಿ v/s ಕೆಕೆಆರ್‌

ಪಂದ್ಯ ಆರಂಭ : ರಾತ್ರಿ 8ಕ್ಕೆ
ಸ್ಥಳ: ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ನೇರ ಪ್ರಸಾರ : ಸ್ಟಾರ್‌ ಸ್ಪೋರ್ಟ್ಸ್.

ಮುಖಾಮುಖಿ : 22
ಬೆಂಗಳೂರು ಗೆಲುವು : 09
ಕೋಲ್ಕತಾ ಜಯ: 13

ಆರ್​ಸಿಬಿ ಸಂಭವನೀಯ ತಂಡ : ಪಾರ್ಥಿವ್​ ಪಟೇಲ್​(ವಿಕೆಟ್‌ ಕೀಪರ್‌), ವಾಷಿಂಗ್ಟನ್​ ಸುಂದರ್​, ವಿರಾಟ್​​ ಕೊಹ್ಲಿ(ಕ್ಯಾಪ್ಟನ್​), ಎಬಿಡಿ ವಿಲಿಯರ್ಸ್​​, ಶಿಮ್ರಾನ್​ ಹೆಟ್ಮೇರ್​,ಸ್ಟೋನಿಸ್​, ಆಕಾಶ್​ದೀಪ್​ ನಾಥ್​, ಉಮೇಶ್​ ಯಾದವ್​, ಸೌಥಿ, ಮೊಹಮ್ಮದ್​ ಸಿರಾಜ್​, ಯಜುವೇಂದ್ರ ಚಹಾಲ್​.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.