ETV Bharat / sports

ಭಾರತ-ಶ್ರೀಲಂಕಾ ನಡುವಿನ ಮೊದಲ ಟಿ20 ಕದನ ಮಳೆಗಾಹುತಿ... - ಭಾರತ- ಶ್ರೀಲಂಕಾ ಟಿ20

ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟಿ-20 ಪಂದ್ಯ ಮಳೆಯಿಂದ ರದ್ದುಗೊಂಡಿದೆ.

India vs SL
India vs SL
author img

By

Published : Jan 5, 2020, 6:39 PM IST

Updated : Jan 5, 2020, 11:57 PM IST

ಗುವಾಹಟಿ: ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟಿ-20 ಪಂದ್ಯವು ಮಳೆಯಿಂದ ರದ್ದುಗೊಂಡಿದೆ.

2020ರಲ್ಲಿ ಭಾರತ ತಂಡ ಆಡುತ್ತಿದ್ದ ಮೊದಲ ಪಂದ್ಯವೇ ಮಳೆಗೆ ಆಹುತಿಯಾಗಿದೆ. ಟಾಸ್​ ಗೆದ್ದ ಭಾರತ ತಂಡ ನಾಯಕ ವಿರಾಟ್​ ಕೊಹ್ಲಿ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದರು. ಆದರೆ ನಿರಂತರವಾಗಿ ಸುರಿದ ಮಳೆಯಿಂದ ಪಂದ್ಯ ನಡೆಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅಂಪೈರ್​ಗಳು ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡರು.

ಇನ್ನು ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾ ವಿಶ್ರಾಂತಿ ತೆಗೆದುಕೊಂಡಿರುವುದರಿಂದ ರಾಹುಲ್​ ಹಾಗೂ ಗಾಯದಿಂದ ಚೇತರಿಸಿಕೊಂಡಿರುವ ಶಿಖರ್​ ಭಾರತದ ಪರ ಇನ್ನಿಂಗ್ಸ್​ ಆರಂಭಿಸಬೇಕಿತ್ತು. ಹಾಗೆಯೇ ಸ್ಟಾರ್​ ಬೌಲರ್​ ಜಸ್ಪ್ರೀತ್​ ಬುಮ್ರಾ ಕೂಡ ದೀರ್ಘ ಸಮಯದ ಬಳಿಕ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಮ್​ ಬ್ಯಾಕ್​ ಮಾಡಲು ಕಾತರರಾಗಿದ್ದರು. ಹಾಗೆಯೇ ಪಂದ್ಯ ವೀಕ್ಷಣೆಗೆ ಬಂದಿದ್ದ ಸಾವಿರಾರು ಅಭಿಮಾನಿಗಳು ನಿರಾಸೆಯಿಂದ ಮರಳಬೇಕಾಯಿತು.

ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯವು ಜ. 7ರಂದು ಇಂದೋರ್​ನಲ್ಲಿ ನಡೆಯಲಿದೆ.

Intro:Body:

ಗುವಾಹಟಿ: ಸುಮಾರು 22 ತಿಂಗಳ ಬಳಿಕ ಭಾರತ ಹಾಗೂ ಶ್ರೀಲಂಕಾ ತಂಡಗಳು ದ್ವಿಪಕ್ಷೀಯ ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದ  ಭಾರತ ತಂಡ ಬೌಲಿಂಗ್​ ಆಯ್ದಕೊಂಡಿದೆ.

ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾ ವಿಶ್ರಾಂತಿ ತೆಗೆದುಕೊಂಡಿರುವುದರಿಂದ ರಾಹುಲ್​ ಹಾಗೂ ಗಾಯದಿಂದ ಚೇತರಿಸಿಕೊಂಡಿರುವ ಶಿಖರ್​ ಭಾರತದ ಪರ ಇನ್ನಿಂಗ್ಸ್​ ಆರಂಭಿಸಲಿದ್ದಾರೆ. ಮತ್ತೊಬ್ಬ ಸ್ಟಾರ್​ ಬೌಲರ್​ ಜಸ್ಪ್ರೀತ್​ ಬುಮ್ರಾ ಕೂಡ ದೀರ್ಘಸಮಯದ ಬಳಿಕ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಮ್​ ಬ್ಯಾಕ್​ ಮಾಡುತ್ತಿದ್ದಾರೆ. 

ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಕೆಎಲ್‌ ರಾಹುಲ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌ (ವಿಕೆಟ್‌ಕೀಪರ್‌), ರವೀಂದ್ರ ಜಡೇಜಾ, ಶಿವಂ ದುಬೆ, ಯಜುವೇಂದ್ರ ಚಹಲ್‌, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ನವದೀಪ್‌ ಸೈನಿ, ಶಾರ್ದುಲ್‌ ಠಾಕೂರ್‌, ಮನೀಶ್‌ ಪಾಂಡೆ, ವಾಷಿಂಗ್ಟನ್‌ ಸುಂದರ್‌, ಸಂಜು ಸ್ಯಾಮ್ಸನ್‌. 

ಲಸಿತ್‌ ಮಾಲಿಂಗ (ನಾಯಕ), ಧನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಏಂಜಲೊ ಮ್ಯಾಥ್ಯೂಸ್‌, ದಸುನ್‌ ಶನಕ, ಕುಸಾಲ್‌ ಪೆರೆರಾ, ನಿರೋಶನ್‌ ಡಿಕ್ವೆಲ್ಲಾ, ಧನಂಜಯ ಡಿ'ಸಿಲ್ವಾ, ಇಸುರು ಉದನಾ, ಭಾನುಕ ರಾಜಪಕ್ಷ, ಒಶಾದ ಫರ್ನಾಂಡೊ, ವಾನಿಂದು ಹಸರಂಗ, ಲಾಹಿರು ಕುಮಾರ, ಕುಶಲ್‌ ಮೆಂಡಿಸ್‌, ಲಕ್ಷಣ್‌ ಸಂದಕನ್‌, ಕಸುನ್‌ ರಜಿತ. 

Conclusion:
Last Updated : Jan 5, 2020, 11:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.