ETV Bharat / sports

ಐಪಿಎಲ್​ 2020: ಇಶಾಂತ್​ಗೆ ಗಾಯ, 2ನೇ ಪಂದ್ಯಕ್ಕೂ ಮುನ್ನವೇ ಡೆಲ್ಲಿಗೆ ಆಘಾತ - ​ DC vs KXIP live score

ಮಾಧ್ಯಮದೊಂದಿಗೆ ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್​ ಸದಸ್ಯರೊಬ್ಬರು ಇಶಾಂತ್​ ಗಾಯಗೊಂಡಿದ್ದು, ಭಾನುವಾರದ ಪಂದ್ಯಕ್ಕೂ ಮುನ್ನ ಅವರ ಲಭ್ಯತೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಐಪಿಎಲ್​ 2020
ಇಶಾಂತ್​ ಶರ್ಮಾ
author img

By

Published : Sep 20, 2020, 4:11 PM IST

ದುಬೈ: ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ವಿರುದ್ಧ ಇಂದು ಕಣಕ್ಕಿಳಿಯಬೇಕಿದ್ದ ಡೆಲ್ಲಿ ಕ್ಯಾಪಿಟಲ್​ ತಂಡಕ್ಕೆ ಸ್ಟಾರ್​ ವೇಗಿ ಇಶಾಂತ್​ ಶರ್ಮಾ ಗಾಯಗೊಂಡಿರುವುದು ಆಘಾತ ಉಂಟುಮಾಡಿದೆ.

ಶನಿವಾರ ತರಬೇತಿ ಸಮಯದಲ್ಲಿ ಇಶಾಂತ್ ಶರ್ಮಾ ಗಾಯಗೊಂಡಿದ್ದಾರೆ. ಡೆಲ್ಲಿ ತಂಡದ ವೇಗಿ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್​ ಸದಸ್ಯರೊಬ್ಬರು ಇಶಾಂತ್​ ಗಾಯಗೊಂಡಿದ್ದು, ಭಾನುವಾರದ ಪಂದ್ಯಕ್ಕೂ ಮುನ್ನ ಅವರ ಲಭ್ಯತೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಐಪಿಎಲ್​ 2020
ಇಶಾಂತ್​ ಶರ್ಮಾ

"ನಿನ್ನೆ ತರಬೇತಿ ನಡೆಸುವಾಗ ಅವರು ಗಾಯಗೊಂಡಿದ್ದಾರೆ. ಆದರೆ ಗಾಯ ಹೇಗಿದೆ ಎಂಬುದನ್ನು ನಾವು ನೋಡುತ್ತೇವೆ. ನಾವು ಪಂದ್ಯಕ್ಕೂ ಮುನ್ನ ಅವರ ಸ್ಥಿತಿಯನ್ನು ನೋಡಿ, ಅದರ ಪ್ರಕಾರ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ. ನಾವು ವೈದ್ಯಕೀಯ ತಂಡವನ್ನು ಹೊಂದಿದ್ದು, ಅವರು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ' ಎಂದಿದ್ದಾರೆ.

ಇಶಾಂತ್​ ಶರ್ಮಾ ಜನವರಿಯಲ್ಲಿ ಹಿಮ್ಮಡಿ ಗಾಯದಿಂದ ರಾಷ್ಟ್ರೀಯ ತಂಡದಿಂದ ಹೊರಬಿದ್ದಿದ್ದರು. ನಂತರ ನ್ಯೂಜಿಲ್ಯಾಂಡ್​ ಸರಣಿಗೆ ಫೆಬ್ರವರಿಯಲ್ಲಿ ತಂಡಕ್ಕೆ ಮರಳಿದ್ದರಾದರೂ ಮತ್ತೆ ಅದೇ ಹಿಮ್ಮಡಿ ನೋವಿಗೆ ಒಳಗಾಗಿದ್ದರು.

2019ರ ಹರಾಜಿನಲ್ಲಿ ಡೆಲ್ಲಿ ತಂಡಕ್ಕೆ ಸೇರ್ಪಡೆಗೊಂಡಿದ್ದ ಇಶಾಂತ್​, 13 ಪಂದ್ಯಗಳಿಂದ 7.58 ಎಕಾನಮಿಯಲ್ಲಿ 13 ವಿಕೆಟ್​ ಪಡೆದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.