ETV Bharat / sports

2ನೇ ಪಂದ್ಯದಲ್ಲಿ ಮೊದಲ ಜಯದ ನಿರೀಕ್ಷೆ; ಯಾರಿಗೆ ಸಿಗಲಿದೆ 11ರ ಬಳಗದಲ್ಲಿ ಅವಕಾಶ?

ಭಾರತ ಮತ್ತು ವೆಸ್ಟ್​ ಇಂಡೀಸ್​ ವಿರುದ್ಧದ 2ನೇ ಏಕದಿನ ಪಂದ್ಯ ಇಂದು ಪೋರ್ಟ್​ ಆಫ್​ ಸ್ಪೈನ್​ನಲ್ಲಿ ನಡಯಲಿದೆ.

India vs West Indies
author img

By

Published : Aug 11, 2019, 1:04 PM IST

ಪೋರ್ಟ್​ ಆಫ್​ ಸ್ಪೈನ್​: ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಏಕದಿನ ಪಂದ್ಯ ಮಳೆಗೆ ಆಹುತಿಯಾಗಿದ್ದು, 2 ನೇ ಪಂದ್ಯದಲ್ಲಿ ಗೆಲುವಿನ ನಗೆ ಬೀರಲು ಕೊಹ್ಲಿಪಡೆ ಕಾತರದಲ್ಲಿದೆ.

ಮೊದಲ ಮ್ಯಾಚ್‌ನಲ್ಲಿ ಟಾಸ್​ ಗೆದ್ದ ಭಾರತ ತಂಡ ಬೌಲಿಂಗ್​ ಆಯ್ದುಕೊಂಡಿತ್ತು. ಆದರೆ ಮಳೆಯ ಕಾರಣ 13 ಓವರ್​ಗಳ ಆಟ ಮಾತ್ರ ನಡೆದಿತ್ತು. ಕ್ರಿಸ್​ ಗೇಲ್​ 31 ಎಸೆತಗಳನ್ನೆದುರಿಸಿ ಕೇವಲ 4 ರನ್​ಗಳಿಸಿ ಔಟಾಗಿದ್ದರು. ಆದರೆ ಲೆವಿಸ್​ ಮಾತ್ರ 36 ಎಸೆತಗಳಲ್ಲಿ 3 ಸಿಕ್ಸರ್​ ಹಾಗೂ 2 ಬೌಂಡರಿ ಸಹಿತ 40 ರನ್ ​ಗಳಿಸಿದ್ದರು. ಕುಲ್ದೀಪ್​, ಗೇಲ್​ ವಿಕೆಟ್​ ಪಡೆದು ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು.

ವೇಗದ ಬೌಲರ್​ಗಳಾದ ಭುವನೇಶ್ವರ್​ ಹಾಗೂ ಮೊಹಮ್ಮದ್​ ಶಮಿ ಅದ್ಭುತ ಪ್ರದರ್ಶನ ನೀಡಿದ್ದರು. ಭುವಿ 4 ಓವರ್​ಗಳಲ್ಲಿ 11 ರನ್ನು ನೀಡಿದ್ರೆ, ಶಮಿ 3 ಓವರ್​ಗಳಲ್ಲಿ 5 ರನ್​ ಕೊಟ್ಟಿದ್ದರು. ಆದರೆ ಮತ್ತೊಬ್ಬ ಯುವ ವೇಗಿ ಖಲೀಲ್​ ಅಹ್ಮದ್​ 3 ಓವರ್​ಗಳಲ್ಲಿ 27 ರನ್​ ನೀಡಿ ದುಬಾರಿಯಾಗಿದ್ದರು. ಇಂದಿನ ಪಂದ್ಯದಲ್ಲಿ ಟಿ20 ಸರಣಿಯಲ್ಲಿ ಮಿಂಚಿದ್ದ ನವದೀಪ್ ಸೈನಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ.

ಬ್ಯಾಟಿಂಗ್​ ವಿಭಾಗದಲ್ಲಿ ಯಾವುದೇ ಬದಲಾವಣೆಯಾಗುವ ಲಕ್ಷಣವಿಲ್ಲ. ಶಿಖರ್ ಧವನ್​ ತಂಡ ಸೇರಿಕೊಂಡಿದ್ದು, ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. 4ನೇ ಕ್ರಮಾಂಕದಲ್ಲಿ ಶ್ರೇಯಸ್​ ಅಯ್ಯರ್​ ಆಡಿದ್ರೆ, ಪಂತ್​ 5, ಜಾಧವ್​ 6 ಜಡೇಜಾ 7ನೇ ಕ್ರಮಾಂಕದಲ್ಲಿ ಮುಂದುರಿಯಲಿದ್ದಾರೆ.

ಸಂಭಾವ್ಯ ತಂಡ:

ಭಾರತ:

ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೇದರ್ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ನವದೀಪ್ ಸೈನಿ/ಖಲೀಲ್​ ಅಹ್ಮದ್​.

ವೆಸ್ಟ್​ ಇಂಡೀಸ್:

ಕ್ರಿಸ್ ಗೇಲ್, ಎವಿನ್ ಲೆವಿಸ್, ಶಾಯ್​ ಹೋಪ್ (ವಿಕೆಟ್ ಕೀಪರ್), ನಿಕೋಲಸ್ ಪೂರನ್, ಶಿಮ್ರೋನ್ ಹೆಟ್ಮೇರ್, ರಾಸ್ಟನ್ ಚೇಸ್, ಜೇಸನ್ ಹೋಲ್ಡರ್ (ನಾಯಕ), ಕಾರ್ಲೊಸ್ ಬ್ರಾಥ್​ವೈಟ್, ಫ್ಯಾಬಿಯನ್ ಅಲೆನ್, ಶೆಲ್ಡನ್ ಕಾಟ್ರೆಲ್, ಕೆಮರ್ ರೋಚ್

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.