ವಿಶಾಖಪಟ್ಟಣಂ: ಟೀಂ ಇಂಡಿಯಾ ಮೊದಲ ಟೆಸ್ಟ್ನಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 203 ರನ್ಗಳ ಭರ್ಜರಿ ಗೆಲುವು ದಾಖಲಿಸಿದ್ದು, ಇದರ ಜೊತೆಗೆ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿದೆ.
ಶಮಿ, ಜಡ್ಡು ಮಾರಕ ದಾಳಿಗೆ ಹರಿಣಗಳು ತತ್ತರ..! ಮೊದಲ ಟೆಸ್ಟ್ ಗೆದ್ದು ಬೀಗಿದ ಕೊಹ್ಲಿ ಪಡೆ
-
Shami takes the final wicket – his fifth of the innings – and closes out a big win for India. That's 40 more ICC World Test Championship points in their kitty!#INDvSA SCORECARD 👇https://t.co/dCGJ4Pcug5 pic.twitter.com/HlTk4dU3Kz
— ICC (@ICC) October 6, 2019 " class="align-text-top noRightClick twitterSection" data="
">Shami takes the final wicket – his fifth of the innings – and closes out a big win for India. That's 40 more ICC World Test Championship points in their kitty!#INDvSA SCORECARD 👇https://t.co/dCGJ4Pcug5 pic.twitter.com/HlTk4dU3Kz
— ICC (@ICC) October 6, 2019Shami takes the final wicket – his fifth of the innings – and closes out a big win for India. That's 40 more ICC World Test Championship points in their kitty!#INDvSA SCORECARD 👇https://t.co/dCGJ4Pcug5 pic.twitter.com/HlTk4dU3Kz
— ICC (@ICC) October 6, 2019
ವಿಶಾಖಪಟ್ಟಣಂನ ವೈ ಎಸ್ ರಾಜಶೇಖರ ರೆಡ್ಡಿ ಮೈದಾನದಲ್ಲಿ ನಡೆದ ಪ್ರಥಮ ಟೆಸ್ಟ್ ಮ್ಯಾಚ್ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಪಾರಮ್ಯ ಮೆರೆಯುವ ಮೂಲಕ ಗೆಲುವಿನ ಓಟ ಆರಂಭಿಸಿದೆ.
ಮೊದಲ ಟೆಸ್ಟ್ನಲ್ಲಿ ಹೀಗೊಂದು ಅಪರೂಪದ ದಾಖಲೆ!
ಟೆಸ್ಟ್ ಚಾಂಪಿಯನ್ಶಿಪ್ ಆರಂಭದಿಂದಲೂ ಪ್ರಥಮ ಸ್ಥಾನ ಕಾಯ್ದುಕೊಂಡಿರುವ ಟೀಂ ಇಂಡಿಯಾ ಸದ್ಯ ಮೂರು ಪಂದ್ಯಗಳಲ್ಲಿ ಮೂರನ್ನೂ ಗೆದ್ದು 160 ಅಂಕ ತನ್ನದಾಗಿಸಿಕೊಂಡಿದೆ. ನಂತರದ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಒಂದು ಸೋಲಿನೊಂದಿಗೆ 60 ಅಂಕ ಪಡೆದಿದೆ. ಇಷ್ಟೇ ಪ್ರಮಾಣದ ಸೋಲು-ಗೆಲುವು ಹೊಂದಿರುವ ಶ್ರೀಲಂಕಾ ಸಹ 60 ಅಂಕದೊಂದಿಗೆ ಜಂಟಿಯಾಗಿ ಎರಡನೇ ಸ್ಥಾನದಲ್ಲಿದೆ.
ತಂಡ | ಪಂದ್ಯ | ಗೆಲುವು | ಸೋಲು | ಡ್ರಾ | ಅಂಕ |
ಭಾರತ | 3 | 3 | 0 | 0 | 160 |
ನ್ಯೂಜಿಲ್ಯಾಂಡ್ | 2 | 1 | 1 | 0 | 60 |
ಶ್ರೀಲಂಕಾ | 2 | 1 | 1 | 0 | 60 |
ಆಸ್ಟ್ರೇಲಿಯಾ | 5 | 2 | 2 | 1 | 56 |
ಇಂಗ್ಲೆಂಡ್ | 5 | 2 | 2 | 1 | 56 |
ವೆಸ್ಟ್ ಇಂಡೀಸ್ | 2 | 0 | 2 | 0 | 0 |
ದಕ್ಷಿಣ ಆಫ್ರಿಕಾ | 1 | 0 | 1 | 0 | 0 |
ಬಾಂಗ್ಲಾದೇಶ | 0 | 0 | 0 | 0 | 0 |
ಪಾಕಿಸ್ತಾನ | 0 | 0 | 0 | 0 | 0 |
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ವಿಂಗಡಣೆ:
- ಎರಡು ಪಂದ್ಯಗಳ ಸರಣಿ - ಗೆಲುವು/ಟೈ/ಡ್ರಾ- 60/30/20
- ಮೂರು ಪಂದ್ಯಗಳ ಸರಣಿ - ಗೆಲುವು/ಟೈ/ಡ್ರಾ- 40/20/13
- ನಾಲ್ಕು ಪಂದ್ಯಗಳ ಸರಣಿ - ಗೆಲುವು/ಟೈ/ಡ್ರಾ- 30/15/10
- ಐದು ಪಂದ್ಯಗಳ ಸರಣಿ - ಗೆಲುವು/ಟೈ/ಡ್ರಾ- 24/12/8