ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ಪುಣೆಯಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ರನ್ ಮೆಷಿನ್ ದ್ವಿಶತಕ ಸಿಡಿಸಿ ಮಿಂಚಿದ್ದು, ಬರೋಬ್ಬರಿ 10 ತಿಂಗಳ ಬಳಿಕ ಕೊಹ್ಲಿ ಬ್ಯಾಟ್ನಿಂದ ಶತಕ ಸಿಡಿದಿದೆ.
183 ಎಸೆತಗಳಲ್ಲಿ 16 ಬೌಂಡರಿ ನೆರವಿನಿಂದ 104 ರನ್ ಬಾರಿಸಿದ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 69ನೇ ಶತಕ ಪೂರೈಸಿದ್ರು. ಇದರ ಜೊತೆಗೆ ಭಾರತದ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿಯ 12ನೇ ಶತಕವೂ ಇದಾಗಿದೆ. ವಿಶೇಷವೆಂದರೆ 336 ಎಸೆತಗಳಲ್ಲಿ 33 ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದ ಕೊಹ್ಲಿ ಅಜೇಯ 254 ರನ್ ಕಲೆ ಹಾಕಿದ್ರು. ಟೆಸ್ಟ್ ಕ್ರಿಕೆಟ್ನಲ್ಲೇ ಅವರು 7ನೇ ಸಲ ದ್ವಿಶತಕ ಹೊಡೆದಿದ್ದು ಭಾರತೀಯ ಕ್ರಿಕೆಟಿಗನ ಅಪರೂಪದ ದಾಖಲೆಯಾಗಿದೆ.
ಈವರೆಗೆ 81 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ, 9ಕ್ಕೂ ಹೆಚ್ಚು ಸಲ 150+ ರನ್ಗಳಿಕೆ ಮಾಡಿದ್ದಾರೆ. ಈ ಹಿಂದೆ ಕೂಡ ಕೊಹ್ಲಿ ಟೆಸ್ಟ್ನಲ್ಲಿ ಶ್ರೀಲಂಕಾ ವಿರುದ್ಧ 2017/18 ರಲ್ಲಿ 243ರನ್, 2016/17ರಲ್ಲಿ ಇಂಗ್ಲೆಂಡ್ ವಿರುದ್ಧ ಮುಂಬೈನಲ್ಲಿ 235 ರನ್ ಹಾಗೂ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 254 ರನ್ ಗಳಿಸಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಅವರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ದ್ವಿಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಸರ್ ಡಾನ್ ಬ್ರಾಡ್ಮನ್ 12, ಶ್ರೀಲಂಕಾದ ಕುಮಾರ ಸಂಗಕ್ಕರ 11, ಲಾರಾ 9, ತದನಂತರದ ಸ್ಥಾನದಲ್ಲಿ 7 ದ್ವಿಶತಕ ಸಿಡಿಸಿರುವ ವಿರಾಟ್ ಕೊಹ್ಲಿ ಹಾಗು ಶ್ರೀಲಂಕಾದ ಮಹೇಲಾ ಜಯವರ್ಧನೆ ಇದ್ದಾರೆ.