ಪೋರ್ಟ್ ಆಫ್ ಸ್ಪೇನ್: ಭಾರತದ ವಿರುದ್ಧ ನಡೆಯುವ ಎರಡನೇ ಏಕದಿನ ಪಂದ್ಯದಲ್ಲಿ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ 300ನೇ ಏಕದಿನ ಪಂದ್ಯವಾಡುವ ಮೂಲಕ ಅತಿ ಹೆಚ್ಚು ಏಕದಿನ ಪಂದ್ಯವಾಡಿದ ವಿಂಡೀಸ್ ಬ್ಯಾಟ್ಸ್ಮನ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.
ಗೇಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಭಾರತದ ವಿರುದ್ಧದ ಟೂರ್ನಿಯಲ್ಲಿ ಬಹುತೇಕ ಅಂತ್ಯಗೊಳ್ಳಲಿದೆ. ಈಗಾಗಲೇ 299 ಏಕದಿನ ಪಂದ್ಯಗಳನ್ನಾಡಿರುವ ಅವರು ಭಾರತದ ವಿರುದ್ಧ ಇಂದು ನಡೆಯುವ 300ನೇ ಪಂದ್ಯದವನ್ನಾಡುವ ಮೂಲಕ ತನ್ನದೇ ದೇಶದ ಕ್ರಿಕೆಟ್ ದಿಗ್ಗಜ ಬ್ರಯಾನ್ ಲಾರಾ ದಾಖಲೆ ಬ್ರೇಕ್ ಮಾಡಲಿದ್ದಾರೆ. ಲಾರಾ 299 ಏಕದಿನ ಪಂದ್ಯಗಳನ್ನಾಡಿದ್ದಾರೆ.
ವಿಂಡೀಸ್ ಪರ ಗರಿಷ್ಠ ರನ್ ಸರದಾರರಾಗಲು ಗೇಲ್ಗೆ ಬೇಕಿದೆ 7 ರನ್

296 ಪಂದ್ಯಗಳಲ್ಲಿ ವಿಂಡೀಸ್ ತಂಡ ಪ್ರತಿನಿಧಿಸಿರುವ ಗೇಲ್ ರನ್ಗಳಿಸಿದ್ದಾರೆ. ಇದರ ಭಾರತದ ವಿರುದ್ಧ 7 ರನ್ಗಳಿಸಿದರೆ ಬ್ರಿಯಾನ್ ಲಾರರನ್ನು ಹಿಂದಿಕ್ಕಿ ವಿಂಡೀಸ್ ಪರ ಗರಿಷ್ಠ ರನ್ ಸರದಾರರಾಗಲಿದ್ದಾರೆ. ಲಾರಾ 10248 ರನ್ಗಳಿಸಿದ್ದಾರೆ.
ಇದೇ ಪಂದ್ಯದಲ್ಲಿ 107 ರನ್ಗಳಿಸಿದರೆ ಗೇಲ್ ಭಾರತದ ವಿರುದ್ಧ ಅತಿ ಹೆಚ್ಚು ರನ್ಗಳಿಸಿದ ವಿಂಡೀಸ್ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ. 1357 ರನ್ಗಳಿಸಿರುವ ಡೆಸ್ಮಂಡ್ ಹೇನ್ಸ್ ಭಾರತದ ವಿರುದ್ಧ ಹೆಚ್ಚು ರನ್ಗಳಿಸಿದ ವಿಂಡೀಸ್ ಪ್ಲೇಯರ್ ಆಗಿದ್ದಾರೆ.