ETV Bharat / sports

ಬಯೋ ಬಬಲ್​​ ಕಷ್ಟಕರ: ಆದ್ರೆ ಭಾರತೀಯ ಕ್ರಿಕೆಟರ್ಸ್​​ ಬಳಿ ಹೆಚ್ಚು ತಾಳ್ಮೆ ಎಂದ ಗಂಗೂಲಿ - ಭಾರತೀಯ ಕ್ರಿಕೆಟರ್ಸ್​​ ಬಳಿ ಹೆಚ್ಚು ತಾಳ್ಮೆ

ಇತರ ದೇಶದ ಪ್ಲೇಯರ್ಸ್​ಗೆ ಹೋಲಿಕೆ ಮಾಡಿದಾಗ ಟೀಂ ಇಂಡಿಯಾ ಪ್ಲೇಯರ್ಸ್​ ಹೆಚ್ಚು ಸಹಿಷ್ಣರು ಎಂದು ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಗಂಗೂಲಿ ಹೇಳಿದ್ದಾರೆ.

Ganguly
Ganguly
author img

By

Published : Apr 6, 2021, 5:35 PM IST

ಕೋಲ್ಕತ್ತಾ: ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳು ಬಯೋ - ಬಬಲ್​ನಲ್ಲಿ ನಡೆಯುತ್ತಿದ್ದು, ಇದರಿಂದ ಕ್ರಿಕೆಟಿಗರಿಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಆಗುವ ಸಾಧ್ಯತೆ ದಟ್ಟವಾಗಿರುತ್ತವೆ. ಇದೇ ವಿಚಾರವಾಗಿ ಇದೀಗ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್​ ಗಂಗೂಲಿ ಮಾತನಾಡಿದ್ದಾರೆ.

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಕ್ರಿಕೆಟರ್ಸ್​ಗೆ ಹೋಲಿಕೆ ಮಾಡಿದಾಗ ಭಾರತೀಯರು ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸಲು ಹೆಚ್ಚಿನ ತಾಳ್ಮೆ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಪುನಾರಂಭಗೊಂಡಾಗಿನಿಂದಲೂ ಟೀಂ ಇಂಡಿಯಾ ಪ್ಲೇಯರ್ಸ್​ ಬಯೋ - ಬಬಲ್​​ನಲ್ಲಿ ಉಳಿದುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಅವರ ಜೀವನ ಹೋಟೆಲ್​ ಮತ್ತು ಕ್ರೀಡಾಂಗಣಕ್ಕೆ ಮಾತ್ರ ಸೀಮಿತವಾಗಿದೆ. ಜತೆಗೆ ಹೊರಗಿನ ಜಗತ್ತಿನ ಪ್ರವೇಶ ಇಲ್ಲದೇ ಇರುವುದು ಸಾಕಷ್ಟು ಕಷ್ಟಕರವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಇಂದಿನ ಆ ದಿನ: ಭಾರತ ಸೋಲಿಸಿ ಟಿ-20 ವಿಶ್ವಕಪ್​ಗೆ ಮುತ್ತಿಕ್ಕಿದ್ದ ಲಂಕಾ.. ನೋಡಿ ಆ ಇನ್ನಿಂಗ್ಸ್ ಹೇಗಿತ್ತು!?

ನಾವು ಭಾರತೀಯರು ಸಾಗರೋತ್ತರ ಕ್ರಿಕೆಟರ್ಸ್​​ಗಳಿಗಿಂತಲೂ ಸ್ವಲ್ಪ ಹೆಚ್ಚು ಸಹಿಷ್ಣರು ಎಂದು ನಾನು ಭಾವಿಸುತ್ತೇನೆ. ನಾನು ಬಹಳಷ್ಟು ಇಂಗ್ಲಿಷ್​, ಆಸ್ಟ್ರೇಲಿಯನ್ನರು, ವೆಸ್ಟ್​ ಇಂಡಿಯನ್ಸ್​​ರೊಂದಿಗೆ ಆಡಿದ್ದೇನೆ. ಅವರು ಮಾನಸಿಕ ಆರೋಗ್ಯದ ಬಗ್ಗೆ ಚಿಂತಿಸುವುದಿಲ್ಲ ಎಂದು ಗಂಗೂಲಿ ವರ್ಚುಯಲ್​​ ಪ್ರಚಾರ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

ಕಳೆದ ಆರು -ಏಳು ತಿಂಗಳಲ್ಲಿ ಬಯೋ - ಬಬಲ್​ನಲ್ಲಿ ಕ್ರಿಕೆಟ್​ ನಡೆಯುತ್ತಿರುವುದು ತುಂಬಾ ಕಠಿಣವಾಗಿದ್ದು, ಹೋಟೆಲ್​ ಕೋಣೆಯಿಂದ ಮೈದಾನಕ್ಕೆ ಹೋಗಿ ಮತ್ತೆ ಕೋಣೆಗೆ ಹಿಂತಿರುಗುವುದು ಕ್ರಿಕೆಟರ್ಸ್​ಗೆ ಕಷ್ಟವಾಗುತ್ತಿದೆ ಎಂದಿದ್ದಾರೆ. ಸದ್ಯ ಭಾರತದಲ್ಲಿ ಇಂಡಿಯನ್​ ಪ್ರೀಮಿಯರ್ ಲೀಗ್​ ಪ್ರಾರಂಭಗೊಳ್ಳುತ್ತಿದ್ದು, ಪ್ಲೇಯರ್ಸ್ ಬಯೋ - ಬಬಲ್​ನಲ್ಲಿ ಉಳಿದುಕೊಳ್ಳಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.