ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಡಿಸೆಂಬರ್ 17ರಿಂದ 21ರವರೆಗೆ ಅಡಿಲೇಡ್ನಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು 27 ಸಾವಿರ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಪ್ರಕಟಣೆ ಹೊರಡಿಸಿದೆ.
ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಪಂದ್ಯ ಡೇ ಅಂಡ್ ನೈಟ್ ಪಂದ್ಯವೆಂದು ಘೋಷಿಸಲಾಗಿದೆ. ಎರಡು ಬಲಿಷ್ಠ ತಂಡಗಳು ಸೆಣಲಾಡಲಿರುವ ಈ ಪಂದ್ಯವನ್ನು ವೀಕ್ಷಿಸಲು ಕೋವಿಡ್ ಬಿಕ್ಕಟ್ಟಿನ ನಡುವೆಯೂ ಕ್ರೀಡಾಂಗಣದ ಅರ್ಧದಷ್ಟು ಮಂದಿಗೆ ಅಂದರೆ 27000 ಕ್ರಿಕೆಟ್ ಪ್ರಿಯರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಮಂಗಳವಾರ ಸಿಎ ಖಚಿತಪಡಿಸಿದೆ.
ಈ ಪಂದ್ಯ ಭಾರತದ ಪಾಲಿಗೆ 2ನೇ ಹಗಲು ರಾತ್ರಿ ಟೆಸ್ಟ್ ಪಂದ್ಯ ಮತ್ತು ವಿದೇಶದಲ್ಲಿ ಮೊದಲ ಪಂದ್ಯವಾಗಿದೆ. ಅಹರ್ನಿಶಿ ಟೆಸ್ಟ್ನಲ್ಲಿ ಭಾರತ ಆಡಿರುವ ಒಂದು ಪಂದ್ಯವನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ ಆಡಿರುವ 4 ಪಂದ್ಯಗಳನ್ನು ಗೆದ್ದು ಹೆಚ್ಚು ಅಹರ್ನಿಶಿ ಪಂದ್ಯಗಳನ್ನು ಗೆದ್ದಿರುವ ತಂಡ ಎಂಬ ದಾಖಲೆ ನಿರ್ಮಿಸಿದೆ.
ಬ್ರಿಸ್ಬೇನ್ ಟೆಸ್ಟ್ನಲ್ಲಿ 30000 ಮತ್ತು ಮೆಲ್ಬೋರ್ನ್ನಲ್ಲಿ ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್ಗೆ 25,000 ವೀಕ್ಷಕರಿಗೆ ಕ್ರಿಕೆಟ್ ಆಸ್ಟೇಲಿಯಾ ಅವಕಾಶ ಕಲ್ಪಿಸಿಕೊಟ್ಟಿದೆ.
ಇಂದು ಐಪಿಎಲ್ ಫೈನಲ್ ಮುಗಿಯಲಿದ್ದು, ಭಾರತ ತಂಡ 12ರಂದು ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿದೆ. ಅಲ್ಲಿ ಮೊದಲು 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಿದೆ. ನಂತರ 4 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ.