ಮೆಲ್ಬೋರ್ನ್: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ, ದ್ವಿತೀಯ ಟೆಸ್ಟ್ ಪಂದ್ಯ ಮುಗಿದು 2 ದಿನ ಕಳೆದರೂ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮೆಲ್ಬೋರ್ನ್ನಲ್ಲೆ ಉಳಿದುಕೊಂಡಿವೆ.
ಉಭಯ ತಂಡಗಳು ಇನ್ನೂ ಕೆಲ ದಿನಗಳವರೆಗೆ ಮೆಲ್ಬೋರ್ನ್‌ನಲ್ಲಿ ತರಬೇತಿ ಪಡೆಯಲಿದ್ದು, ಜನವರಿ 7 ರಂದು ಎಸ್‌ಸಿಜಿಯಲ್ಲಿ ನಡೆಯುವ ಮೂರನೇ ಟೆಸ್ಟ್ ಪಂದ್ಯಕ್ಕೆ ಕೇವಲ ಮೂರು ದಿನಗಳ ಮೊದಲು ಸಿಡ್ನಿಗೆ ಪ್ರಯಾಣ ಬೆಳೆಸಲಿವೆ.
"ಮೂರನೇ ಟೆಸ್ಟ್ ಪಂದ್ಯ ಸಿಡ್ನಿಯಲ್ಲೇ ನಡೆಯಲಿದ್ದು, ಸುರಕ್ಷಿತವಾಗಿ ಪಂದ್ಯವನ್ನು ನಡೆಸಲು ಯೋಜನೆಗಳನ್ನು ಹಾಕುತ್ತಿದ್ದೇವೆ. ಆಟಗಾರರು ಇನ್ನೂ ಕೆಲವು ದಿನಗಳವರೆಗೆ ಮೆಲ್ಬೋರ್ನ್‌ನಲ್ಲಿರುತ್ತಾರೆ, ಅಲ್ಲಿ ತರಬೇತಿ ಪಡೆಯುತ್ತಾರೆ ಮತ್ತು ಟೆಸ್ಟ್ ಪಂದ್ಯಕ್ಕೆ ಒಂದೆರಡು ದಿನ ಮುಂಚಿತವಾಗಿ ಸಿಡ್ನಿಗೆ ತೆರಳಲಿದ್ದಾರೆ" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯ ಕಾರ್ಯನಿರ್ವಾಹಕ ನಿಕ್ ಹಾಕ್ಲೆ ಹೇಳಿದ್ದಾರೆ.
ಓದಿ ಐಸಿಸಿ ಟೆಸ್ಟ್ ಶ್ರೇಯಾಂಕ : ಸ್ಮಿತ್, ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ವಿಲಿಯಮ್ಸನ್.. 6ನೇ ಸ್ಥಾನದಲ್ಲಿ ರಹಾನೆ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದು, ಸಿಡ್ನಿ ಮೈದಾನದಲ್ಲಿ ಜ.7ರಿಂದ 3ನೇ ಪಂದ್ಯ ಆರಂಭವಾಗಲಿದೆ.