ಪೋರ್ಟ್ ಆಫ್ ಸ್ಪೇನ್: ಭಾರತ ಅರಂಭಿಕ ಆಟಗಾರ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ ಇನ್ನು ಕೇವಲ 26 ರನ್ಗಳಿಸಿದರೆ ಹೆಚ್ಚು ರನ್ಗಳಿಸಿದ ಭಾರತೀಯರ ಪಟ್ಟಿಯಲ್ಲಿ ಯುವರಾಜ್ ಸಿಂಗ್ರನ್ನು ಹಿಂದಿಕ್ಕಲಿದ್ದಾರೆ.
304 ಏಕದಿನ ಪಂದ್ಯಗಳಾಡಿದ್ದ ಯುವರಾಜ್ ಸಿಂಗ್ 8701 ರನ್ಗಳಿಸಿದ್ದಾರೆ. ರೋಹಿತ್ ಶರ್ಮಾ 217 ಪಂದ್ಯಗಳಿಂದ 8676 ರನ್ಗಳಿಸಿದ್ದು, ಇಂದಿನ ಪಂದ್ಯದಲ್ಲಿ 26 ರನ್ಗಳಿಸಿದರೆ ರೋಹಿತ್ ಯುವಿದಾಖಲೆ ಬ್ರೇಕ್ ಮಾಡಲಿದ್ದಾರೆ.
ಅತಿ ಹೆಚ್ಚು ರನ್ಗಳಿಸಿದವರ ಪಟ್ಟಿಯಲ್ಲಿ ಸಚಿನ್(18426) ವಿರಾಟ್ ಕೊಹ್ಲಿ(11406) ಸೌರವ್ ಗಂಗೂಲಿ(11363), ರಾಹುಲ್ ದ್ರಾವಿಡ್(10889) ಧೋನಿ(10773) ಅಜರುದ್ಧೀನ್ (9378), ಯುವರಾಜ್ ಸಿಂಗ್ (8701)ರನ್ಗಳಿಸಿ ರೋಹಿತ್ಗಿಂತ ಮುಂದಿದ್ದಾರೆ.