ETV Bharat / sports

ದ.ಆಫ್ರಿಕಾ ವಿರುದ್ಧ ಏಕದಿನ ಸರಣಿ ಕ್ಲೀನ್​ಸ್ವೀಪ್​ ಸಾಧಿಸಿದ ಭಾರತದ ಮಹಿಳಾ ತಂಡ

author img

By

Published : Oct 14, 2019, 5:35 PM IST

ವಡೋದರಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಕೇವಲ 147 ರನ್​ ಟಾರ್ಗೇಟ್​ ನೀಡಿಯೂ ಬೌಲಿಂಗ್​ ಬಲದಿಂದ ಭಾರತ ಮಹಿಳಾ ತಂಡ ದ. ಆಫ್ರಿಕಾ ತಂಡವನ್ನು ಮಣಿಸಿ ಏಕದಿನ ಸರಣಿಯನ್ನು ಕ್ಲೀನ್​ ಸ್ವೀಪ್​ ಸಾಧಿಸಿದೆ.

India women team

ವಡೋದರ: ಭಾರತ ಪುರುಷರ ತಂಡ ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್​ ಸರಣಿ ವಶಪಡಿಸಿಕೊಂಡರೆ, ಇಂದು ಮಹಿಳೆಯರ ತಂಡ ಏಕದಿನ ಸರಣಿಯನ್ನು 3-0ಯಲ್ಲಿ ಗೆಲುವು ಸಾಧಿಸಿದೆ.

ವಡೋದರಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಭಾರತದ ವನಿತೆಯರು ಬ್ಯಾಟಿಂಗ್​ ವೈಫಲ್ಯ ಅನುಭವಿಸಿ ಕೇವಲ 146 ರನ್​ಗಳಿಸಿದ್ದರು. ಹರ್ಮನ್​ ಪ್ರೀತ್​ ಕೌರ್​ 36 ಹಾಗೂ ಶಿಖಾ ಪಾಂಡೆ 35 ರನ್​ಗಳಿಸಿ ತಂಡದ ಮೊತ್ತವನ್ನು 100 ಗಡಿದಾಟಿಸಿದ್ದರು.

ಉತ್ತಮ ಬೌಲಿಂಗ್​ ದಾಳಿ ನಡೆಸಿ ಹರಿಣಗಳ ಪರ ಮರಿಝಾನ್ನೆ ಕಾಪ್ ​3 ಶಬ್ನಿಮ್​ ಇಸ್ಮಾಯಿಲ್ 2, ಅಯಬೊಂಗ ಖಾಕ 2, ತುಮಿ ಸೆಖುಖುನೆ, ನೊಂಡುಮಿಸೊ ಶಂಗಾಸೆ ಹಾಗೂ ಸುನ್​ ಲೂಸ್​ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು.

ಭಾರತದ ಬೌಲಿಂಗ್​​ ದಾಳಿಗೆ ತತ್ತರಿಸಿ ಆಫ್ರಿಕನ್​ ಮಹಿಳೆಯರು 140 ರನ್​ಗಳಿಗೆ ಆಲೌಟ್​​ ಆಗುವ ಮೂಲಕ 6 ರನ್​ಗಳ ಸೋಲುಕಂಡು ಸರಣಿಯಲ್ಲಿ ವೈಟ್​ವಾಷ್​ ಅಪಮಾನಕ್ಕೆ ತುತ್ತಾದರು.

65 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ನಾಯಕಿ ಸುನ್​ ಲೂಸ್(24) ಹಾಗೂ ಕಾಪ್​(29)​ 40 ರನ್​ ಜೊತೆಯಾಟ ನಡೆಸಿ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಏಕ್ತಾ ಬಿಸ್ತ್​ ಈ ಜೋಡಿಯನ್ನು ಬೇರ್ಪಡಿಸಿ ಮತ್ತೆ ಭಾರತಕ್ಕೆ ಮೇಲುಗೈ ತಂದುಕೊಟ್ಟರು. 29 ರನ್​ಗಳಿಸಿದ್ದ ಕಾಪ್​ರನ್ನು ದೀಪ್ತಿ ಶರ್ಮಾ ಔಟ್​ ಮಾಡುವುದರೊಂದಿಗೆ ಹರಿಣಗಳ ಗೆಲುವಿನ ಆಸೆ ಕಮರಿತು. ಒಟ್ಟಾರೆ 48 ಓವರ್​ಗಳಲ್ಲಿ 140 ರನ್​ಗಳಿಗೆ ಆಲೌಟ್​ ಆಗುವ ಮೂಲಕ 6 ರನ್​ಗಳ ಸೋಲುಕಂಡಿತು. ಭಾರತ ಪರ ಏಕ್ತಾ ಬಿಸ್ತ್​ 3, ರಾಜೇಶ್ವರಿ ಗಾಯಕವಾಡ್​ ಹಾಗೂ ದೀಪ್ತಿ ಶರ್ಮಾ ತಲಾ 2 ವಿಕೆಟ್​ ಪಡೆದರೆ ಇವರಿಗೆ ಸಾತ್​ ನೀಡಿದ ಕೌರ್​, ಮಾನ್ಸಿ ಜೋಶಿ ಹಅಗೂ ಜೆಮೈಮಾ ರೋಡ್ರಿಗಸ್​ ತಲಾ ಒಂದು ವಿಕೆಟ್​ ಪಡೆದು ಭಾರತಕ್ಕೆ ಗೆಲುವು ತಂದುಕೊಟ್ಟರು. 3 ವಿಕೆಟ್​ ಪಡೆದ ಏಕ್ತಾ ಬಿಸ್ತ್​ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರೆ ಮರಿಝಾನ್ನೆ ಕಾಪ್​ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.