ಕ್ರೈಸ್ಟ್ ಚರ್ಚ್: ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ಎಡ ಪಾದದಲ್ಲಿ ಊತ ಕಾಣಿಸಿಕೊಂಡಿರುವ ಹಿನ್ನೆಲೆ ಅಭ್ಯಾಸದಿಂದ ದೂರವಿದ್ದು, ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ನಿಂದ ಹೊರಗುಳಿಯುವ ಸಾಧ್ಯತೆ ಇದೆ.
ಶನಿವಾರದಿಂದ ನ್ಯೂಜಿಲ್ಯಾಂಡ್ ಹಾಗೂ ಭಾರತದ ನಡುವೆ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಇದೀಗ ಪೃಥ್ವಿ ಶಾ ಕಾಲುನೋವಿಗೆ ತುತ್ತಾಗಿರುವುದು ಭಾರತ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.
ಬಿಸಿಸಿಐ ಮೂಲಗಳ ಪ್ರಕಾರ ಶಾ ಗುರುವಾರ ತಮ್ಮ ಕಾಲಿನ ಊತಕ್ಕೆ ಕಾರಣ ತಿಳಿದುಕೊಳ್ಳಲು ರಕ್ತ ಪರೀಕ್ಷೆ ಮಾಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಪರೀಕ್ಷೆಯಲ್ಲಿ ವರದಿ ಪೃಥ್ವಿ ಶಾ ಪರವಾಗಿ ಬಂದರೆ ಶುಕ್ರವಾರ ಆಭ್ಯಾಸಕ್ಕಿಳಿಯಲಿದ್ದಾರೆ. ಆ ವೇಳೆ ಬ್ಯಾಟಿಂಗ್ ನಡೆಸಲು ಪೃಥ್ವಿ ಶಾರಿಂದ ಸಾಧ್ಯವಾಗದಿದ್ದರೆ ಶನಿವಾರ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.
-
An absolutely lush green ground, how beautiful is the Hagley Oval. Our venue for the 2nd and final Test of the series.👌👌#NZvIND pic.twitter.com/x1QsMO8UYo
— BCCI (@BCCI) February 26, 2020 " class="align-text-top noRightClick twitterSection" data="
">An absolutely lush green ground, how beautiful is the Hagley Oval. Our venue for the 2nd and final Test of the series.👌👌#NZvIND pic.twitter.com/x1QsMO8UYo
— BCCI (@BCCI) February 26, 2020An absolutely lush green ground, how beautiful is the Hagley Oval. Our venue for the 2nd and final Test of the series.👌👌#NZvIND pic.twitter.com/x1QsMO8UYo
— BCCI (@BCCI) February 26, 2020
ಪೃಥ್ವಿ ಶಾ ಬದಲಿಗೆ ಶುಬ್ಮನ್ ಗಿಲ್
ಶುಬ್ಮನ್ ಗಿಲ್ ಗುರುವಾರ ನೆಟ್ನಲ್ಲಿ ಅಭ್ಯಾಸ ನಡೆಸಿದ್ದಾರೆ. ಪೃಥ್ವಿ ಶಾ ಏನಾದರೂ ಹೊರಗುಳಿದರೆ ಮಯಾಂಕ್ ಜೊತೆಗೆ ಗಿಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ.
ಗುರುವಾರ ನಡೆದ ಆಭ್ಯಾಸ ಸಂದರ್ಭದಲ್ಲಿ ಕೋಚ್ ರವಿಶಾಸ್ತ್ರಿ ಗಿಲ್ ಬಗ್ಗೆ ಹೆಚ್ಚು ಜಾಗೃತಿ ವಹಿಸುತ್ತಿದ್ದದ್ದು ಕಂಡು ಬಂದಿದೆ. ಗಿಲ್ಗೆ ಕೆಲ ಬ್ಯಾಟಿಂಗ್ ತಂತ್ರಗಾರಿಕೆ ಹಾಗೂ ಪಾದ ಚಲನೆಯ ಬಗ್ಗೆ ಟಿಪ್ಸ್ ನೀಡಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ಎರಡನೇ ಟೆಸ್ಟ್ನಲ್ಲಿ ಬಹುತೇಕ ಗಿಲ್ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಪೃಥ್ವಿ ಶಾ ಗಾಯ ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ ಎಂದು ಟೀಂ ಮ್ಯಾನೇಜ್ಮೆಂಟ್ ಭಾವಿಸಿದೆ. ಆದರೆ ಮೊದಲ ಟೆಸ್ಟ್ನಲ್ಲಿ ಪೃಥ್ವಿ ಶಾ ಕೇವಲ 16 ಹಾಗೂ 14 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆ ಅನುಭವಿಸಿದ್ದರು.