ಕ್ರೈಸ್ಟ್ ಚರ್ಚ್: ಮೊದಲ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿಯನ್ನು ಹೇಗೆ ರನ್ಗಳಿಸಲು ಬಿಡಲಿಲ್ಲವೋ, ಅದೇ ರೀತಿ ಎರಡನೇ ಪಂದ್ಯದಲ್ಲೂ ಕೊಹ್ಲಿಗಾಗಿ ರಣತಂತ್ರ ರೂಪಿಸಿದ್ದು, ಭಾರತ ತಂಡವನ್ನು ಮತ್ತೆ ಮಣಿಸುತ್ತೇವೆ ಎಂದು ಕಿವೀಸ್ ಆರಂಭಿಕ ಬ್ಯಾಟ್ಸ್ಮನ್ ಲ್ಯಾಥಮ್ ವಿಶ್ವಾಸದಿಂದ ಹೇಳಿದ್ದಾರೆ.
ರನ್ ಮಷಿನ್ ಎಂದೇ ಖ್ಯಾತಿ ಗಳಿಸಿದ್ದ ವಿರಾಟ್ ಕೊಹ್ಲಿ ಏಕದಿನ ಸರಣಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ನಂತರ ವೆಲ್ಲಿಂಗ್ಟನ್ನಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಕ್ರಮವಾಗಿ 2 ಮತ್ತು 19 ರನ್ ಗಳಿಸಿ ಔಟಾಗಿದ್ದರು. ಕೊಹ್ಲಿ ಹಾಗೂ ಪೂಜಾರ ಅಂತಹ ಹಿರಿಯ ಅಟಗಾರರ ಬ್ಯಾಟಿಂಗ್ ವೈಫಲ್ಯದಿಂದ ಭಾರತ ತಂಡ 10 ವಿಕೆಟ್ಗಳಿಂದ ಸೋಲನುಭವಿಸಿತ್ತು. ಇದರ ಬೆನ್ನಲ್ಲೇ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದರು.
ಈ ಕುರಿತು ಮಾತನಾಡಿರುವ ನ್ಯೂಜಿಲ್ಯಾಂಡ್ ತಂಡದ ವಿಕೆಟ್ ಕೀಪರ್, "ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್, ಹಾಗಿ ಎಲ್ಲಾ ವಿಭಾಗದ ಕ್ರಿಕೆಟ್ನಲ್ಲಿ ನಂಬರ್ ಒನ್ ಬ್ಯಾಟ್ಸ್ಮನ್ ಆಗಿ ದೀರ್ಘ ಸಮಯ ಕಳೆದಿದ್ದಾರೆ. ಆದರೆ, ಈ ಟೂರ್ನಿಯಲ್ಲಿ ಅವರು ವೈಫಲ್ಯಕಂಡಿದ್ದಾರೆ. ಎರಡನೇ ಟೆಸ್ಟ್ನಲ್ಲಿ ತಿರುಗಿ ಬೀಳಲು ಪ್ರಯತ್ನಿಸುತ್ತಾರೆ. ಆದರೆ, ನಾವು ಅವರಿಗಾಗಿ ವಿಶೇಷ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ. ಈ ಪಂದ್ಯದಲ್ಲಿ ನಮ್ಮ ಬೌಲರ್ಗಳು ಅವರ ಮೇಲೆ ಮತ್ತೆ ಮೇಲುಗೈ ಸಾಧಿಸಲಿದ್ದಾರೆ ಎಂದು ಲ್ಯಾಥಮ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಹ್ಲಿ ಎಲ್ಲ ಪರಿಸ್ಥಿತಿಗಳಲ್ಲಿಯೂ ತಾವೊಬ್ಬ ಶ್ರೇಷ್ಠ ಬ್ಯಾಟ್ಸ್ಮನ್ ಎಂದು ತೋರಿಸಿಕೊಟ್ಟಿದ್ದಾರೆ. ಆದರೆ, ಇಲ್ಲಿನ ಪಿಚ್ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಈ ಸಮಯವನ್ನು ನಾವು ಉಪಯೋಗಿಸಿಕೊಳ್ಳಲಿದ್ದೇವೆ ಎಂದು ಲ್ಯಾಥಮ್ ಹೇಳಿದ್ದಾರೆ.
ಬುಮ್ರಾ - ಶಮಿ ವಿರುದ್ಧ ಎಚ್ಚರಿಕೆ ವಹಿಸಬೇಕಿದೆ: ಮೊದಲ ಟೆಸ್ಟ್ನಲ್ಲಿ ಭಾರತದ ಸ್ಟಾರ್ ಬೌಲರ್ಗಳಾದ ಬುಮ್ರಾ, ಶಮಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಆದರೆ ಲ್ಯಾಥಮ್ ಮಾತ್ರ ಅವರಿಬ್ಬರ ಮೇಲೆ ನಾವು ಎಚ್ಚರ ವಹಿಸಬೇಕಿದೆ ಎಂದಿದ್ದಾರೆ.
"ನಾವು ಮೊದಲ ಟೆಸ್ಟ್ನಲ್ಲಿ ಅವರಿಬ್ಬರ ಬೌಲಿಂಗ್ಗೆ ಉತ್ತಮವಾಗಿ ಆಡಿದ್ದೇವೆ. ಆದರೆ ಅವರು ವಿಶ್ವದರ್ಜೆಯ ಬೌಲರ್ಗಳು, ಹಾಗಾಗಿ ನಾವು ಅವರ ಬಗ್ಗೆ ಎಚ್ಚರಿಕೆಯಿಂದಲೇ ಆಡಬೇಕಿದೆ" ಎಂದಿದ್ದಾರೆ.
ಇನ್ನು ಗಾಯದಿಂದಾಗಿ ಮೊದಲನೇ ಪಂದ್ಯಕ್ಕೆ ಅಲಭ್ಯರಾಗಿದ್ದ ನೀಲ್ ವ್ಯಾಗ್ನರ್ ಎರಡನೇ ಹಣಾಹಣಿಗೆ ತಂಡಕ್ಕೆ ಮರಳುತ್ತಿದ್ದು, ಬೌಲಿಂಗ್ ಇನ್ನಷ್ಟು ಬಲಿಷ್ಟವಾಗಲಿದೆ ಎಂದು ಲ್ಯಾಥಮ್ ತಿಳಿಸಿದ್ದಾರೆ.