ETV Bharat / sports

ರೋಹಿತ್​-ಮಯಾಂಕ್​ ಜೊತೆಯಾಟ; ಮುರಿದ 47 ವರ್ಷಗಳ ಹಿಂದಿನ ದಾಖಲೆ! - ದಕ್ಷಿಣ ಆಫ್ರಿಕಾ

ಟೆಸ್ಟ್​​ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿರುವ ರೋಹಿತ್​ ಶರ್ಮಾ ಹಾಗೂ ಮಯಾಂಕ್​ ಅಗರವಾಲ್​ ಜೋಡಿ 47 ವರ್ಷಗಳ ಟೆಸ್ಟ್​​ ಕ್ರಿಕೆಟ್​ನ ದಾಖಲೆ ಬ್ರೇಕ್​ ಮಾಡಿದೆ.

ರೋಹಿತ್​​-ಮಯಾಂಕ್​ ಜೋಡಿ
author img

By

Published : Oct 2, 2019, 5:21 PM IST

ವಿಶಾಖಪಟ್ಟಣಂ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್​ ಶರ್ಮಾ ತಮ್ಮ ಸಾಮರ್ಥ್ಯ ಏನು? ಎಂಬುದನ್ನು ಕ್ರಿಕೆಟ್ ಲೋಕಕ್ಕೆ ತೋರಿಸಿದ್ದು, ಕ್ರೀಸಿನಲ್ಲಿದ್ದು ಉತ್ತಮ ಸಾಥ್​ ನೀಡಿರುವ ಮಯಾಂಕ್​​ ಕೂಡ ತಮ್ಮ ಬ್ಯಾಟಿಂಗ್​ ವೈಖರಿ ಮೂಲಕ ಕ್ಯಾಪ್ಟನ್​ ಮನಗೆದ್ದಿದ್ದಾರೆ. ಈ ಜೋಡಿ ಅಪರೂಪದ ದಾಖಲೆ ಸೃಷ್ಟಿಸಿದೆ.

Sharma
ರೋಹಿತ್​ ಶರ್ಮಾ
1972ರಲ್ಲಿ ದೆಹಲಿಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ಮತ್ತು ರಾಮ್‌ನಾಥ್ ಪಾರ್ಕರ್ ಆರಂಭಿಕರಾಗಿ ಮೊದಲ ಪಂದ್ಯವನ್ನಾಡಿದ್ದರು. ಈ ವೇಳೆ ಪಾರ್ಕರ್ ಟೆಸ್ಟ್‌ ಪದಾರ್ಪಣೆ ಪಂದ್ಯವನ್ನಾಡಿದ್ದರೆ, ಗವಾಸ್ಕರ್ ಭಾರತದಲ್ಲಿ ಆರಂಭಿಕರಾಗಿ ಮೊದಲ ಪಂದ್ಯವನ್ನಾಡಿದ್ದರು. ಇದೀಗ ಆ ದಾಖಲೆ ಮುರಿದಿದ್ದು, ಮಯಾಂಕ್​ ಭಾರತದಲ್ಲಿ ಮೊದಲ ಟೆಸ್ಟ್​ ಪಂದ್ಯವನ್ನಾಡುತ್ತಿದ್ದರೆ, ರೋಹಿತ್​ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.
Agarwal
ಮಯಾಂಕ್​ ಅಗರವಾಲ್​​

ಭಾರತದಲ್ಲಿ ಆರಂಭಿಕರಾಗಿ ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ರೋಹಿತ್-ಮಯಾಂಕ್ ಜೋಡಿ ಉತ್ತಮ ಜೊತೆಯಾಟ ನೀಡಿದ್ದು, 59 ಓವರ್​ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೇ 202 ರನ್ ಗಳಿಸಿದೆ. ರೋಹಿತ್ ಅಜೇಯ 115 ರನ್​ ಹಾಗೂ ಮಯಾಂಕ್ ಅಜೇಯ 84 ರನ್ ಗಳಿಸಿದ್ದು ನಾಳೆ ಪಂದ್ಯ ಮುಂದುವರಿಯಲಿದೆ.

Intro:Body:

ರೋಹಿತ್​-ಮಯಾಂಕ್​ ಜೊತೆಯಾಟ... ಬ್ರೇಕ್​ ಆಯ್ತು 47 ವರ್ಷಗಳ ಹಿಂದಿನ ರೆಕಾರ್ಡ್​! 

ವಿಶಾಖಪಟ್ಟಣಂ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್​ ಶರ್ಮಾ ತಮ್ಮ ಸಾಮರ್ಥ್ಯ ಏನು ಎಂಬುದನ್ನ ತೋರಿಸಿದ್ದು, ಇವರಿಗೆ ಉತ್ತಮ ಸಾಥ್​ ನೀಡಿರುವ ಮಯಾಂಕ್​​ ಕೂಡ ತಮ್ಮ ಬ್ಯಾಟಿಂಗ್​ ವೈಖರಿ ಮೂಲಕ ಕ್ಯಾಪ್ಟನ್​ ಮನಗೆದ್ದಿದ್ದು, ಈ ಜೋಡಿ ಅಪರೂಪದ ದಾಖಲೆಗೆ ಕಾರಣವಾಗಿದೆ. 

ಭಾರತದ ನೆಲದಲ್ಲಿ ಆರಂಭಿಕರಾಗಿ ಮೊದಲ ಟೆಸ್ಟ್​ ಪಂದ್ಯ ವಾಡಿದ ಶರ್ಮಾ-ಅಗರವಾಲ್​ ಸುಮಾರು 47 ವರ್ಷಗಳ ಹಿಂದಿನ ಟೆಸ್ಟ್ ದಾಖಲೆ ಬ್ರೇಕ್​ ಮಾಡಿದ್ದಾರೆ. 1972ರಲ್ಲಿ ದೆಹಲಿಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ಮತ್ತು ರಾಮ್‌ನಾಥ್ ಪಾರ್ಕರ್ ಆರಂಭಿಕರಾಗಿ ಮೊದಲ ಪಂದ್ಯವನ್ನಾಡಿದ್ದರು. ಈ ವೇಳೆ ಪಾರ್ಕರ್ ಟೆಸ್ಟ್‌ ಪಾದಾರ್ಪಣೆ ಪಂದ್ಯವನ್ನಾಡಿದ್ದರೆ, ಗವಾಸ್ಕರ್ ಭಾರತದಲ್ಲಿ ಆರಂಭಿಕರಾಗಿ ಮೊದಲ ಪಂದ್ಯವನ್ನಾಡಿದ್ದರು. ಇದೀಗ ಆ ದಾಖಲೆ ಬ್ರೇಕ್​ ಆಗಿದ್ದು, ಮಯಾಂಕ್​ ಭಾರತದಲ್ಲಿ ಮೊದಲ ಟೆಸ್ಟ್​ ಪಂದ್ಯವನ್ನಾಡುತ್ತಿದ್ದರೆ, ರೋಹಿತ್​ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. 

ಭಾರತದಲ್ಲಿ ಆರಂಭಿಕರಾಗಿ ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ರೋಹಿತ್-ಮಯಾಂಕ್ ಜೋಡಿ ಉತ್ತಮ ಜೊತೆಯಾಟ ನೀಡಿದ್ದು,. 59 ಓವರ್​ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೇ 202 ರನ್ ಮಾಡಿದ್ದು, ರೋಹಿತ್ ಅಜೇಯ 115ರನ್​ ಹಾಗೂ ಮಯಾಂಕ್ ಅಜೇಯ84ರನ್​​ಗಳಿಕೆ ಮಾಡಿ ನಾಳೆಗೆ ಬ್ಯಾಟಿಂಗ್​ ಕಾಯ್ದಿರಿಸಿಕೊಂಡಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.