ETV Bharat / sports

ಭಾರತೀಯರ ದಾಳಿಗೆ ಬೆದರಿದ ಕಾಂಗರೂ ಪಡೆ : ಟೀಂ ಇಂಡಿಯಾ ಹಿಡಿತದಲ್ಲಿ ದ್ವಿತೀಯ ಟೆಸ್ಟ್

author img

By

Published : Dec 28, 2020, 12:09 PM IST

Updated : Dec 28, 2020, 9:50 PM IST

ಟ್ರಾವಿಸ್ ಹೆಡ್ (17) ಸೀರಾಜ್ ಎಸೆತದಲ್ಲಿ ಮಯಾಂಕ್​ಗೆ ವಿಕೆಟ್ ಒಪ್ಪಿಸಿದ್ರೆ, ಟಿಮ್ ಪೇನ್(1) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ್ರು. ಆಸ್ಟ್ರೇಲಿಯಾ ತಂಡ 6 ವಿಕೆಟ್ ಕಳೆದುಕೊಂಡು 119ರನ್ ಗಳಿಸಿದೆ..

India vs Australia 2nd Test
ಟೀಂ ಇಂಡಿಯಾ ಹಿಡಿತದಲ್ಲಿ ದ್ವಿತೀಯ ಟೆಸ್ಟ್

ಮೆಲ್ಬೋರ್ನ್ : ಟೀಂ ಇಂಡಿಯಾ ಬೌಲರ್​ಗಳ ಬಿಗಿ ದಾಳಿಗೆ ನಲುಗಿದ ಆಸೀಸ್ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್​​ನಲ್ಲಿ 6 ವಿಕೆಟ್ ಕಳೆದುಕೊಂಡು 133 ರನ್​ ಗಳಿಸಿ 2 ರನ್​ಮುನ್ನಡೆ ಸಾಧಿಸಿದೆ.

ಆರಂಭಿಕ ಆಟಗಾರರಾದ ಮ್ಯಾಥ್ಯೂ ವೇಡ್ ಮತ್ತು ಜೋ ಬರ್ನ್ಸ್​ ಈ ಬಾರಿಯೂ ಉತ್ತಮ ಇನ್ನಿಂಗ್ಸ್​ ಕಟ್ಟಲು ಸಾಧ್ಯವಾಗಲಿಲ್ಲ. ಉತ್ತಮವಾಗಿ ಸ್ಪೆಲ್ ಮಾಡಿದ ಉಮೇಶ್ ಯಾದವ್ 4ನೇ ಓವರ್​ನಲ್ಲಿ ಬರ್ನ್ಸ್​ ವಿಕೆಟ್ ಪಡೆದು ಕಾಂಗರೂಗಳಿಗೆ ಪೆಟ್ಟು ನೀಡಿದ್ರು.

ನಂತರ ಬಂದ ಮಾರ್ನಸ್ ಲಾಬುಶೇನ್ ಕೆಲಕಾಲ ಬೌಲರ್​ಗಳನ್ನು ಕಾಡಿದ್ರು. ಆದರೆ, ಅಶ್ವಿನ್ ಎಸೆತದಲ್ಲಿ ರಹಾನೆಗೆ ಕ್ಯಾಚ್​ ನೀಡಿ ನಿರ್ಗಮಿಸಿದ್ರು. ನಂತರ ಬಂದ ಸ್ಟೀವ್ ಸ್ಮಿತ್​(8) ಕೂಡ ಬುಮ್ರಾ ಎಸೆತದಲ್ಲಿ ಬೌಲ್ಡ್ ಆದ್ರು. ಎಚ್ಚರಿಕೆಯ ಆಟವಾಡುತ್ತಿದ್ದ ವೇಡ್(40) ಜಡೇಜಾ ಬೌಂಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ರು.

ಟ್ರಾವಿಸ್ ಹೆಡ್ (17) ಸೀರಾಜ್ ಎಸೆತದಲ್ಲಿ ಮಯಾಂಕ್​ಗೆ ವಿಕೆಟ್ ಒಪ್ಪಿಸಿದ್ರೆ, ಟಿಮ್ ಪೇನ್(1) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ್ರು. ಆಸ್ಟ್ರೇಲಿಯಾ ತಂಡ 6 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ, 2 ರನ್ ಮುನ್ನಡೆ ಸಾಧಿಸಿದೆ.

ಕೆಮರೂನ್ ಗ್ರೀನ್ 17 ಮತ್ತು ಪ್ಯಾಟ್ ಕಮ್ಮಿನ್ಸ್ 15 ರನ್​ ಗಳಿಸಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಜಡೇಜಾ 2 ವಿಕೆಟ್, ಉಮೇಶ್ ಯಾದವ್, ಸಿರಾಜ್, ಬುಮ್ರಾ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

Last Updated : Dec 28, 2020, 9:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.