ತಿರುವನಂತಪುರಂ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ನಾಯಕ ಕೀರನ್ ಪೊಲಾರ್ಡ್ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.
-
2nd T20I. West Indies win the toss and elect to field https://t.co/bYoPMmmze4 #IndvWI @Paytm
— BCCI (@BCCI) December 8, 2019 " class="align-text-top noRightClick twitterSection" data="
">2nd T20I. West Indies win the toss and elect to field https://t.co/bYoPMmmze4 #IndvWI @Paytm
— BCCI (@BCCI) December 8, 20192nd T20I. West Indies win the toss and elect to field https://t.co/bYoPMmmze4 #IndvWI @Paytm
— BCCI (@BCCI) December 8, 2019
ಪ್ರಥಮ ಪಂದ್ಯದಲ್ಲಿ ಪ್ರವಾಸಿ ತಂಡ ನೀಡಿದ 208 ರನ್ಗಳ ಗುರಿಯನ್ನು 8 ಎಸೆತ ಇರುವಂತೆಯೇ ಗೆದ್ದಿದ್ದ ವಿರಾಟ್ ಕೊಹ್ಲಿ ಪಡೆ ಸದ್ಯ ಸರಣಿಯ ಮೇಲೆ ಕಣ್ಣಿಟ್ಟಿದೆ. ಇತ್ತ ದೊಡ್ಡ ಮೊತ್ತ ಪೇರಿಸಿಯೂ ಪಂದ್ಯ ಕೈಚೆಲ್ಲಿದ್ದ ವೆಸ್ಟ್ ಇಂಡೀಸ್ ಇಂದಿನ ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸುವ ಯೋಚನೆಯಲ್ಲಿದೆ.
ಬ್ಯಾಟಿಂಗ್ನಲ್ಲಿ ಭಾರತ ಅತ್ಯಂತ ಬಲಿಷ್ಠವಾಗಿದೆ. ಆರಂಭಿಕ ಆಟಗಾರ ಕೆ ಎಲ್ ರಾಹುಲ್, ನಾಯಕ ಕೊಹ್ಲಿ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದರು. ರೋಹಿತ್ ಶರ್ಮಾ, ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಹೈದರಾಬಾದ್ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲವಾದರೂ ಇವರ ಆಟ ಕಡೆಗಣಿಸುವಂತಿಲ್ಲ.
ಭಾರತ ಮೊದಲ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ನೀರಸ ಪ್ರದರ್ಶನ ನೀಡಿತ್ತು. 200ಕ್ಕೂ ಅಧಿಕ ರನ್ ಬಿಟ್ಟುಕೊಟ್ಟು ಕೊಂಚ ಹಿನ್ನಡೆ ಅನುಭವಿಸಿತ್ತು. ಹ್ಯಾಟ್ರಿಕ್ ಹೀರೋ ದೀಪಕ್ ಚಹರ್ 56 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡಿದ್ದರು. ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್ ಸಹ ಪರಿಣಾಮಕಾರಿ ಪ್ರದರ್ಶನ ನೀಡಿಲ್ಲ. ಬೌಲಿಂಗ್ ಜೊತೆಗೆ ಕ್ಷೇತ್ರ ರಕ್ಷಣೆಯಲ್ಲೂ ಭಾರತ ಸುಧಾರಿಸಬೇಕಿದೆ.
ವೆಸ್ಟ್ ಇಂಡೀಸ್ ಸಹ ಎದುರಾಳಿ ತಂಡದಂತೆ ಬೌಲಿಂಗ್ನಲ್ಲಿ ಸುಧಾರಿಸಬೇಕಿದೆ. ಮೊದಲ ಪಂದ್ಯದಲ್ಲಿ ಕೆಸ್ರಿಕ್ ವಿಲಿಯಮ್ಸ್ 60 ರನ್ ನೀಡಿದ್ದರು. ಜೇಸನ್ ಹೋಲ್ಡರ್ ಹಾಗೂ ಖ್ಯಾರಿ ಪೀರೆ ಬೌಲಿಂಗ್ನಲ್ಲೂ ಸಾಕಷ್ಟ ರನ್ ಬಂದಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ವಿಂಡೀಸ್ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ.
ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್, ದೀಪಕ್ ಚಹರ್, ಭುವನೇಶ್ವರ್ ಕುಮಾರ್
ವಿಂಡೀಸ್ ತಂಡ: ಕೀರನ್ ಪೊಲಾರ್ಡ್(ನಾಯಕ), ನಿಕೋಲಸ್ ಪೂರನ್, ಶೆಲ್ಡನ್ ಕಾಟ್ರೆಲ್,ಎವಿನ್ ಲೆವಿಸ್, ಕೆಸ್ರಿಕ್ ವಿಲಿಯಮ್ಸ್, ಶಿಮ್ರನ್ ಹೇಟ್ಮಯರ್, ಖ್ಯಾರಿ ಪೀರೆ, ಹೇಡನ್ ವಾಲ್ಶ್, ಬ್ರಾಂಡನ್ ಕಿಂಗ್, ಲೆಂಡ್ಲ್ ಸಿಮನ್ಸ್, ಜಾಸನ್ ಹೋಲ್ಡರ್.