ಪೋರ್ಟ್ ಆಫ್ ಸ್ಪೇನ್: ವಿಂಡೀಸ್ ವಿರುದ್ಧ ನಡೆಯುತ್ತಿರುವ 2ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ 42ನೇ ಶತಕ ಗಳಿಸಿ ಮಿಂಚಿದರು. ಅಲ್ಲದೆ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ರನ್ ಮಷಿನ್ ಅಳಿಸಿ ಹಾಕಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ವಿರಾಟ್ 8ನೇ ಸ್ಥಾನಕ್ಕೇರಿದ್ದಾರೆ. 11,363 ರನ್ ಪೇರಿಸಿದ್ದ ಮಾಜಿ ನಾಯಕ ಗಂಗೂಲಿಯನ್ನು ಕೊಹ್ಲಿ ಹಿಂದಿಕ್ಕಿದ್ದಾರೆ. 18,426 ರನ್ ಬಾರಿಸಿ ಕ್ರಿಕೆಟ್ ದೇವರು ಸಚಿನ್ ಅಗ್ರ ಸ್ಥಾನದಲ್ಲಿದ್ದಾರೆ. ಇನ್ನೊಂದೆಡೆ ಏಕದಿನ ಕ್ರಿಕೆಟ್ನಲ್ಲಿ 42ನೇ ಶತಕ ಗಳಿಸಿ ಎರಡನೇ ಸ್ಥಾನದಲ್ಲಿರುವ ವಿರಾಟ್ಗೆ 49 ಶತಕ ಬಾರಿಸಿರುವ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಕೇವಲ 8 ಸೆಂಚುರಿಯಷ್ಟೇ ಬೇಕಿದೆ.
-
King Kohli 💪💪#TeamIndia pic.twitter.com/BiiNzL4GCS
— BCCI (@BCCI) August 11, 2019 " class="align-text-top noRightClick twitterSection" data="
">King Kohli 💪💪#TeamIndia pic.twitter.com/BiiNzL4GCS
— BCCI (@BCCI) August 11, 2019King Kohli 💪💪#TeamIndia pic.twitter.com/BiiNzL4GCS
— BCCI (@BCCI) August 11, 2019
ಇದಕ್ಕೂ ಮುನ್ನ ಇದೇ ಪಂದ್ಯದಲ್ಲಿ 19 ರನ್ ಗಳಿಸುತ್ತಿದ್ದಂತೆ ವಿರಾಟ್ ಕೆರಿಬಿಯನ್ ತಂಡದ ವಿರುದ್ಧ ಹೆಚ್ಚು ರನ್ ಗಳಿಸಿದವರಲ್ಲಿ ಅಗ್ರ ಸ್ಥಾನಕ್ಕೇರಿದ್ದರು. 26 ವರ್ಷಗಳ ಹಿಂದೆ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಮಾಡಿದ್ದ 1930 ರನ್ಗಳ ದಾಖಲೆಯನ್ನು ಕೊಹ್ಲಿ ಅಳಿಸಿಹಾಕಿದ್ದರು. ನಂತರ 88 ರನ್ ಗಳಿಸುತ್ತಿದ್ದಂತೆ ವಿರಾಟ್, ವಿಂಡೀಸ್ ಜೊತೆ 2000 ರನ್ ಬಾರಿಸಿದ ಶ್ರೇಯಕ್ಕೆ ಪಾತ್ರರಾದರು.
ಅತಿ ಹೆಚ್ಚು ಶತಕ ಗಳಿಸಿದ ನಾಯಕ:
ಅಲ್ಲದೆ ತಂಡವೊಂದರ ವಿರುದ್ಧ ಅತಿ ಹೆಚ್ಚು ಶತಕ ಗಳಿಸಿದ ನಾಯಕ ಎಂಬ ಪಟ್ಟವೂ ಕೂಡ ವಿರಾಟ್ಗೆ ಒಲಿಯಿತು. ವಿಂಡೀಸ್ ವಿರುದ್ಧ ವಿರಾಟ್ ಕೊಹ್ಲಿ 6ನೇ ಸೆಂಚುರಿ ಬಾರಿಸಿದ್ದಾರೆ. ಇನ್ನು ಈ ಹಿಂದೆ ನ್ಯೂಜಿಲೆಂಡ್ ವಿರುದ್ಧ ಆಸಿಸ್ನ ಮಾಜಿ ನಾಯಕ ರಿಕಿ ಪಾಂಟಿಂಗ್ 5 ಶತಕ ಗಳಿಸಿದ್ದರು. ಈ ರೆಕಾರ್ಡ್ ಕೂಡ ಭಾರತ ತಂಡದ ನಾಯಕನ ಪಾಲಾಗಿದೆ.