ಕಟಕ್(ಒಡಿಶಾ): ವೆಸ್ಟ್ ವಿಂಡೀಸ್ ವಿರುದ್ಧ ಸತತ 10ನೇ ಸರಣಿ ಗೆಲ್ಲುವ ಉತ್ಸಾಹದಲ್ಲಿರುವ ಭಾರತ ತಂಡ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.
ಮೊದಲ ಪಂದ್ಯ ಸೋತರೂ ಎರಡನೇ ಪಂದ್ಯದಲ್ಲಿ ಪುಟಿದೆದ್ದ ಭಾರತ 107 ರನ್ಗಳ ಭರ್ಜರಿ ಜಯ ಸಾಧಿಸಿ ಸರಣಿಯನ್ನು 1-1ರಲ್ಲಿ ಸಮಲ ಸಾಧಿಸಿತ್ತು. ಇಂದು ಕಪ್ ಗೆಲ್ಲಲು ಮುಖ್ಯವಾಗಿರುವ ಪಂದ್ಯದಲ್ಲಿ ಒಂದು ಬದಲಾವಣೆಯೊಂದಿಗೆ ಟೀಂ ಕಣಕ್ಕಿಳಿಯುತ್ತಿದೆ. ಬೆನ್ನು ನೋವಿಗೆ ತುತ್ತಾಗಿರುವ ದೀಪಕ್ ಚಹಾರ್ ಬದಲು ಯುವ ಬೌಲರ್ ನವ್ದೀಪ್ ಸೈನಿ ತಂಡ ಸೇರಿದ್ದು, ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ವೆಸ್ಟ್ ಇಂಡೀಸ್ ತಂಡ ಎರಡನೇ ಏಕದಿನ ಪಂದ್ಯವಾಡಿದ ತಂಡವನ್ನೇ ಇಂದಿನ ಪಂದ್ಯದಲ್ಲೂ ಕಣಕ್ಕಿಳಿಸಿದೆ.
-
India have won the toss and elected to field in the third ODI.
— ICC (@ICC) December 22, 2019 " class="align-text-top noRightClick twitterSection" data="
Navdeep Saini gets his maiden ODI 🧢 #IndvWI pic.twitter.com/brFipAKTQo
">India have won the toss and elected to field in the third ODI.
— ICC (@ICC) December 22, 2019
Navdeep Saini gets his maiden ODI 🧢 #IndvWI pic.twitter.com/brFipAKTQoIndia have won the toss and elected to field in the third ODI.
— ICC (@ICC) December 22, 2019
Navdeep Saini gets his maiden ODI 🧢 #IndvWI pic.twitter.com/brFipAKTQo
ಬಾರಬತಿಯಲ್ಲಿ 15 ವರ್ಷಗಳಿಂದ ಸೋಲೇ ಕಾಣದ ಭಾರತ
ಭಾರತ ತಂಡ ಕಟಕ್ನ ಬಾರಬತಿ ಸ್ಟೇಡಿಯಂನಲ್ಲಿ ಆಡಿರುವ 18 ಪಂದ್ಯಗಳಲ್ಲಿ 12 ಗೆಲುವು ಸಾಧಿಸಿದೆ. ಕೇವಲ 6 ಪಂದ್ಯಗಳಲ್ಲಿ ಸೋಲು ಕಂಡಿದೆ. ಅದರಲ್ಲೂ 2004ರಿಂದ ಈ ಕ್ರೀಡಾಂಗಣದಲ್ಲಿ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಹೀಗಾಗಿ ಇಲ್ಲಿ ಕೊಹ್ಲಿ ಬಳಗವೇ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಸತತ 10ನೇ ಸರಣಿ ಜಯದತ್ತ ಕೊಹ್ಲಿ ಬಳಗ
ಭಾರತ ಈಗಾಗಲೇ ಸತತ ವಿಂಡೀಸ್ ವಿರುದ್ಧ ಸತತ 9 ಏಕದಿನ ಸರಣಿ ಸರಣಿಯನ್ನು ಗೆದ್ದು ದಾಖಲೆ ಬರೆದಿದೆ. ಈ ಪಂದ್ಯ ಗೆದ್ದರೆ ಕೊಹ್ಲಿ ಬಳಗ ವಿಂಡೀಸ್ ವಿರುದ್ಧ ಸತತ 10ನೇ ಏಕದಿನ ಸರಣಿ ಗೆದ್ದಂತಾಗುತ್ತದೆ.
ಭಾರತ ತಂಡ:
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ(ಉ.ನಾ) ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕೆದಾರ್ ಜಾದವ್,ರವೀಂದ್ರ ಜಡೇಜಾ, ಕುಲ್ದೀಪ್, ನವ್ದೀಪ್ ಸೈನಿ, ಮೊಹಮ್ಮದ್ ಶಮಿ, ಶಾರ್ದುಲ್ ಟಾಕೂರ್
ವೆಸ್ಟ್ ಇಂಡೀಸ್
ಶಾಯ್ ಹೋಪ್, ಇವೆನ್ ಲೆವಿಸ್, ಶಿಮ್ರಾನ್ ಹೆಟ್ಮಯರ್,ರಾಸ್ಟನ್ ಚೇಸ್, ನಿಕೋಲಸ್ ಪೂರನ್, ಕೀರನ್ ಪೊಲಾರ್ಡ್(ನಾಯಕ), ಜೇಸನ್ ಹೋಲ್ಡರ್, ಶೆಲ್ಡನ್ ಕಾಟ್ರೆಲ್, ಖಾರಿ ಪೀರ್ರೆ, ಅಲ್ಜಾರಿ ಜೋಸೆಪ್, ಕೀಮೋ ಪಾಲ್