ಸೇಂಟ್ ಲೂಸಿಯಾ: ಭಾರತ ಮಹಿಳಾ ತಂಡ ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 84 ರನ್ಗಳ ಭರ್ಜರಿ ಜಯ ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡಕ್ಕೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ 143 ರನ್ಗಳ ದಾಖಲೆಯ ಜೊತೆಯಾಟ ನೀಡಿದರು.
ಮಂಧಾನ 46 ಎಸೆತಗಳಲ್ಲಿ 11 ಬೌಂಡರಿ ಸಹಿತ 67 ರನ್ ಗಳಿಸಿದರೆ, 15 ವರ್ಷದ ಶಫಾಲಿ ವರ್ಮಾ 49 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 73 ರನ್ ಗಳಿಸಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ 21ರನ್, ವೇದ ಕೃಷ್ಣಮೂರ್ತಿ 15 ರನ್ ಗಳಿಸಿ 185 ಬೃಹತ್ ಮೊತ್ತಕ್ಕೆ ನೆರವಾದರು.
-
💥 Shafali Verma ➝ 73 (49)
— ICC (@ICC) November 10, 2019 " class="align-text-top noRightClick twitterSection" data="
💥 Smriti Mandhana ➝ 67 (46)
The duo's record-breaking partnership set up an 84-run win for India in the first T20I against West Indies. #WIvIND REPORT 👇https://t.co/RZcFltOl9G
">💥 Shafali Verma ➝ 73 (49)
— ICC (@ICC) November 10, 2019
💥 Smriti Mandhana ➝ 67 (46)
The duo's record-breaking partnership set up an 84-run win for India in the first T20I against West Indies. #WIvIND REPORT 👇https://t.co/RZcFltOl9G💥 Shafali Verma ➝ 73 (49)
— ICC (@ICC) November 10, 2019
💥 Smriti Mandhana ➝ 67 (46)
The duo's record-breaking partnership set up an 84-run win for India in the first T20I against West Indies. #WIvIND REPORT 👇https://t.co/RZcFltOl9G
ವಿಂಡೀಸ್ ಪರ ಶಕೀರ ಸೆಲ್ಮಾನ್ ಹಾಗೂ ಅನಿಸ ಮೊಹಮ್ಮದ್ ತಲಾ ಎರಡು ವಿಕೆಟ್ ಪಡೆದರು.
186 ರನ್ಗಳ ಟಾರ್ಗೆಟ್ ಪಡೆದ ವಿಂಡೀಸ್ ವನಿತೆಯರ ತಂಡ ಭಾರತೀಯ ಬೌಲರ್ಗಳ ದಾಳಿಗೆ ಸಿಲುಕಿ 101 ರನ್ಗಳಿಗೆ ಆಲೌಟ್ ಆಯಿತು. ವಿಕೆಟ್ ಕೀಪರ್ ಶೆಮೈನ್ ಕ್ಯಾಂಪ್ಬೆಲ್ 33 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ದೀಪ್ತಿ ಶರ್ಮಾ 1 ವಿಕೆಟ್, ಶಿಖಾ ಪಾಂಡೆ 2, ರಾಧ ಯಾದವ್ 2, ಪೂನಮ್ ಯಾದವ್ 2 ಹಾಗೂ ಪೂಜಾ ವಸ್ತ್ರಾಕರ್ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.