ವಿಶಾಖಪಟ್ಟಣಂ: ದ. ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 4ನೇ ದಿನ ಚೇತೇಶ್ವರ್ ಪೂಜಾರಾ ಜೊತೆ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಹಿಟ್ಮ್ಯಾನ್ ರೋಹಿತ್ ಶರ್ಮಾ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ.
ರೋಹಿತ್ ಶರ್ಮಾ ಬಳಸಿರುವ ಪದ ಮೈಕ್ನಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
-
Rohit Sharma blasts pujara for not running 🔥 #INDvSA pic.twitter.com/vGZmfecZgb
— Sanjeev Jasani (@sanjeevjasani) October 5, 2019 " class="align-text-top noRightClick twitterSection" data="
">Rohit Sharma blasts pujara for not running 🔥 #INDvSA pic.twitter.com/vGZmfecZgb
— Sanjeev Jasani (@sanjeevjasani) October 5, 2019Rohit Sharma blasts pujara for not running 🔥 #INDvSA pic.twitter.com/vGZmfecZgb
— Sanjeev Jasani (@sanjeevjasani) October 5, 2019
ದಕ್ಷಿಣ ಆಫ್ರಿಕಾದ ಬೌಲರ್ ಪೀಡ್ ಎಸೆದ ಚೆಂಡನ್ನು ರೋಹಿತ್ ಶರ್ಮಾ ಕವರ್ ಪಾಯಿಂಟ್ನತ್ತ ಹೊಡೆದು ಒಂದು ರನ್ ಕದಿಯಲು ಮುಂದಾಗಿದ್ದಾರೆ. ಈ ವೇಳೆ ನಾನ್ಸ್ಟ್ರೈಕ್ನಲ್ಲಿದ್ದ ಪೂಜಾರ ಮೊದಲು ಓಡಲು ಮುಂದಾಗಿ ತದನಂತರ ಹಿಂದೆ ಬಂದು No No ಎಂದಿದ್ದಾರೆ. ಇದರಿಂದ ಆಕ್ರೋಶಗೊಂಡ ರೋಹಿತ್ ಅವಾಚ್ಯ ಶಬ್ದ ಪ್ರಯೋಗ ಮಾಡಿದ್ದು, ಅದು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದೆ.
ಇದೇ ವಿಷಯವನ್ನಿಟ್ಟುಕೊಂಡು ಇಂಗ್ಲೆಂಡ್ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಟ್ವೀಟಿಸಿದ್ದು, ಈ ಸಲ ವಿರಾಟ್ ಕೊಹ್ಲಿ ಅಲ್ಲ ರೋಹಿತ್ ಶರ್ಮಾ ಎಂದು ಲೇವಡಿ ಮಾಡಿದ್ದಾರೆ.