ETV Bharat / sports

ಇಂಡೋ-ಆಂಗ್ಲ ಫೈನಲ್​ ಕದನ: ಪಂದ್ಯ ಗೆದ್ದು, ಹ್ಯಾಟ್ರಿಕ್​ ಸರಣಿ ಗೆಲ್ಲುವ ತವಕದಲ್ಲಿ ಕೊಹ್ಲಿ ಪಡೆ! - ಇಂಗ್ಲೆಂಡ್ ವಿರುದ್ಧ ಫೈನಲ್ ಪಂದ್ಯ

ಭಾರತ-ಇಂಗ್ಲೆಂಡ್​ ನಡುವೆ ಇಂದು ಫೈನಲ್ ಏಕದಿನ ಪಂದ್ಯ ನಡೆಯಲಿದ್ದು, ಗೆಲುವ ತಂಡ ಸರಣಿ ಕೈವಶ ಮಾಡಿಕೊಳ್ಳಲಿದೆ. ಹೀಗಾಗಿ ಎರಡು ತಂಡಗಳಿಗೆ ಪಂದ್ಯ ಮಹತ್ವದಾಗಿದೆ.

India vs England
India vs England
author img

By

Published : Mar 28, 2021, 4:25 AM IST

ಪುಣೆ: ಪ್ರವಾಸಿ ಇಂಗ್ಲೆಂಡ್​ ವಿರುದ್ಧ ಈಗಾಗಲೇ ಟೆಸ್ಟ್​ ಹಾಗೂ ಟಿ-20 ಸರಣಿ ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ, ಇಂದು ಕೊನೆಯ ಏಕದಿನ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಹ್ಯಾಟ್ರಿಕ್​ ಸರಣಿ ಗೆಲ್ಲುವ ತವಕದಲ್ಲಿದೆ.

ವಿಕೆಟ್ ಪಡೆದ ಸಂಭ್ರಮದಲ್ಲಿ ಇಂಡಿಯಾ
ವಿಕೆಟ್ ಪಡೆದ ಸಂಭ್ರಮದಲ್ಲಿ ಇಂಡಿಯಾ

ಭಾರತ-ಇಂಗ್ಲೆಂಡ್ ತಂಡಗಳ ನಡುವೆ ಇಂದು ಮೂರು ಏಕದಿನ ಪಂದ್ಯಗಳ ಕೊನೆಯ ಪಂದ್ಯ ನಡೆಯಲಿದ್ದು, ಸರಣಿ ಈಗಾಗಲೇ 1-1 ಅಂತರದಿಂದ ಸಮಬಲಗೊಂಡಿರುವ ಕಾರಣ ಫೈನಲ್​ ಪಂದ್ಯ ರೋಚಕತೆಯಿಂದ ಕೂಡಿದೆ.

ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದ್ದ ಟೀಂ ಇಂಡಿಯಾ, ಎರಡನೇ ಏಕದಿನ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿನ ಕಳಪೆ ಪ್ರದರ್ಶನಿಂದ 6 ವಿಕೆಟ್​ಗಳ ಸೋಲು ಕಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಬೌಲಿಂಗ್​ ವಿಭಾಗದಲ್ಲಿ ಕೆಲವೊಂದು ಬದಲಾವಣೆ ಮಾಡುವ ಸಾಧ್ಯತೆ ಇದೆ. ಫೈನಲ್​ ಪಂದ್ಯಕ್ಕಾಗಿ ಟೀಂ ಇಂಡಿಯಾ ಕುಲ್ದೀಪ್​ ಯಾದವ್​,​ ಕೃನಾಲ್ ಪಾಂಡ್ಯ ಬದಲಿಗೆ ಯಜುವೇಂದ್ರ ಚಹಾಲ್​ ಹಾಗೂ ವಾಷಿಂಗ್ಟನ್ ಸುಂದರ್​ಗೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದ್ದು, ವೇಗಿಗಳಾಗಿ ಪ್ರಸಿದ್ಧ್​ ಕೃಷ್ಣ ಹಾಗೂ ಭುವನೇಶ್ವರ್​ ಕುಮಾರ್​ ಮುಂದುವರೆಯಲಿದ್ದಾರೆ. ಫೈನಲ್​ ಪಂದ್ಯದಲ್ಲಿ ಮತ್ತಷ್ಟು ಪ್ರಯೋಗ ಮಾಡುವ ಉದ್ದೇಶದಿಂದ ಯಾರ್ಕರ್​ ಸ್ಪೇಷಲಿಸ್ಟ್​ ಟಿ. ನಟರಾಜನ್​ಗೆ ಅವಕಾಶ ನೀಡಿದ್ರೆ ಆಶ್ಚರ್ಯ ಪಡೆಬೇಕಾಗಿಲ್ಲ.

ಪ್ರಸಿದ್ಧ್​ ಕೃಷ್ಣ ಬೌಲಿಂಗ್​
ಪ್ರಸಿದ್ಧ್​ ಕೃಷ್ಣ ಬೌಲಿಂಗ್​

ಇದನ್ನೂ ಓದಿ: ಸ್ಟೋಕ್ಸ್ ಐಪಿಎಲ್​ನಲ್ಲೂ ಬೌಲರ್​ಗಳನ್ನು ಇದೇ ರೀತಿ ಹೆದರಿಸಲಿದ್ದಾರೆಂದು ಭಾವಿಸುವೆ : ಜೋಸ್ ಬಟ್ಲರ್​

ಆದರೆ ಈಗಾಗಲೇ ಟೆಸ್ಟ್​ ಸರಣಿಯಲ್ಲಿ 3-1, ಟಿ-20 ಪಂದ್ಯದಲ್ಲಿ 3-2 ಅಂತರದ ಸೋಲು ಕಂಡಿರುವ ಇಂಗ್ಲೆಂಡ್ ಪಡೆ ಕೊನೆಯ ಪಕ್ಷ ಏಕದಿನ ಸರಣಿ ಕೈವಶ ಮಾಡಿಕೊಳ್ಳುವ ಉದ್ದೇಶ ಹೊಂದಿದೆ. ಇಂಗ್ಲೆಂಡ್​ ತಂಡದ ಕೆಲ ಬ್ಯಾಟ್ಸಮನ್​ಗಳು ಇದೀಗ ಫಾರ್ಮ್​ಗೆ ಮರಳಿದ್ದು, ಸ್ಟೋಕ್ಸ್​, ಜಾಸನ್​ ರಾಯ್​, ಬೈರ್​ಸ್ಟೋವ್​ ಹಿಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇವರನ್ನ ತಡೆದು ಹಾಕುವಲ್ಲಿ ಟೀಂ ಇಂಡಿಯಾ ವಿಫಲವಾದರೆ ಪಂದ್ಯ ಕೈಚೆಲ್ಲುವುದು ಬಹುತೇಕ ಖಚಿತವಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿರುವ ಎಂಸಿಎ ಮೈದಾನದಲ್ಲಿ ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭಗೊಳ್ಳಲಿದೆ.

ಬ್ಯಾಟಿಂಗ್​ನಲ್ಲಿ ಮಿಂಚಿದ್ದ ಬೈರ್​ಸ್ಟೋವ್​- ಸ್ಟೋಕ್ಸ್​​​

ಉಭಯ ತಂಡಗಳು ಇಂತಿವೆ

ಭಾರತ: ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ರೋಹಿತ್ ಶರ್ಮಾ(ಉಪನಾಯಕ), ಶಿಖರ್ ಧವನ್​, ಕೆ.ಎಲ್​ ರಾಹುಲ್​, ಶುಭ್ಮನ್​ ಗಿಲ್​, ಸೂರ್ಯಕುಮಾರ್ ಯಾದವ್​, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್​(ವಿ.ಕೀ), ಯಜುವೇಂದ್ರ ಚಹಾಲ್​, ಕುಲ್ದೀಪ್​ ಯಾದವ್​, ಕೃಣಾಲ್​ ಪಾಂಡ್ಯ, ವಾಷಿಂಗ್ಟನ್​​ ಸುಂದರ್​, ಟಿ. ನಟರಾಜನ್​, ಭುವನೇಶ್ವರ್​ ಕುಮಾರ್​​,ಮೊಹಮ್ಮದ್​ ಸಿರಾಜ್​, ಪ್ರಸಿದ್ಧ್​ ಕೃಷ್ಣ, ಶಾರ್ದೂಲ್ ಠಾಕೂರ್​

ಇಂಗ್ಲೆಂಡ್​: ಜೋಸ್​ ಬಟ್ಲರ್​(ಕ್ಯಾಪ್ಟನ್​), ಮೊಯಿನ್​ ಅಲಿ,ಸ್ಯಾಮ್ ಕರನ್​, ಟಾಮ್​ ಕರನ್​, ಅದಿಲ್ ರಶೀದ್​, ಜೇಸನ್​ ರಾಯ್​, ಬೆನ್​ ಸ್ಟೋಕ್ಸ್​, ಮೊಯಿನ್​ ಅಲಿ, ಜಾನಿ ಬೈರ್​ಸ್ಟೋ, ಸ್ಯಾಮ್​ ಬಿಲ್ಲಿಂಗ್ಸ್​, ಲಿಯಾಮ್​, ಪಾರ್ಕಿನ್ಸನ್​, ರೀಸ್​ ಟಾಫ್ಲಿ, ಮಾರ್ಕ್​ ವುಡ್​, ಜೇಕ್ ಬೆಲ್​, ಕ್ರಿಸ್ ಜೋರ್ಡಾನ್​, ಡೇವಿಡ್​ ಮಲನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.