ಪುಣೆ, ಮಹಾರಾಷ್ಟ್ರ : ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ 2ನೇ ಪಂದ್ಯ ತೀವ್ರ ಸ್ವರೂಪದ ಪೈಪೋಟಿಯಿಂದ ಕೂಡಿದೆ.
337 ರನ್ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಜಾಸನ್ ರಾಯ್ 52 ಎಸೆತಗಳಲ್ಲಿ 55 ರನ್ ಗಳಿಸಿ ರನ್ ಔಟಾದರೆ, ಜಾನಿ ಬೇರ್ಸ್ಟೋ ಶತಕ ಸಿಡಿಸಿ (112 ಎಸೆತಗಳಿಗೆ 124 ರನ್) ಪ್ರಸಿದ್ಧ್ ಕೃಷ್ಣ ಬೌಲಿಂಗ್ನಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ಒಪ್ಪಿಸಿದರು.
ಮೂರನೇ ಆಟಗಾರರಾಗಿ ಕ್ರೀಸಿಗೆ ಬಂದ ಬೆನ್ ಸ್ಟೋಕ್ ಸ್ಫೋಟಕ ಬ್ಯಾಟಿಂಗ್ನೊಂದಿಗೆ 52 ಎಸೆತಗಳಲ್ಲಿ 99 ರನ್ ಗಳಿಸಿ, ಒಂದು ರನ್ನಿಂದ ಶತಕ ವಂಚಿತರಾದರು. ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿನ ರಿಷಭ್ ಪಂತ್ಗೆ ಕ್ಯಾಚ್ ಒಪ್ಪಿಸಿದ ಅವರು ನಿರಾಶೆ ಅನುಭವಿಸಿ ಪೆವಿಲಿಯನ್ಗೆ ಮರಳಿದ್ದಾರೆ.
ಜಾಸ್ ಬಟ್ಲರ್ ಪ್ರಸಿದ್ಧ್ ಕೃಷ್ಣಗೆ ಎಸೆತದಲ್ಲಿ ಡಕ್ ಔಟ್ ಆಗಿದ್ದು, ಕ್ರೀಸ್ನಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಡೇವಿಡ್ ಮಲನ್ ಇದ್ದಾರೆ. ಸದ್ಯಕ್ಕೆ 38 ಓವರ್ನಲ್ಲಿ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 317 ರನ್ ಗಳಿಸಿದ್ದು, ವಿಜಯ ಸಾಧಿಸಲು 60 ಎಸೆತಗಳಲ್ಲಿ ಕೇವಲ 20 ರನ್ನುಗಳು ಬೇಕಿದೆ.