ETV Bharat / sports

ಸಿಡ್ನಿಯಲ್ಲಿ​ ಪ್ರೇಕ್ಷಕರಿಂದ ಬುಮ್ರಾ, ಸಿರಾಜ್​ಗೆ ನಿಂದನೆ: ಬಿಸಿಸಿಐ ಆರೋಪ

ಸಿರಾಜ್​ ಫೈನ್​ಲೆಗ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಂತೆ ಸಂದರ್ಭದಲ್ಲಿ ಪ್ರೇಕ್ಷಕರಿಂದ ನಿಂದನೆಗೊಳಗಾದರೆ, ಬುಮ್ರಾ ಔಟ್​ಫೀಲ್ಡ್​​ನಲ್ಲಿ ನಿಂತಿದ್ದ ವೇಳೆ ಕೆಲವು ಪ್ರೇಕ್ಷಕರು ಅವಾಚ್ಯ ಪದಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತಕ್ಷಣ ಭಾರತೀಯ ಸಿಬ್ಬಂದಿ ಬುಮ್ರಾ ಇದ್ದ ಸ್ಥಳಕ್ಕೆ ತೆರಳಿ ಈ ಕುರಿತು ಬುಮ್ರಾ ಜೊತೆಗೆ ಮಾತನಾಡಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

Bumrah, Siraj racially abused
ಬುಮ್ರಾ-ಸಿರಾಜ್ ಜನಾಂಗೀಯ ನಿಂದನೆ
author img

By

Published : Jan 9, 2021, 4:55 PM IST

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯದ 3ನೇ ದಿನ ಭಾರತೀಯ ವೇಗದ ಬೌಲರ್‌ಗಳಾದ ಜಸ್ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಎಸ್​ಸಿಜಿಯಲ್ಲಿ ನೆರೆದಿರುವ ಪ್ರೇಕ್ಷಕರು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಅಧಿಕಾರಿಗಳು ಆರೋಪಿಸಿದ್ದಾರೆ.

ಈ ಕುರಿತು ಐಸಿಸಿ ಮತ್ತು ಸ್ಟೇಡಿಯಂ ಅಧಿಕಾರಿಗಳು ಬುಮ್ರಾ, ಸಿರಾಜ್ ಮತ್ತು ಭಾರತ ತಂಡದ ನಿರ್ವಹಣೇ ಮಂಡಳಿಯ ಜೊತೆ 3ನೇ ದಿನದ ಪಂದ್ಯದಂತ್ಯಕ್ಕೆ ಸುದೀರ್ಘವಾದ ಈ ಕುರಿತು ಚರ್ಚೆ ಮಾಡಿದ್ದಾರೆ. ನಾಯಕ ರಹಾನೆ ಕೂಡ ಭದ್ರತಾ ಸಿಬ್ಬಂದಿಯೊಂದಿಗೆ ಈ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

" ಕಳೆದ ಎರಡು ದಿನಗಳಿಂದ ಭಾರತೀಯ ಜೋಡಿ(ಬುಮ್ರಾ-ಸಿರಾಜ್​)ಯನ್ನು ಪಂದ್ಯ ವೀಕ್ಷಣೆಗೆ ಬಂದಿರುವ ಸಾರ್ವಜನಿಕರು ಜನಾಂಗೀಯವಾಗಿ ನಿಂದಿಸುತ್ತಿದ್ದಾರೆ ಎಂದು ಬಿಸಿಸಿಐ ಆಧಿಕಾರಿಗಳುತ ಆರೋಪಿಸಿದ್ದಾರೆಂದು" ಆಸ್ಟ್ರೇಲಿಯನ್​ ಪತ್ರಿಕೆ ' ದ ಡೈಲಿ ಟೆಲಿಗ್ರಾಫ್​ ' ವರದಿ ಮಾಡಿದೆ.

ಸಿರಾಜ್​ ಫೈನ್​ಲೆಗ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಂತೆ ಸಂದರ್ಭದಲ್ಲಿ ಪ್ರೇಕ್ಷಕರಿಂದ ನಿಂದನೆಗೊಳಗಾದರೆ, ಬುಮ್ರಾ ಔಟ್​ಫೀಲ್ಡ್​​ನಲ್ಲಿ ನಿಂತಿದ್ದ ವೇಳೆ ಕೆಲವು ಪ್ರೇಕ್ಷಕರು ಅವಾಚ್ಯ ಪದಬಳಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತಕ್ಷಣ ಭಾರತೀಯ ಸಿಬ್ಬಂದಿಗಳು ಬುಮ್ರಾ ಇದ್ದ ಸ್ಥಳಕ್ಕೆ ತೆರಳಿ ಈ ಕುರಿತು ಬುಮ್ರಾ ಜೊತೆಗೆ ಮಾತನಾಡಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಭಾರತ 2008ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ ಭಾರತ ತಂಡದ ಸ್ಪಿನ್​ ಬೌಲರ್​ ಹರ್ಭಜನ್​ ಸಿಂಗ್ ತಮ್ಮನ್ನು ಮಂಗ ಎಂದು ಕರೆದು ನಿಂದನೆ ಮಾಡಿದ್ದಾರೆಂದು ಆಸ್ಟ್ರೇಲಿಯನ್ ಆಲ್​ರೌಂಡರ್ ಆ್ಯಂಡ್ರ್ಯೂ ಸೈಮಂಡ್ಸ್​​ ಆರೋಪಿಸಿದ್ದರು. ಆದರೆ ಇದನ್ನು ಭಾರತೀಯ ಆಟಗಾರರು ಮತ್ತು ತಂಡ ಭಜ್ಜಿ ಬೆನ್ನಿಗೆ ನಿಂತು ಆರೋಪವನ್ನು ತಳ್ಳಿ ಹಾಕಿತ್ತು.

ಇದನ್ನು ಓದಿ: ಪೂಜಾರ ಅವರ ನಿದಾನಗತಿಯ ಬ್ಯಾಟಿಂಗ್ ಇತರರ ಮೇಲೆ ಒತ್ತಡ ಹೇರುತ್ತಿದೆ: ಪಾಂಟಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.