ಫ್ಲೋರಿಡಾ: ಚೊಚ್ಚಲ ಪಂದ್ಯದಲ್ಲೇ ಮಾರಕ ಬೌಲಿಂಗ್ ದಾಳಿ ನಡೆಸಿದ ನವ್ದೀಪ್ ಸೈನಿ ಮೂರು ವಿಕೆಟ್ ಪಡೆ ವಿಂಡೀಸ್ ಪಡೆಯನ್ನು ಕೇವಲ 95 ರನ್ಗಳಿಗೆ ಕಟ್ಟಿಹಾಕಲು ನೆರವಾಗಿದ್ದಾರೆ.
ಟಾಸ್ ಗೆದ್ದ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಈ ಆಯ್ಕೆಯನ್ನು ಸಮರ್ಥಿಸಿಕೊಂಡ ಭಾರತೀಯ ಬೌಲರ್ಗಳು ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ವಿಶ್ವ ಚಾಂಪಿಯನ್ನರನ್ನು 95 ರನ್ಗಳಿಗೆ ಕಟ್ಟಿಹಾಕಲು ನೆರವಾದರು.
ಮೊದಲ ಓವರ್ನ ಎರಡನೇ ಎಸೆತದಲ್ಲಿ ಕ್ಯಾಂಪ್ಬೆಲ್(0) ವಿಕೆಟ್ ಪಡೆದ ವಾಷಿಂಗ್ಟನ್ ಸುಂದರ್ ವಿಂಡೀಸ್ ಪತನಕ್ಕೆ ನಾಂದಿಯಾಡಿದರು. ನಂತರ ಭುವಿ ಎರಡನೇ ಓವರ್ನಲ್ಲಿ ಲೆವಿಸ್(0) ವಿಕೆಟ್ ಪಡೆದರೆ 6ನೇ ಓವರ್ನಲ್ಲಿ ನವ್ದೀಪ್ ಸೈನಿ ನಿಕೋಲಸ್ ಪೂರನ್(20) ಹಾಗೂ ಶಮ್ರೋನ್ ಹೆಟ್ಮೈರ್(0) ವಿಕೆಟ್ ಪಡೆದು ವಿಂಡೀಸ್ಗೆ ಮರ್ಮಾಘಾತ ನೀಡಿದರು.
-
Innings Break!
— BCCI (@BCCI) August 3, 2019 " class="align-text-top noRightClick twitterSection" data="
A three-wkt haul for Saini as #TeamIndia bowlers restrict West Indies to a total of 95/9 after 20 overs.#WIvIND pic.twitter.com/MMn9drOxh1
">Innings Break!
— BCCI (@BCCI) August 3, 2019
A three-wkt haul for Saini as #TeamIndia bowlers restrict West Indies to a total of 95/9 after 20 overs.#WIvIND pic.twitter.com/MMn9drOxh1Innings Break!
— BCCI (@BCCI) August 3, 2019
A three-wkt haul for Saini as #TeamIndia bowlers restrict West Indies to a total of 95/9 after 20 overs.#WIvIND pic.twitter.com/MMn9drOxh1
ನಂತರ ದಾಳಿಗಿಳಿದ ಖಲೀಲ್ ಅಹ್ಮದ್ 4 ರನ್ಗಳಿಸಿದ್ದ ಪೊವೆಲ್ ವಿಕೆಟ್ ಪಡೆದರೆ, ಕೃನಾಲ್ ಪಾಂಡ್ಯ ವಿಂಡೀಸ್ ನಾಯಕ ಬ್ರಾತ್ವೈಟ್(9 ರನ್ 24 ಎಸೆತ)ರನ್ನು ಪೆವಿಲಿಯನ್ಗಟ್ಟಿದರು. ನರೈನ್ ಆಟ 2 ರನ್ಗಳಿಗೆ ಸೀಮಿತವಾದರೆ ಕೀಮೋ ಪಾಲ್ 3 ರನ್ಗೆ ವಿಕೆಟ್ ಒಪ್ಪಿಸಿದರು. ಏಕಾಂಗಿಯಾಗಿ ಹೋರಾಡಿದ ಕೀರನ್ ಪೊಲಾರ್ಡ್ 49 ಎಸೆತಗಳಲ್ಲಿ 2 ಬೌಂಡರಿ 24 ಸಿಕ್ಸರ್ ಸಹಿತ 49 ರನ್ಗಳಿಸಿ ಇನ್ನಿಂಗ್ಸ್ ಮುಕ್ತಾಯಕ್ಕೆ 3 ಎಸೆತ ಬಾಕಿಯಿರುವಾಗ ವಿಕೆಟ್ ಒಪ್ಪಿಸಿದರು.
ಅದ್ಭುತ ಬೌಲಿಂಗ್ ದಾಳಿ ನಡೆಸಿದ ಸೈನಿ 17ಕ್ಕೆ3, ಭುವಿ 19ಕ್ಕೆ2, ವಾಷಿಂಗ್ಟನ್ ಸುಂದರ್ 18ಕ್ಕೆ 1, ಖಲೀಲ್ ಅಹ್ಮದ್ 8ಕ್ಕೆ 1,ಪಾಂಡ್ಯ 20ಕ್ಕೆ1, ಜಡೇಜಾ 13 ರನ್ ನೀಡಿ ಒಂದು ವಿಕೆಟ್ ಪಡೆದು ವಿಂಡೀಸ್ 100 ರ ಗಡಿ ದಾಟದಂತೆ ತಡೆದರು.