ETV Bharat / sports

ಟೀಂ ಇಂಡಿಯಾ ಪ್ಲೇಯರ್ಸ್​ಗೆ 12 ದಿನ ಕ್ವಾರಂಟೈನ್​ ಮಾಡಿ ಭಾರತ-ಆಸ್ಟ್ರೇಲಿಯಾ ಸರಣಿ ನಡೆಸಲು ಸಿದ್ಧ: ಬಿಸಿಸಿಐ

author img

By

Published : May 9, 2020, 8:12 AM IST

ಮುಂಬರುವ ಭಾರತ - ಆಸ್ಟ್ರೇಲಿಯಾ ಕ್ರಿಕೆಟ್​ ಸರಣಿ ಆರಂಭ ಮಾಡಲು ಟೀಂ ಇಂಡಿಯಾ ಪ್ಲೇಯರ್ಸ್​ಗೆ 12 ದಿನಗಳ ಕಾಲ ಕ್ವಾರಂಟೈನ್​ ಮಾಡಲು ಬಿಸಿಸಿಐ ರೆಡಿಯಾಗಿದೆ ಎಂದು ತಿಳಿಸಿದೆ.

Team india
Team india

ನವದೆಹಲಿ: ಪ್ರಪಂಚದಾದ್ಯಂತ ಮಹಾಮಾರಿ ಕೊರೊನಾ ಅಬ್ಬರ ಜೋರಾಗಿದ್ದು,ಈಗಾಗಲೇ ಆಯೋಜನೆಗೊಂಡಿದ್ದ ಎಲ್ಲ ಕ್ರಿಕೆಟ್ ಟೂರ್ನಿ ಮುಂದೂಡಿಕೆಯಾಗಿವೆ. ಇದರ ಮಧ್ಯೆ ಮುಂಬರುವ ಟಿ-20 ವಿಶ್ವಕಪ್ ಟೂರ್ನಮೆಂಟ್​ ಕೂಡ ನಿಗದಿತ ವೇಳಾಪಟ್ಟಿಯಲ್ಲಿ ನಡೆಯುವುದು ಬಹುತೇಕ ಡೌಟ್​. ಇದರ ಮಧ್ಯೆ ಅಕ್ಟೋಬರ್​ ನಲ್ಲಿ ಮಹತ್ವದ ಭಾರತ-ಆಸ್ಟ್ರೇಲಿಯಾ ಸರಣಿ ನಡೆಯುವುದು ಕೂಡ ಅನುಮಾನ​ ಎಂದು ಹೇಳಲಾಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮಹತ್ವದ ಮಾಹಿತಿ ನೀಡಿದೆ.

ಮಹತ್ವದ ಭಾರತ-ಆಸ್ಟ್ರೇಲಿಯಾ ಸರಣಿಗೆ ಸಂಬಂಧಿಸಿದಂತೆ ಮಾತನಾಡಿರುವ ಬಿಸಿಸಿಐ ಖಂಜಾಚಿ ಅರುಣ್​ ದುಮ್ಲಾ, ಒಂದು ವೇಳೆ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು ಕಾಂಗರೂ ಪಡೆ ವಿರುದ್ಧದ ಸರಣಿಯಲ್ಲಿ ಭಾಗಿಯಾದರೆ, ನಮ್ಮ ತಂಡ 12 ದಿನಗಳ ಕಾಲ ಕ್ವಾರಂಟೈನ್​​​ನಲ್ಲಿರಲು ಸಿದ್ಧವಾಗಿದೆ ಎಂದಿದ್ದಾರೆ. ಆದರೆ ಈ ವೇಳೆ ಪರಿಸ್ಥಿತಿ ಯಾವ ರೀತಿಯಾಗಿ ಇರುತ್ತದೆ ಎಂಬುದು ಗೊತ್ತಿಲ್ಲ. ಆದರೆ ಪ್ರತಿ ಪ್ರವಾಸಕ್ಕೂ ಮುಂಚಿತವಾಗಿ ಆಟಗಾರರಿಗೆ ಕ್ವಾರಂಟೈನ್​ ಮಾಡುವುದು ತುಂಬಾ ಕಷ್ಟ ಎಂದು ಅವರು ಹೇಳಿದ್ದಾರೆ.

ಐಪಿಎಲ್​​​​​​​​​​​​ ನಡೆಸುವ ಬಗ್ಗೆ ಚಿಂತನೆ ನಡೆಸಿಲ್ಲ: ಬಿಸಿಸಿಐ

ಇನ್ನು ಆಸ್ಟ್ರೇಲಿಯಾದಲ್ಲೇ ಟಿ-20 ವಿಶ್ವಕಪ್​ ಟೂರ್ನಮೆಂಟ್​ ನಡೆಯುವುದರಿಂದ ಅದಕ್ಕೂ ಮುಂಚಿತವಾಗಿ ಈ ಟೂರ್ನಿ ನಡೆದರೆ ಉತ್ತಮ ಎಂದು ಅವರು ಅಭಿಪ್ರಾಯ ಹೊರಹಾಕಿದ್ದಾರೆ. ಇದೇ ವೇಳೆ ಪ್ರಸಕ್ತ ವರ್ಷದ ಇಂಡಿಯನ್​ ಪ್ರೀಮಿಯರ್​ ಲೀಗ್​ ಬಗ್ಗೆ ಬಿಸಿಸಿಐ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದರು. ಟೂರ್ನಮೆಂಟ್​​​ನಲ್ಲಿ ಭಾಗಿಯಾಗಲು ಬೇರೆ ಬೇರೆ ದೇಶಗಳಿಂದ ಪ್ಲೇಯರ್ಸ್​​ ಭಾರತಕ್ಕೆ ಬರಬೇಕಾಗಿದ್ದು, ಅವರಿಗೆ 14 ದಿನಗಳ ಕಾಲ ಕ್ವಾರಂಟೈನ್​ ಮಾಡಿ ಐಪಿಎಲ್​ ನಡೆಸುವುದು ಹೇಗೆ ಎಂದು ಅವರು ಪ್ರಶ್ನೆ ಮಾಡಿದ್ದರು.

ನವೆಂಬರ್​​ 2020- ಜನವರಿ 2021ವರೆಗೆ ಆರಂಭಗೊಳ್ಳಲಿರುವ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್​ ಸರಣಿ ಆರಂಭ ಮಾಡುವ ಮೂಲಕ ಕ್ರಿಕೆಟ್​ಗೆ ಚಾಲನೆ ನೀಡುವುದು ಉತ್ತಮ ಎಂದು ರೋಹಿತ್​ ಶರ್ಮಾ ಹೇಳಿದ್ದರು. ಭಾರತ - ಆಸ್ಟ್ರೇಲಿಯಾ ಈ ಸರಣಿಯಲ್ಲಿ ನಾಲ್ಕು ಟೆಸ್ಟ್​, ಮೂರು ಏಕದಿನ ಹಾಗೂ ಮೂರು ಟಿ - 20 ಪಂದ್ಯಗಳು ಸೇರಿಕೊಂಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.