ಮ್ಯಾಂಚೆಸ್ಟರ್: ಕೊಹ್ಲಿ ಪಡೆ ವಿಶ್ವಕಪ್ನಲ್ಲಿ ಆಡಿರುವ 9 ಪಂದ್ಯಗಳಲ್ಲಿ 7 ಗೆಲುವು ಹಾಗೂ ಒಂದು ಸೋಲಿನೊಂದಿಗೆ 15 ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿದೆ.
ಇನ್ನು ಕಿವೀಸ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು. ಇಂಗ್ಲೆಂಡ್ ವಿರುದ್ಧ ಮಾತ್ರ ಕೊಹ್ಲಿಪಡೆ ಸೋಲನುಭವಿಸಿತ್ತು. ಇತ್ತ ನ್ಯೂಜಿಲ್ಯಾಂಡ್ ತಂಡ ಭಾರತದ ವಿರುದ್ಧದ ಪಂದ್ಯ ರದ್ದಾಗಿದ್ದು ಬಿಟ್ಟರೆ, ಉಳಿದ 8 ಪಂದ್ಯಗಳಲ್ಲಿ 5 ಗೆಲುವು ಹಾಗೂ 3 ಸೋಲು ಕಂಡು ಕೊನೆಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತ್ತು. ಮೊದಲ 5 ಪಂದ್ಯಗಳನ್ನು ಸುಲಭವಾಗಿ ಗೆದ್ದಿದ್ದ ಕಿವೀಸ್ ನಂತರದ ಮೂರು ಪಂದ್ಯಗಳಲ್ಲಿ ಸೋಲನುಭವಿಸಿ ರನ್ರೇಟ್ ಆಧಾರದ ಮೇಲೆ ಸೆಮಿಫೈನಲ್ ಪ್ರವೇಶಿಸಿದೆ.
ವಿಶ್ವಕಪ್ನಲ್ಲಿ ಸಾಧನೆ:
ಭಾರತ ತಂಡ 1983 ಹಾಗೂ 2011 ರಲ್ಲಿ ಚಾಂಪಿಯನ್ ಆಗಿದ್ದರೆ 2003ರ ವಿಶ್ವಕಪ್ನಲ್ಲಿ ರನ್ನರ್ ಆಪ್ ಆಗಿದೆ. ಒಟ್ಟಾರೆ 12 ವಿಶ್ವಕಪ್ ಇತಿಹಾಸದಲ್ಲಿ ಟೀಮ್ ಇಂಡಿಯಾಗೆ ಇದು 7ನೇ ಸೆಮಿಫೈನಲ್ ಆಗಿದೆ.
ನ್ಯೂಜಿಲ್ಯಾಂಡ್ ತಂಡ 2015 ರಲ್ಲಿ ರನ್ನರ್ ಆಪ್ ಆಗಿರುವುದೇ ದೊಡ್ಡ ಸಾಧನೆಯಾಗಿದೆ. 12 ವಿಶ್ವಕಪ್ಗಳ ಇತಿಹಾಸದಲ್ಲಿ ಕಿವೀಸ್ 8 ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದೆ.
ಭಾರತ ಹಾಗೂ ನ್ಯೂಜಿಲ್ಯಾಂಡ್ ಏಕದಿನ ಮುಖಾಮುಖಿ
ಒಟ್ಟು ಪಂದ್ಯಗಳು 106
ಭಾರತ- 55 ಗೆಲುವು
ನ್ಯೂಜಿಲ್ಯಾಂಡ್- 45 ಗೆಲುವು
ವಿಶ್ವಕಪ್ನಲ್ಲಿ ಮುಖಾಮುಖಿ
ಒಟ್ಟು ಮುಖಾಮುಖಿ- 7
ಭಾರತ -3 ಗೆಲುವು
ನ್ಯೂಜಿಲ್ಯಾಂಡ್ 4 ಗೆಲುವು
ಸಂಭಾವ್ಯ ನ್ಯೂಜಿಲೆಂಡ್:
ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್ಹೋಮ್, ಲೂಕಿ ಫರ್ಗ್ಯುಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಕಾಲಿನ್ ಮನ್ರೊ, ಜಿಮ್ಮಿ ನಿಶಾಮ್, ಮಿಚೆಲ್ ಸ್ಯಾಂಟ್ನರ್, ರಾಸ್ ಟೇಲರ್.
ಸಂಭಾವ್ಯ ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ರಿಷಭ್ ಪಂತ್, ಕೆ.ಎಲ್. ರಾಹುಲ್, ಕೇದಾರ್ ಜಾಧವ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ.