ನವದೆಹಲಿ: ವೇಗಿ ಜಸ್ಪ್ರೀತ್ ಬುಮ್ರಾ ಭಾರತ ತಂಡದ ಗಾಯದ ಪಟ್ಟಿಗೆ ಸೇರುತ್ತಿದ್ದಂತೆ ಟೀಮ್ ಇಂಡಿಯಾಕ್ಕೆ ದೊಡ್ಡ ಅಘಾತ ಸಂಭವಿಸಿದೆ. ಹೊಟ್ಟೆ ನೋವಿಗೆ ಒಳಗಾಗಿರುವ ಅವರು ಮುಂದಿನ ಟೆಸ್ಟ್ನಿಂದ ಹೊರಬಿದ್ದಿದ್ದಾರೆ.
3ನೇ ಟೆಸ್ಟ್ ಪಂದ್ಯದ ವೇಳೆ ರವೀಂದ್ರ ಜಡೇಜಾ, ಹನುಮ ವಿಹಾರಿ ಹಾಗೂ ರಿಷಭ್ ಪಂತ್ ಕೂಡ ಗಾಯಕ್ಕೊಳಗಾಗಿದ್ದರು. ಒಟ್ಟಾರೆ 10ಕ್ಕೂ ಹೆಚ್ಚು ಅಟಗಾರರು ಟೂರ್ನಿಯಲ್ಲಿ ಗಾಯಗೊಂಡಿದ್ದಾರೆ. ಹೀಗಾಗಿ ಟೂರ್ನಿಯ ಪಂದ್ಯಕ್ಕೆ ತಂಡದಲ್ಲಿ ಉಳಿದಿರುವ ಎಲ್ಲಾ ಆಟಗಾರರನ್ನು ಸೇರಿಸಿ ಒಂದು ತಂಡ ಮಾಡುವಂತಾಗಿದೆ.
-
Itne sab players injured hain , 11 na ho rahe hon toh Australia jaane ko taiyaar hoon, quarantine dekh lenge @BCCI pic.twitter.com/WPTONwUbvj
— Virender Sehwag (@virendersehwag) January 12, 2021 " class="align-text-top noRightClick twitterSection" data="
">Itne sab players injured hain , 11 na ho rahe hon toh Australia jaane ko taiyaar hoon, quarantine dekh lenge @BCCI pic.twitter.com/WPTONwUbvj
— Virender Sehwag (@virendersehwag) January 12, 2021Itne sab players injured hain , 11 na ho rahe hon toh Australia jaane ko taiyaar hoon, quarantine dekh lenge @BCCI pic.twitter.com/WPTONwUbvj
— Virender Sehwag (@virendersehwag) January 12, 2021
ಈ ಕುರಿತು ತಮ್ಮ ಟ್ವೀಟ್ನಲ್ಲಿ ತಮಾಷೆಯಾಗಿ ಫೋಟೋವೊಂದನ್ನು ಶೇರ್ ಮಾಡಿರುವ ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್, ತಾವೇ ಆಸ್ಟ್ರೇಲಿಯಾಕ್ಕೆ ತೆರಳಿ ಭಾರತ ತಂಡದ ಪರ ಆಡಲು ಸಿದ್ಧ ಎಂದಿದ್ದಾರೆ.
"ಈ ಎಲ್ಲಾ ಆಟಗಾರರು ಗಾಯಕ್ಕೆ ಒಳಗಾಗಿದ್ದಾರೆ. ತಂಡದಲ್ಲಿ 11 ಮಂದಿ ಇಲ್ಲದಿದ್ದರೆ ನಾನು ಆಸ್ಟ್ರೇಲಿಯಾಕ್ಕೆ ಹೋಗಲು ಸಿದ್ಧನಿದ್ದೇನೆ. ಕ್ವಾರಂಟೈನ್ ನೋಡಿಕೊಳ್ಳುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಬ್ರಿಸ್ಬೇನ್ನಲ್ಲಿ ಮೂಲಭೂತ ಸೌಲಭ್ಯವಿಲ್ಲದ ಹೋಟೆಲ್: ಸಮಸ್ಯೆ ಬಗೆಹರಿಸಲು ಬಿಸಿಸಿಐ ಮಧ್ಯಪ್ರವೇಶ