ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾಕ್ಕೆ ಪಂತ್ ಮತ್ತು ಪೂಜಾರ ಆಸರೆಯಾಗಿದ್ದು, ಭೋಜನ ವಿರಾಮದ ವೇಳೆಗೆ ಭಾರತ ತಂಡ 4 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿದೆ.
ಭಾರತ ಎರಡನೇ ದಿನದಾಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿತ್ತು. ಇಂದು ಬ್ಯಾಟಿಂಗ್ ಆರಂಭಿಸಿದ ಪೂಜಾರ ಮತ್ತು ರಹಾನೆ ತಾಳ್ಮೆಯಿಂದ ಬ್ಯಾಟ್ ಬೀಸುತ್ತ, ನಿಧಾನವಾಗಿ ರನ್ ಕದಿಯುತ್ತಿದ್ದರು. ಆದರೆ ಕಳೆದ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಾಯಕ ಅಜಿಂಕ್ಯಾ ರಹಾನೆ 22 ರನ್ ಗಳಿಸಿ ಕಮ್ಮಿನ್ಸ್ಗೆ ವಿಕೆಟ್ ಒಪ್ಪಿಸಿದರು.
-
After an absorbing morning session in Sydney, the match hangs in the balance!
— ICC (@ICC) January 9, 2021 " class="align-text-top noRightClick twitterSection" data="
Which camp would you rather be in at this point? 👀#AUSvIND SCORECARD ▶ https://t.co/Zuk24dsH1t pic.twitter.com/Kg4QgxPxFB
">After an absorbing morning session in Sydney, the match hangs in the balance!
— ICC (@ICC) January 9, 2021
Which camp would you rather be in at this point? 👀#AUSvIND SCORECARD ▶ https://t.co/Zuk24dsH1t pic.twitter.com/Kg4QgxPxFBAfter an absorbing morning session in Sydney, the match hangs in the balance!
— ICC (@ICC) January 9, 2021
Which camp would you rather be in at this point? 👀#AUSvIND SCORECARD ▶ https://t.co/Zuk24dsH1t pic.twitter.com/Kg4QgxPxFB
ನಂತರ ಬಂದ ಹನುಮ ವಿಹಾರಿ ತಮ್ಮ ನೀರಸ ಪ್ರದರ್ಶನ ಮುಂದುವರೆಸಿದ್ದು, ರನ್ ಕದಿಯುವ ಯತ್ನದಲ್ಲಿ ವಿಫಲರಾಗಿ ಪೆವಿಲಿಯನ್ ಸೇರಿಕೊಂಡರು. 5ನೇ ವಿಕೆಟ್ಗೆ ಜೊತೆಯಾದ ಪೂಜಾರ ಮತ್ತು ಪಂತ್, ಟೀಂ ಇಂಡಿಯಾಕ್ಕೆ ಆಸರೆಯಾಗಿದ್ದಾರೆ. ಆಸೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸುತ್ತಿರುವ ಈ ಜೋಡಿ ಉತ್ತಮವಾಗಿ ರನ್ ಕಲೆಹಾಕುತ್ತಿದೆ.
ಭೋಜನ ವಿರಾಮದ ವೇಳೆಗೆ ಭಾರತ 4 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿದ್ದು, 158 ರನ್ಗಳ ಹಿನ್ನಡೆ ಅನುಭವಿಸಿದೆ. ರಿಷಭ್ ಪಂತ್ 29 ಮತ್ತು ಪೂಜಾರ 42 ರನ್ ಗಳಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.