ETV Bharat / sports

ರಾಹುಲ್-ರಹಾನೆ ಸಮಯೋಚಿತ ಆಟ.. ಟೀಂ ಇಂಡಿಯಾಗೆ ಮೊದಲ ದಿನದ ಗೌರವ.. - ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್​

ಮಳೆಯಿಂದ ವಿಳಂಬವಾದ ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿ ಪಡೆ ಆರು ವಿಕೆಟ್ ನಷ್ಟಕ್ಕೆ 203 ರನ್​ ಗಳಿಸಿದೆ. ಕನ್ನಡಿಗ ಕೆ ಎಲ್‌ ರಾಹುಲ್ ಹಾಗೂ ಅಜಿಂಕ್ಯ ರಹಾನೆ ಉತ್ತಮ ಆಟದಿಂದ ಭಾರತ ಸುಸ್ಥಿತಿಯಲ್ಲಿದೆ.

ರಾಹುಲ್-ರಹಾನೆ
author img

By

Published : Aug 23, 2019, 7:47 AM IST

ಆ್ಯಂಟಿಗುವಾ: ವಿಂಡೀಸ್ ವಿರುದ್ಧದ ಮಳೆ ಬಾಧಿತ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಥಮ ದಿನದ ಗೌರವ ಸಂಪಾದಿಸಿದೆ. ಆರು ವಿಕೆಟ್ ನಷ್ಟಕ್ಕೆ 203 ರನ್​ ಕಲೆ ಹಾಕಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ವಿರಾಟ್ ಪಡೆಗೆ ಕೆರಿಬಿಯನ್ ಬೌಲರ್ಸ್ ಆಘಾತ ನೀಡಿದರು. 25 ರನ್​ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಕುಸಿತ ಕಂಡಿತ್ತು.

ಆಂಭಿಕ ಆಟಗಾರ ಮಯಾಂಕ್ ಅಗರ್ವಾಲ್(5), ಚೇತೇಶ್ವರ ಪೂಜಾರ(2) ಹಾಗೂ ನಾಯಕ ಕೊಹ್ಲಿ (9) ರನ್ನಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಈ ವೇಳೆ ತಂಡಕ್ಕೆ ಆಸರೆಯಾದ ಕನ್ನಡಿಗ ಕೆ ಎಲ್‌ ರಾಹುಲ್​ ಹಾಗೂ ಅಜಿಂಕ್ಯ ರಹಾನೆ ಉತ್ತಮ ಜೊತೆಯಾಟ ನೀಡಿದರು.

ರಾಹುಲ್ 44 ರನ್​ ಗಳಿಸಿ ಔಟಾದರೆ ರಹಾನೆ ಅತ್ಯಮೂಲ್ಯ 81 ಸಿಡಿಸಿ ತಂಡದವನ್ನು ಆತಂಕದಿಂದ ಪಾರು ಮಾಡಿದರು. ಹನುಮ ವಿಹಾರಿ ಆಟ 32 ರನ್ನಿಗೆ ಕೊನೆಯಾಯಿತು. 20 ರನ್​ ಗಳಿಸಿರುವ ರಿಷಭ್ ಪಂತ್ ಹಾಗೂ 3 ರನ್​ ಗಳಿಸಿರುವ ರವೀಂದ್ರ ಜಡೇಜಾ ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.

ವಿಂಡೀಸ್ ಪರ ಕೆಮರ್ ರೋಚ್ 3, ಶಾನನ್ ಗೇಬ್ರಿಯಲ್ 2 ಹಾಗೂ ರೋಸ್ಟನ್ ಚೇಸ್ 1 ವಿಕೆಟ್ ಪಡೆದು ಮಿಂಚಿದರು.​

Intro:Body:

ಮಳೆ ಬಾಧಿತ ಪಂದ್ಯದಲ್ಲಿ ಮಿಂಚಿದ ಕನ್ನಡಿಗ ರಾಹುಲ್... ರಹಾನೆ ಸಮಯೋಚಿತ ಆಟಕ್ಕೆ ಭಾರತಕ್ಕೆ ಮೊದಲ ದಿನದ ಗೌರವ

ಆ್ಯಂಟಿಗುವಾ: ಮಳೆ ಬಾಧಿತ ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಥಮ ದಿನದ ಗೌರವ ಸಂಪಾದಿಸಿದ್ದು, ಆರು ವಿಕೆಟ್ ನಷ್ಟಕ್ಕೆ 203 ರನ್​ ಕಲೆ ಹಾಕಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ವಿರಾಟ್ ಪಡೆಗೆ ಕೆರಬಿಯನ್ ಬೌಲರ್ಸ್ ಆಘಾತ ನೀಡಿದರು. 25 ರನ್​ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಕುಸಿತ ಕಂಡಿತ್ತು.

ಆಂಭಿಕ ಆಟಗಾರ ಮಯಾಂಕ್ ಅಗರ್ವಾಲ್(5), ಚೇತೇಶ್ವರ ಪೂಜಾರ(2) ಹಾಗೂ ನಾಯಕ ಕೊಹ್ಲಿ (9) ರನ್ನಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಈ ವೇಳೆ ತಂಡಕ್ಕೆ ಆಸರೆಯಾದ ಕನ್ನಡಿಗ ಕೆ.ಎಲ್​.ರಾಹುಲ್​ ಹಾಗೂ ಅಜಿಂಕ್ಯ ರಹಾನೆ ಉತ್ತಮ ಜೊತೆಯಾಟ ನೀಡಿದರು.

ರಾಹುಲ್ 44 ರನ್​ ಗಳಿಸಿ ಔಟಾದರೆ ರಹಾನೆ ಅತ್ಯಮೂಲ್ಯ 81 ಸಿಡಿಸಿ ತಂಡದವನ್ನು ಆತಂಕದಿಂದ ಪಾರು ಮಾಡಿದರು. ಹನುಮ ವಿಹಾರಿ ಆಟ 32 ರನ್ನಿಗೆ ಕೊನೆಯಾಯಿತು.

20 ರನ್​ ಗಳಿಸಿರುವ ರಿಷಭ್ ಪಂತ್ ಹಾಗೂ 3 ರನ್​ ಗಳಿಸಿರುವ ರವೀಂದ್ರ ಜಡೇಜಾ ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.

ವಿಂಡೀಸ್ ಪರ ಕೆಮರ್ ರೋಚ್ 3, ಶಾನನ್ ಗೇಬ್ರಿಯಲ್ 2 ಹಾಗೂ ರೋಸ್ಟನ್ ಚೇಸ್ 1 ವಿಕೆಟ್ ಪಡೆದು ಮಿಂಚಿದರು.​ 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.