ದುಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೂಪರ್ ಓವರ್ನಲ್ಲಿ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆ್ಯರೋನ್ ಫಿಂಚ್ (52), ದೇವದತ್ ಪಡಿಕ್ಕಲ್(55) ಹಾಗೂ ಎಬಿ ಡಿ ವಿಲಿಯರ್ಸ್(54) ಹಾಗೂ ಶಿವಂ ದುಬೆ(27) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ 3 ವಿಕೆಟ್ ಕಳೆದುಕೊಂಡು 201 ರನ್ಗಳಿಸಿತ್ತು. ಮುಂಬೈ ಕೂಡ 20 ಓವರ್ಗಳಲ್ಲಿ 201 ರನ್ಗಳಿಸಿ ಟೈ ಸಾಧಿಸಿತು. ಆದರೆ ಸೂಪರ್ ಓವರ್ನಲ್ಲಿ ಆರ್ಸಿಬಿ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
-
AB de Villiers is the Man of the Match for his match-winning knock of 55* off 24 deliveries.#Dream11IPL #RCBvMI pic.twitter.com/oK3UxE5iBs
— IndianPremierLeague (@IPL) September 28, 2020 " class="align-text-top noRightClick twitterSection" data="
">AB de Villiers is the Man of the Match for his match-winning knock of 55* off 24 deliveries.#Dream11IPL #RCBvMI pic.twitter.com/oK3UxE5iBs
— IndianPremierLeague (@IPL) September 28, 2020AB de Villiers is the Man of the Match for his match-winning knock of 55* off 24 deliveries.#Dream11IPL #RCBvMI pic.twitter.com/oK3UxE5iBs
— IndianPremierLeague (@IPL) September 28, 2020
ಬೆಂಗಳೂರು ನೀಡಿದ 202 ರನ್ಗಳ ಬೆನ್ನತ್ತಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೇವಲ 39 ರನ್ಗಳಿಸುವಷ್ಟರಲ್ಲಿ ಪ್ರಮುಖ ಮೂರು ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡಿತು. ನಾಯಕ ರೋಹಿತ್ ಶರ್ಮಾ(8) 2ನೇ ಓವರ್ನಲ್ಲೇ ವಾಷಿಂಗ್ಟನ್ ಸುಂದರ್ ಬೌಲಿಂಗ್ನಲ್ಲಿ ಬದಲಿ ಫೀಲ್ಡರ್ ಪವನ್ ನೇಗಿಗೆ ಕ್ಯಾಚ್ ನೀಡಿ ಔಟಾದರು.
ರೋಹಿತ್ ಶರ್ಮಾ ನಂತರ ಬಂದ ಸೂರ್ಯಕುಮಾರ್ ಯಾದವ್ ಖಾತೆ ತೆರೆಯುವ ಮುನ್ನವೇ ಉದಾನ ಬೌಲಿಂಗ್ನಲ್ಲಿ ವಿಲಿಯರ್ಸ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಇವರ ಬೆನ್ನಲ್ಲೇ 14 ರನ್ಗಳಿಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕ್ವಿಂಟನ್ ಡಿ ಕಾಕ್ ಕೂಡ ಚಹಾಲ್ ಬೌಲಿಂಗ್ನಲ್ಲಿ ನೇಗಿಗೆ ಕ್ಯಾಚ್ ನೀಡಿದರು.
-
That brilliant innings by Ishan Kishan comes to an end on 99.
— IndianPremierLeague (@IPL) September 28, 2020 " class="align-text-top noRightClick twitterSection" data="
AND it's a SUPER OVER!!!! pic.twitter.com/y0K7mTrqO7
">That brilliant innings by Ishan Kishan comes to an end on 99.
— IndianPremierLeague (@IPL) September 28, 2020
AND it's a SUPER OVER!!!! pic.twitter.com/y0K7mTrqO7That brilliant innings by Ishan Kishan comes to an end on 99.
— IndianPremierLeague (@IPL) September 28, 2020
AND it's a SUPER OVER!!!! pic.twitter.com/y0K7mTrqO7
ಆದರೆ ಇಂದೇ ಮೊದಲ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಇಶಾನ್ ಕಿಶನ್ , ಹಾರ್ದಿಕ್ ಪಾಂಡ್ಯ(15) ಜೊತೆಗೂಡಿ 4 ವಿಕೆಟ್ಗೆ 39 ರನ್ ಜೊತೆಯಾಟ ನೀಡಿ ಚೇತರಿಕೆ ನೀಡಲು ಪ್ರಯತ್ನಿಸಿದರು. ಆದರೆ ಪಾಂಡ್ಯ ಕೇವಲ 15 ರನ್ಗಳಿಗೆ ಜಂಪಾ ಓವರ್ನಲ್ಲಿ ನೇಗಿ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.
11.2 ಓವರ್ಗಳಲ್ಲಿ 78 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿದ್ದ ಮುಂಬೈ ತಂಡಕ್ಕೆ ಕಿಶನ್ ಹಾಗೂ ಪೋಲಾರ್ಡ್ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಈ ಜೋಡಿ 52 ಎಸೆತಗಳಲ್ಲಿ119 ರನ್ಗಳ ಸೂರೆಗೈದಿತು.
-
#RCB need 8 runs to win.#MI have 7 to defend.
— IndianPremierLeague (@IPL) September 28, 2020 " class="align-text-top noRightClick twitterSection" data="
Who are you rooting for?#Dream11IPL #RCBvMI pic.twitter.com/tlqcLbww7S
">#RCB need 8 runs to win.#MI have 7 to defend.
— IndianPremierLeague (@IPL) September 28, 2020
Who are you rooting for?#Dream11IPL #RCBvMI pic.twitter.com/tlqcLbww7S#RCB need 8 runs to win.#MI have 7 to defend.
— IndianPremierLeague (@IPL) September 28, 2020
Who are you rooting for?#Dream11IPL #RCBvMI pic.twitter.com/tlqcLbww7S
ಮುಂಬೈ ಗೆಲುವಿಗೆ 24 ಎಸೆತಗಳಲ್ಲಿ 80 ರನ್ಗಳ ಅವಶ್ಯಕತೆಯಿತ್ತು . ಜಂಪಾ ಮತ್ತು ಚಹಾಲ್ ಎಸೆದ 17 ಮತ್ತು 18ನೇ ಓವರ್ಗಳಲ್ಲಿ ಈ ಜೋಡಿ 49 ರನ್ ಕಲೆಹಾಕುವ ಮೂಲಕ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದಿತು. ಮತ್ತೆ 19ನೇ ಓವರ್ನಲ್ಲಿ12 ರನ್ ಬಂದಿತು.
ಕೊನೆಯ ಓವರ್ನಲ್ಲಿ ಮುಂಬೈ ತಂಡಕ್ಕೆ ಗೆಲ್ಲಲು 19 ರನ್ಗಳ ಅವಶ್ಯಕತೆಯಿತ್ತು. ಉದಾನ ಎಸೆದ ಮೊದಲೆರಡು ಎಸೆತಗಳಲ್ಲಿ 2 ರನ್ ಬಂದಿತು. ನಂತರ ಇಶಾನ್ ಕಿಶನ್ ಸತತ 2 ಸಿಕ್ಸರ್ ಸಿಡಿಸಿ 3ನೇ ಎಸೆತದಲ್ಲಿ ಔಟಾದರೆ, ಕೊನೆಯ ಎಸೆತವನ್ನು ಪೊಲಾರ್ಡ್ ಬೌಂಡರಿಗಟ್ಟಿ, ಪಂದ್ಯವನ್ನು ಟೈ ಆಗುವಂತೆ ಮಾಡಿದರು.
ಅದ್ಭುತ ಇನ್ನಿಂಗ್ಸ್ ಕಟ್ಟಿದ ಇಶಾನ್ ಕಿಶನ್ 58 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 99 ರನ್ಗಳಿಸಿ ಒಂದು ರನ್ನಿಂದ ಶತಕ ವಂಚಿತರಾದರು. ಪೊಲಾರ್ಡ್ ಕೇವಲ 24 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 60 ರನ್ಗಳಿಸಿ ಪಂದ್ಯ ಟೈ ಆಗುವಂತೆ ಮಾಡಿದರು.
ಸೂಪರ್ ಓವರ್ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ ನವದೀಪ್ ಸೈನಿ ಕೇವಲ 7 ರನ್ ಬಿಟ್ಟುಕೊಟ್ಟು ಪೊಲಾರ್ಡ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಸೂಪರ್ ಓವರ್ನಲ್ಲಿ ಕೊಹ್ಲಿ ಹಾಗೂ ಎಬಿಡಿ ಜೋಡಿ 8 ರನ್ಗಳನ್ನು ಯಶಸ್ವಿಯಾಗಿ ಬಾರಿಸಿ ತಂಡಕ್ಕೆ ಸೂಪರ್ ಜಯ ತಂದುಕೊಟ್ಟರು.
ಕೇವಲ 24 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 55 ರನ್ಗಳಿಸಿದ ಎಬಿಡಿ ವಿಲಿಯರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.