ರಾಂಚಿ: ಇಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ವೇಗಿ ಉಮೇಶ್ ಯಾದವ್ ಮೂರು ದಾಖಲೆಗಳನ್ನ ಪುಡಿಗಟ್ಟಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಮೈದಾನಕ್ಕೆ ಆಗಮಿಸಿದ ಉಮೇಶ್ ಯಾದವ್ ಆಕರ್ಷಕ ಸಿಕ್ಸರ್ಗಳನ್ನು ಸಿಡಿಸಿ ಕೆಲಹೊತ್ತು ಪ್ರೇಕ್ಷಕರನ್ನು ರಂಜಿಸಿದ್ದಲ್ದೇ ಮೂರು ದಾಖಲೆಗಳನ್ನ ತನ್ನದಾಗಿಸಿಕೊಂಡರು.
111.5 ನೇ ಓವರ್ನಲ್ಲಿ ಜಾರ್ಜ್ ಲಿಂಡೆ ಬೌಲಿಂಗ್ನಲ್ಲೆ ಎದುರಿಸಿದ ಮೊದಲ ಎರಡೂ ಬಾಲ್ಗಳನ್ನ ಸಿಕ್ಸರ್ ಸಿಡಿಸಿದ್ರು. ಅಲ್ಲದೆ 113ನೇ ಓವರ್ನಲ್ಲಿ ಮತ್ತದೇ ಜಾರ್ಜ್ ಲಿಂಡೆ ಬೌಲಿಂಗ್ನಲ್ಲಿ 3 ಸಿಕ್ಸರ್ ಬಾರಿಸಿ ಕೊನೆಯ ಎಸೆತದಲ್ಲಿ ಔಟ್ ಆದ್ರು. ಆಡಿದ 10 ಚೆಂಡುಗಳಲ್ಲಿ 31 ರನ್ ಗಳಿಸಿ ಔಟಾದ್ರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಉಮೇಶ್ ಯಾದವ್ ಬೆಸ್ಟ್ ಸ್ಕೋರ್ ಎನಿಸಿದೆ.
- ' class='align-text-top noRightClick twitterSection' data=''>
ಸಚಿನ್ ದಾಖಲೆ ಸರಿಗಟ್ಟಿದ ಉಮೇಶ್:
ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವೆಸ್ಟ್ ಇಂಡೀಸ್ನ ಆಟಗಾರ ಫೊಫಿ ವಿಲಿಯಮ್ಸನ್ ತಾವು ಎದುರಿಸಿದ ಮೊದಲ 2 ಚೆಂಡುಗಳನ್ನು ಸಿಕ್ಸರ್‌ಗಟ್ಟಿದ ದಾಖಲೆ ಬರೆದಿದ್ದರು. ಈ ಇಬ್ಬರಂತೆ ಯಾದವ್ ಕೂಡಾ ಇದೀಗ ಅಪರೂಪದ ದಾಖಲೆ ಬರೆದಿದ್ದಾರೆ.
ವೇಗದ 30 ರನ್ ದಾಖಲೆ:
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 30 ರನ್ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಉಮೇಶ್ ಪಾತ್ರರಾಗಿದ್ದಾರೆ. ಈ ಹಿಂದೆ ಸ್ಟೀಫನ್ ಫ್ಲೆಮಿಂಗ್ 11 ಬಾಲ್ಗಳಿಗೆ 31 ರನ್ ಗಳಿಸಿದ್ದರು.
ಅತಿ ಹೆಚ್ಚು ಸ್ಟೈಕ್ ರೇಟ್:
ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿದ 10 ಬಾಲ್ಗಳಲ್ಲಿ ಅತಿಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ ಆಟಗಾರ ಎಂಬ ಶ್ರೇಯ ಉಮೇಶ್ ಯಾದವ್ ಹೊಂದಿದ್ದಾರೆ. ಬರೋಬ್ಬರಿ 310 ಸ್ಟ್ರೈಕ್ ರೇಟ್‌ನೊಂದಿಗೆ 10 ಎಸೆತಗಳಲ್ಲಿ ಅವರು 30 ರನ್ ಗಳಿಸಿದ್ದಾರೆ. ಇವಿಷ್ಟೇ ಅಲ್ಲ, ತಾನು ಎದುರಿಸಿದ ಮೊದಲನೇ ಚೆಂಡನ್ನು ಸಿಕ್ಸರ್‌ಗಟ್ಟಿದ ಭಾರತದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಯೂ ಈ ಆಟಗಾರನ ಪಾಲಾಗಿದೆ. ಸಚಿನ್, ಧೋನಿ, ಜಹೀರ್ ಖಾನ್ ಈ ಹಿಂದೆ ಮೊದಲ ಬಾಲ್ನಲ್ಲೇ ಸಿಕ್ಸರ್ ಹೊಡೆದಿದ್ದರು.
ಒಂದೆಡೆ ಮೈದಾನದಲ್ಲಿ ಉಮೇಶ್ ಯಾದವ್ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದರೆ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತಿದ್ದ ನಾಯಕ ವಿರಾಟ್ ಕೊಹ್ಲಿ ಆನಂದಕ್ಕೆ ಪಾರವೇ ಇರಲಿಲ್ಲ. ಪ್ರತಿಯೊಂದು ಸಿಕ್ಸರ್ ಸಿಡಿದಾಗಲೂ ಅವರು ಎದ್ದು ನಿಂತು ಚಪ್ಪಾಳೆ ತಟ್ಟುತ್ತಾ ಪ್ರೋತ್ಸಾಹಿಸುತ್ತಿದ್ದರು.