ವಿಶಾಖಪಟ್ಟಣ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ 11 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ರೋಹಿತ್ ಶರ್ಮಾ, ಆರ್ ಅಶ್ವಿನ್ ಹಾಗೂ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ತಂಡ ಸೇರ್ಪಡೆಗೊಂಡಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಅಕ್ಟೋಬರ್ 2ರಿಂದ ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕಾಗಿ ಬಿಸಿಸಿಐ 11 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ವಿಕೆಟ್ ಕೀಪರ್ ಸೇರಿಸಿ 7 ಬ್ಯಾಟ್ಸ್ಮನ್, ಇಬ್ಬರು ಸ್ಪಿನ್ ಹಾಗೂ ಇಬ್ಬರು ವೇಗಿಗಳನ್ನು ಆಯ್ಕೆ ಮಾಡಿದೆ.
-
#TeamIndia for 1st Test of @Paytm Freedom Series for Gandhi-Mandela Trophy against South Africa.
— BCCI (@BCCI) October 1, 2019 " class="align-text-top noRightClick twitterSection" data="
Virat Kohli (Capt), Ajinkya Rahane (vc), Rohit Sharma, Mayank Agarwal, Cheteshwar Pujara, Hanuma Vihari, R Ashwin, R Jadeja, Wriddhiman Saha (wk), Ishant Sharma, Md Shami#INDvSA
">#TeamIndia for 1st Test of @Paytm Freedom Series for Gandhi-Mandela Trophy against South Africa.
— BCCI (@BCCI) October 1, 2019
Virat Kohli (Capt), Ajinkya Rahane (vc), Rohit Sharma, Mayank Agarwal, Cheteshwar Pujara, Hanuma Vihari, R Ashwin, R Jadeja, Wriddhiman Saha (wk), Ishant Sharma, Md Shami#INDvSA#TeamIndia for 1st Test of @Paytm Freedom Series for Gandhi-Mandela Trophy against South Africa.
— BCCI (@BCCI) October 1, 2019
Virat Kohli (Capt), Ajinkya Rahane (vc), Rohit Sharma, Mayank Agarwal, Cheteshwar Pujara, Hanuma Vihari, R Ashwin, R Jadeja, Wriddhiman Saha (wk), Ishant Sharma, Md Shami#INDvSA
ಕನ್ನಡಿಗ ಮಯಾಂಕ್ ಜೊತೆಗೆ ರೋಹಿತ್ ಆರಂಭಿಕರಾಗಿ ಕಣಕ್ಕಿಳಿದರೆ ಪೂಜಾರ, ಕೊಹ್ಲಿ, ವಿಹಾರಿ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಇನ್ನು ವಿಕೆಟ್ ಕೀಪರ್ ಸಹಾ 6 ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ರವೀಂದ್ರ ಜಡೇಜಾ ಹಾಗೂ ಅಶ್ವಿನ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡರೆ, ಇಶಾಂತ್ ಜೊತೆ ಶಮಿ ವೇಗದ ಬೌಲಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ರಿಷಭ್ ಪಂತ್ರನ್ನು ತಂಡದಿಂದ ಕೈಬಿಟ್ಟಿದ್ದು, ವೃದ್ಧಿಮಾನ್ ಸಹಾ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.