ಆ್ಯಂಟಿಗುವಾ: ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅಜಿಂಕ್ಯ ರಹಾನೆ(81) ಹಾಗೂ ಆಲ್ರೌಂಡರ್ ರವಿಂದ್ರ ಜಡೇಜಾ(58)ರನ್ಗಳ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ 96.4 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 297ರನ್ಗಳಿಗೆ ಆಲೌಟ್ ಆಗಿದೆ.
ಟಾಸ್ ಸೋತು ನಿನ್ನೆ ಬ್ಯಾಟಿಂಗ್ ನಡೆಸಿದ್ದ ಟೀಂ ಇಂಡಿಯಾ ಮೊದಲ ದಿನಾಂತ್ಯಕ್ಕೆ 6ವಿಕೆಟ್ ಕಳೆದುಕೊಂಡು 203ರನ್ ಕಲೆ ಹಾಕಿತ್ತು. ಇಂದು ಬ್ಯಾಟಿಂಗ್ ಮುಂದುವರಿಸಿದ್ದ ಟೀಂ ಇಂಡಿಯಾ 94ರನ್ ಸೇರ್ಪಡೆ ಮಾಡಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜಡೇಜಾ ಉಪಯುಕ್ತ 58ರನ್ ಕಲೆ ಹಾಕಿದರು. ಇವರಿಗೆ ಇಶಾಂತ್ ಶರ್ಮಾ(19) ಉತ್ತಮ ಸಾಥ್ ನೀಡಿದರು.
ವಿಂಡೀಸ್ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ರೂಚ್ 4ವಿಕೆಟ್,ಗೇಬ್ರಿಯಲ್ 3ವಿಕೆಟ್ ಹಾಗೂ ರೋಸ್ಟರ್ 2ವಿಕೆಟ್ ಹಾಗೂ ಹೋಲ್ಡರ್ 1ವಿಕೆಟ್ ಪಡೆದು ಮಿಂಚಿದರು.
ನಿನ್ನೆ ರಾಹುಲ್(44), ಅಗರವಾಲ್(5), ಪೂಜಾರ(2),ಕೊಹ್ಲಿ(9), ರಹಾನೆ(81)ವಿಹಾರಿ(32)ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದ್ದರೆ, ಇಂದು ಪಂತ್(24), ಜಡೇಜಾ(58), ಇಶಾಂತ್(19) ಬುಮ್ರಾ ಅಜೇಯ(4)ರನ್ಗಳಿಕೆ ಮಾಡಿದರು.