ನವದೆಹಲಿ: ಇಲ್ಲಿ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
-
Bangladesh wins the toss and elects to bowl first in the 1st @Paytm T20I at Delhi.
— BCCI (@BCCI) November 3, 2019 " class="align-text-top noRightClick twitterSection" data="
Live - https://t.co/bcXGQ5eVdk #INDvBAN pic.twitter.com/oZ7IKp8M6P
">Bangladesh wins the toss and elects to bowl first in the 1st @Paytm T20I at Delhi.
— BCCI (@BCCI) November 3, 2019
Live - https://t.co/bcXGQ5eVdk #INDvBAN pic.twitter.com/oZ7IKp8M6PBangladesh wins the toss and elects to bowl first in the 1st @Paytm T20I at Delhi.
— BCCI (@BCCI) November 3, 2019
Live - https://t.co/bcXGQ5eVdk #INDvBAN pic.twitter.com/oZ7IKp8M6P
ಮೇಲ್ನೋಟಕ್ಕೆ ಟೀಂ ಇಂಡಿಯಾ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅನುಭವಿ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅನುಪಸ್ಥಿತಿ ಬಾಂಗ್ಲಾದೇಶಕ್ಕೆ ಬಹುವಾಗಿ ಕಾಡಲಿದ್ದು, ಇತ್ತ ಕೊಹ್ಲಿ ಇಲ್ಲದ ತಂಡವನ್ನು ಹಿಟ್ಮ್ಯಾನ್ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ಅಬ್ಬರಿಸಿದ ಮುಂಬೈ ಮೂಲದ ಆಲ್ರೌಂಡರ್ ಶಿವಂ ದುಬೆ ರಾಷ್ಟ್ರೀಯ ತಂಡದ ಕದ ತಟ್ಟಿದ್ದಾರೆ. ಇಂದಿನ ಪಂದ್ಯದಲ್ಲಿ ದುಬೆ ಬ್ಲೂ ಜೆರ್ಸಿ ತೊಟ್ಟು ಕಣಕ್ಕಿಳಿಯುವ ಮೂಲಕ ಮೊದಲ ಅಂತರಾಷ್ಟ್ರೀಯ ಟಿ20 ಪಂದ್ಯಕ್ಕೆ ಪದಾರ್ಪಣೆ ಮಾಡಲಿದ್ದಾರೆ.
ಮೂರು ಟಿ-20 ಹಾಗೂ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಭಾರತದಲ್ಲಿ ಆಡಲು ಆಗಮಿಸಿರುವ ಬಾಂಗ್ಲಾದೇಶ ಇಂದಿನಿಂದ ತನ್ನ ಅಭಿಯಾನ ಆರಂಭಿಸಲಿದೆ. ಶಕೀಬ್ ಅನುಪಸ್ಥಿತಿ ಒಂದೆಡೆಯಾದರೆ, ವೈಯಕ್ತಿಕ ಕಾರಣಗಳಿಂದ ಅನುಭವಿ ಆಟಗಾರ ತಮಿಮ್ ಇಕ್ಬಾಲ್ ಭಾರತ ಪ್ರವಾಸ ಕೈಗೊಂಡಿಲ್ಲ. ಇವೆಲ್ಲದರ ನಡುವೆಯೂ ಮಹ್ಮದುಲ್ಲಾ ಪಡೆ ಗೆಲ್ಲುವ ಉತ್ಸಾಹದಲ್ಲಿದೆ.
ಈ ಪಂದ್ಯ ಅಂತಾರಾಷ್ಟ್ರೀಯ ಟಿ-20ಯ 1,000ನೇ ಪಂದ್ಯವಾಗಿದ್ದು, ಈ ನಿಟ್ಟಿನಲ್ಲಿ ವಿಶೇಷತೆ ಪಡೆದಿದೆ. ಹೀಗಾಗಿ ಉಭಯ ತಂಡಗಳು ಗೆದ್ದು ಪಂದ್ಯವನ್ನು ಸ್ಮರಣೀಯವಾಗಿಸಲು ಸಜ್ಜಾಗಿವೆ.
-
A look at the Playing XI for #INDvBAN pic.twitter.com/Ln61FCuhyE
— BCCI (@BCCI) November 3, 2019 " class="align-text-top noRightClick twitterSection" data="
">A look at the Playing XI for #INDvBAN pic.twitter.com/Ln61FCuhyE
— BCCI (@BCCI) November 3, 2019A look at the Playing XI for #INDvBAN pic.twitter.com/Ln61FCuhyE
— BCCI (@BCCI) November 3, 2019
ಭಾರತ ತಂಡ:
ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಐಯ್ಯರ್, ರಿಷಭ್ ಪಂತ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಕೃನಾಲ್ ಪಾಂಡ್ಯ, ಯುಜ್ವೇಂದ್ರ ಚಹಾಲ್, ದೀಪಕ್ ಚಹರ್, ಖಲೀಲ್ ಅಹ್ಮದ್
ಬಾಂಗ್ಲಾದೇಶ ತಂಡ:
ಲಿಟನ್ ದಾಸ್, ಸೌಮ್ಯ ಸರ್ಕಾರ್, ಮೊಹಮ್ಮದ್ ನೈಮ್, ಮಹ್ಮದುಲ್ಲಾ(ನಾಯಕ), ಮುಷ್ಫಿಕರ್ ರಹೀಂ, ಮೊಸೆದ್ದಿಕ್ ಹೊಸೈನ್, ಅನಿಮುಲ್ ಇಸ್ಲಾಂ, ಶೈಫುಲ್ ಇಸ್ಲಾಂ, ಮುಸ್ತಫಿಜುರ್ ರಹ್ಮಾನ್, ಅಲ್ ಅಮಿನ್ ಹೊಸೈನ್,