ಹೈದರಾಬಾದ್: ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಟೂರ್ನಿಯ ಪ್ರವಾಸ ಮುಂದೂಡಿಕೆ ಬೆನ್ನಲ್ಲೇ, ಜಿಂಬಾಬ್ವೆ ವಿರುದ್ಧದ ಟೂರ್ನಿ ಕೂಡ ಇದೀಗ ಬಿಸಿಸಿಐನಿಂದ ರದ್ದುಗೊಂಡಿದೆ. ಆಗಸ್ಟ್ ತಿಂಗಳಲ್ಲಿ ಟೂರ್ ಕೈಗೊಳ್ಳಬೇಕಾಗಿದ್ದ ಟೀಂ ಇಂಡಿಯಾ ಕೊರೊನಾ ಕಾರಣ ಮನೆಯಲ್ಲೇ ಉಳಿದು ಕೊಳ್ಳಬೇಕಾಗಿದೆ.
ಪ್ರಪಂಚದಾದ್ಯಂತ ಕೊರೊನಾ ವೈರಸ್ ಹರಡುವಿಕೆ ಇದೀಗ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಹೀಗಾಗಿ ಭಾರತೀಯ ಕ್ರಿಕೆಟ್ ಮಂಡಳಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಶ್ರೀಲಂಕಾ ವಿರುದ್ಧ ಜೂನ್ - ಜುಲೈನಲ್ಲಿ ನಡೆಯಬೇಕಾಗಿದ್ದ ಕ್ರಿಕೆಟ್ ಸರಣಿ ಮುಂದೂಡಿಕೆಯಾಗಿದ್ದು, ಅದರ ಬೆನ್ನಲ್ಲೇ ಇಂದು ಈ ನಿರ್ಧಾರ ಹೊರಹಾಕಿ ಬಿಸಿಸಿಐ ಸೆಕ್ರೆಟರಿ ಜಯ್ ಶಾ ತಿಳಿಸಿದ್ದಾರೆ. ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳಲ್ಲಿ ಭಾಗಿಯಾಗಬೇಕಾಗಿತ್ತು.
ಭಾರತದಲ್ಲಿ ಈಗಾಗಲೇ ಕೊರೊನಾ ವೈರಸ್ನಿಂದ 8,500 ಜನರು ಸಾವನ್ನಪ್ಪಿದ್ದು, ಲಕ್ಷಾಂತರ ಜನರು ಸೋಂಕಿಗೆ ಒಳಗಾಗಿದ್ದಾರೆ. ಹೀಗಾಗಿ ಬಿಸಿಸಿಐ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
-
NEWS : The BCCI on Friday announced that the Indian Cricket Team will not travel to Sri Lanka and Zimbabwe owing to the current threat of COVID-19.
— BCCI (@BCCI) June 12, 2020 " class="align-text-top noRightClick twitterSection" data="
More details here - https://t.co/W0zQXwh98x pic.twitter.com/vDLtmCpYfg
">NEWS : The BCCI on Friday announced that the Indian Cricket Team will not travel to Sri Lanka and Zimbabwe owing to the current threat of COVID-19.
— BCCI (@BCCI) June 12, 2020
More details here - https://t.co/W0zQXwh98x pic.twitter.com/vDLtmCpYfgNEWS : The BCCI on Friday announced that the Indian Cricket Team will not travel to Sri Lanka and Zimbabwe owing to the current threat of COVID-19.
— BCCI (@BCCI) June 12, 2020
More details here - https://t.co/W0zQXwh98x pic.twitter.com/vDLtmCpYfg
ಕಳೆದೆರಡು ದಿನಗಳ ಹಿಂದೆ ಸಭೆ ನಡೆಸಿದ್ದ ಐಸಿಸಿ ಸೆಪ್ಟೆಂಬರ್ - ಅಕ್ಟೋಬರ್ ತಿಂಗಳಲ್ಲಿ ನಡೆಯಬೇಕಾಗಿದ್ದ ಟಿ-20 ವಿಶ್ವಕಪ್ ಬಗ್ಗೆ ತೀರ್ಮಾನ ಕೈಗೊಳ್ಳುವಲ್ಲಿ ವಿಫಲಗೊಂಡಿತ್ತು. ಜತೆಗೆ ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಿದೆ.