ಮುಂಬೈ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ಗಿಂತ ಟಿ-20 ಪಂದ್ಯಗಳೆಂದರೆ ಹೆಚ್ಚು ರೋಚಕತೆಯಿಂದ ಕೂಡಿರುತ್ತದೆ. ಕಳೆದ ಮೂರು ವರ್ಷಗಳಿಂದ ಎರಡು ತಂಡಗಳ ನಡುವಿನ ಪ್ರಮುಖ ಪಂದ್ಯಗಳು ಇಲ್ಲಿವೆ.
ಎರಡು ಬಾರಿ ವಿಶ್ವಚಾಂಪಿಯನ್ ಆಗಿರುವ ವಿಂಡೀಸ್ ತಂಡ ಭಾರತ ತಂಡದ ವಿರುದ್ಧ ತನ್ನ ತವರಿನಲ್ಲಿ ಉತ್ತಮ ದಾಖಲೆಯನ್ನೇ ಹೊಂದಿದೆ. ತವರಿನಿಂದಾಚೆ ನಡೆದಿರುವ ಪಂದ್ಯಗಳಲ್ಲಿ ಭಾರತದ ವಿರುದ್ಧ ಕೊಂಚ ಹಿಂದೆ ಬಿದ್ದಿದೆ. ಕೆಲವು ರೋಚಕ ಪಂದ್ಯಗಳ ವಿವರ ಇಲ್ಲಿದೆ.
2016ರ ಟಿ20 ವಿಶ್ವಕಪ್ ಸೆಮಿಫೈನಲ್
2016 ರ ಟಿ-20 ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ಎರಡು ತಂಡಗಳು ರನ್ ಮಳೆ ಸುರಿಸಿದ್ದವು. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಭಾರತ ತಂಡ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 192 ರನ್ಗಳಿಸಿತ್ತು. ಕೊಹ್ಲಿ 89, ರಹಾನೆ 40, ರೋಹಿತ್ 43 ರನ್ಗಳಿಸಿದ್ದರು. 193 ರನ್ಗಳ ಗುರಿ ಬೆನ್ನತ್ತಿದ ವಿಂಡೀಸ್ 2 ಎಸೆತಗಳು ಬಾಕಿ ಉಳಿದಿರುವಂತೆ ಗುರಿ ಮುಟ್ಟುವ ಮೂಲಕ ಭಾರತಕ್ಕೆ ಆಘಾತ ನೀಡಿತ್ತು. ಜಾನ್ಸನ್ ಚಾರ್ಲ್ಸ್ 52, ಲೆಂಡ್ಸ್ ಸಿಮ್ಮೋನ್ಸ್ 82, ರಸೆಲ್ 43 ರನ್ಗಳಿಸಿ ಭಾರತದ 2ನೇ ವಿಶ್ವಕಪ್ ಕನಸನ್ನು ನುಚ್ಚುನೂರು ಮಾಡಿದ್ದರು.
2016ರಲ್ಲಿ ಒಂದು ರನ್ ಸೋಲು
2016ರಲ್ಲಿ ವಿಂಡೀಸ್ ಪ್ರವಾಸ ಕೈಗೊಂಡಿದ್ದ ಭಾರತ ತಂಡ ಮೊದಲ ಮೊದಲ ಪಂದ್ಯದಲ್ಲಿ ಕೇವಲ 1 ರನ್ ಸೋಲುಕಂಡಿತ್ತು. ವಿಂಡೀಸ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಎಡಗೈ ದಾಂಡಿಗ ಇವೆನ್ ಲೆವಿಸ್ 49 ಎಸೆತಗಳಲ್ಲಿ 100 ರನ್ ಸಿಡಿಸಿ ತಂಡದ ಮೊತ್ತವನ್ನು 245 ರನ್ಗೇರಿಸಿದ್ದರು. ಈ ಮೊತ್ತ ಬೆನ್ನತ್ತಿದ ಭಾರತ ತಂಡ 20 ಓವರ್ಗಳಲ್ಲಿ 244 ರನ್ಗಳಿಸಿ ಒಂದು ರನ್ ಇಂದ ಸೋಲುಕಂಡಿತ್ತು. ಕನ್ನಡಿಗ ಕೆಎಲ್ ರಾಹುಲ್ 51 ಎಸೆತಗಳಲ್ಲಿ 110 ರನ್ಗಳಿಸಿದ್ದರು. ಕೊನೆಯ ಗೆಲುವಿಗೆ 2 ಅಗತ್ಯವಿದ್ದಾಗ ಧೋನಿ ಕ್ಯಾಚ್ ನೀಡಿ ಔಟಾಗುವುದರೊಂದಿಗೆ ಟೀಮ್ ಇಂಡಿಯಾ ಒಂದು ರನ್ನಿಂದ ಸೋಲುಕಂಡಿತ್ತು.
2017 ಪ್ರವಾಸದಲ್ಲೂ ಭಾರತಕ್ಕೆ ಸೋಲು
2017 ರ ಪ್ರವಾಸದಲ್ಲೂ ಭಾರತ ತಂಡ ವಿಂಡೀಸ್ ವಿರುದ್ಧ ಮುಗ್ಗರಿಸಿತ್ತು. ಈ ಪಂದ್ಯದಲ್ಲೂ ರನ್ಗಳ ಮಳೆ ಸುರಿದಿತ್ತು. ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ತಂಡ 20 ಓವರ್ಗಳಲ್ಲಿ 190 ರನ್ಗಳಿಸಿತ್ತು. 191 ರನ್ಗಳ ಮೊತ್ತ ಬೆನ್ನೆಟ್ಟಿದ ವಿಂಡೀಸ್ 18.3 ಓವರ್ಗಳಲ್ಲಿ ಗುರಿ ತಲುಪಿತ್ತು. ಭಾರತದ ಬೌಲರ್ಗಳನ್ನೂ ಬೆಂಡೆತ್ತಿದ್ದ ಲೆವಿಸ್ 62 ಎಸೆತಗಳಲ್ಲಿ 125 ರನ್ ಸೂರೆಗೈದಿದ್ದರು. 6 ಬೌಂಡರಿ ಹಾಗೂ 12 ಸಿಕ್ಸರ್ ಸಿಡಿಸಿ ವಿಂಡೀಸ್ಗೆ 9 ವಿಕೆಟ್ಗಳ ಗೆಲುವು ತಂದುಕೊಟ್ಟಿದ್ದರು.
2014 ಟಿ20 ವಿಶ್ವಕಪ್
2014ರ ವಿಶ್ವಕಪ್ನ ಲೀಗ್ನಲ್ಲಿ ಮುಖಾಮುಖಿಯಾಗಿದ್ದ ಭಾರತ ಹಾಗೂ ವಿಂಡೀಸ್ ಪಂದ್ಯದಲ್ಲಿ ಭಾರತ 130 ರನ್ಗಳ ಸಾಧಾರಣ ಮೊತ್ತವನ್ನು ಕೊನೆಯ ಓವರ್ನಲ್ಲಿ ತಲುಪಿ, 7 ವಿಕೆಟ್ಗಳ ಜಯ ಸಾಧಿಸಿತ್ತು. ಕೊನೆಯ ಓವರ್ನಲ್ಲಿ ಭಾರತ ತಂಡಕ್ಕೆ ಕೇವಲ ಒಂದು ರನ್ ಅಗತ್ಯವಿತ್ತು. ಸ್ಯಾಮ್ಯುಯೆಲ್ ಎಸೆದ ಕೊನೆಯ ಓವರ್ನಲ್ಲಿ ಮೂರು ಎಸೆತ ಎದುರಿಸಿದ ಯುವಿ ಯಾವುದೇ ರನ್ಗಳಿಸದೇ ವಿಕೆಟ್ ಒಪ್ಪಿಸಿದರು. ಆದರೆ, ನಾಲ್ಕನೆ ಎಸೆತದಲ್ಲಿ ರೈನಾ ಒಂದು ರನ್ ತೆಗೆದು ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.
2018 ರ ಟಿ-20 ಸರಣಿಯ ಕೊನೆಯ ಪಂದ್ಯ
2018ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ವಿಂಡೀಸ್ ಮೊದಲೆರಡು ಪಂದ್ಯಗಳನ್ನು ಕಳೆದುಕೊಂಡು 2-0ಯಲ್ಲಿ ಸರಣಿ ಕಳೆದುಕೊಂಡಿತ್ತು. ಆದರೆ, ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ವಿಂಡೀಸ್ 181 ರನ್ಗಳಿಸಿತ್ತು. 182 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಕೊನೆಯ ಓವರ್ನಲ್ಲಿ 5 ರನ್ಗಳ ಅಗತ್ಯವಿತ್ತು. 92 ರನ್ಗಳಿಸಿದ್ದ ಧವನ್ ಹಾಗೂ ಮನೀಷ್ ಪಾಂಡೆ ಕ್ರೀಸ್ನಲ್ಲಿದ್ದರು. ಫ್ಯಾಬಿಯಾನ್ ಅಲೆನ್ ಎಸೆದ ಕೊನೆಯ ಓವರ್ನಲ್ಲಿ ಧವನ್ರ ವಿಕೆಟ್ ಪಡೆದರು. ಕೊನೆಯ ಒಂದು ಪಂದ್ಯದಲ್ಲಿ ಗೆಲುವಿಗೆ ಒಂದು ರನ್ ಅಗತ್ಯವಿತ್ತು, ಪಾಂಡೆ ಕಷ್ಟಪಟ್ಟು ಸಿಂಗಲ್ ಪಡೆಯುವ ಮೂಲಕ ಭಾರತಕ್ಕೆ 6 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು.
ಈ ಪಂದ್ಯಗಲಷ್ಟೇ ಅಲ್ಲದೆ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು 10 ಬಾರಿ ಮುಖಾಮುಖಿಯಾಗಿದ್ದು ಎರಡೂ ತಂಡಗಳೂ ತಲಾ 5 ಬಾರಿ ಜಯಗಳಿಸಿವೆ. ಆದರೆ ವಿಂಡೀಸ್ ನೆಲದಲ್ಲಿ ಭಾರತ ತಂಡ ಒಂದು ಪಂದ್ಯ ಮಾತ್ರ ಗೆದ್ದಿದೆ. ಉಳಿದ 4 ಪಂದ್ಯ ಏಷ್ಯಾದಲ್ಲಿ ಗೆದ್ದಿದೆ. ಈ ಸರಣಿಯಲ್ಲಾದರೂ ವಿಂಡೀಸ್ ವಿರುದ್ಧ ಪ್ರಾಬಲ್ಯ ಸಾಧಿಸುವುದೇ ಎಂದು ಕಾದು ನೋಡಬೇಕಿದೆ.