ಪುಣೆ: ಟೀಂ ಇಂಡಿಯಾ- ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡ ಮೂರಂಕಿ ಗಡಿ ದಾಟಿದ್ದು, ಸುಸ್ಥಿತಿಯಲ್ಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಕೊಹ್ಲಿ ಬಳಗಕ್ಕೆ ಉತ್ತಮ ಆರಂಭ ಸೂಚನೆ ದೊರೆತಿತ್ತು. ಆದರೆ ಮೊದಲ ಟೆಸ್ಟ್ನ ಶತಕವೀರ ರೋಹಿತ್ ಶರ್ಮ ಕೇವಲ 14 ರನ್ನಿಗೆ ವಿಕೆಟ್ ಒಪ್ಪಿಸಿ ಹೊರನಡೆದರು.
ಇನ್ನೊರ್ವ ಆರಂಭಿಕ ಆಟಗಾರ ಕನ್ನಡಿಗ ಮಯಾಂಕ್ ಅಗರ್ವಾಲ್ ಬೌಂಡರಿಗಳ ಮೂಲಕ ರನ್ ಹೆಚ್ಚಿಸುತ್ತಾ ಸಾಗಿದ್ದಾರೆ. ಇವರಿಗೆ ಚೆತೇಶ್ವರ ಪುಜಾರ ಉತ್ತಮ ಸಾಥ್ ನೀಡುತ್ತಿದ್ದು ಭಾರತ ಒಂದು ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿದೆ.
-
🙌🙌#INDvSA pic.twitter.com/C7RO2N3Uw2
— BCCI (@BCCI) October 10, 2019 " class="align-text-top noRightClick twitterSection" data="
">🙌🙌#INDvSA pic.twitter.com/C7RO2N3Uw2
— BCCI (@BCCI) October 10, 2019🙌🙌#INDvSA pic.twitter.com/C7RO2N3Uw2
— BCCI (@BCCI) October 10, 2019
ಮಯಾಂಕ್ ಅಗರ್ವಾಲ್ ಆಕರ್ಷಕ ಅರ್ಧಶತಕ(61*) ಗಳಿಸಿ ಮುನ್ನುಗ್ಗಿದ್ದಾರೆ. ಪೂಜಾರ 30 ರನ್ ಕಲೆ ಹಾಕಿದ್ದಾರೆ. ಸದ್ಯ ಉರುಳಿರುವ ಏಕೈಕ ವಿಕೆಟ್ ಕಗಿಸೋ ರಬಾಡ ಪಾಲಾಗಿದೆ.