ETV Bharat / sports

ಇಂಗ್ಲೆಂಡ್​ ವಿರುದ್ಧದ ಟಿ-20 ಸರಣಿಗೆ ಟೀಂ ಇಂಡಿಯಾ ಪ್ರಕಟ: ಹೊಸ ಪ್ರತಿಭೆಗಳಿಗೆ ಬಿಸಿಸಿಐ ಮಣೆ - ಬಿಸಿಸಿಐ ಆಯ್ಕೆ ಸಮಿತಿ

ಇಂಗ್ಲೆಂಡ್ ವಿರುದ್ಧ ಆರಂಭಗೊಳ್ಳಲಿರುವ ಟಿ-20 ಕ್ರಿಕೆಟ್ ಸರಣಿಗಾಗಿ ಬಿಸಿಸಿಐ ತಂಡ ಪ್ರಕಟಗೊಳಿಸಿದ್ದು, ಹೊಸ ಆಟಗಾರರು ಅವಕಾಶ ಪಡೆದುಕೊಂಡಿದ್ದಾರೆ.

India squad for Paytm T20I
India squad for Paytm T20I
author img

By

Published : Feb 20, 2021, 9:02 PM IST

Updated : Feb 20, 2021, 11:26 PM IST

ಮುಂಬೈ: ಇಂಗ್ಲೆಂಡ್​ ವಿರುದ್ಧದ ಟಿ-20 ಸರಣಿಗಾಗಿ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಹೊಸ ಪ್ರತಿಭೆಗಳು ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ದೇಶಿ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಇಶನ್ ಕಿಶನ್​ ಹಾಗೂ ಸೂರ್ಯ ಕುಮಾರ್ ಯಾದವ್ ಇದೇ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿ ಯುವ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆ​ ನೀಡಿದ್ದು, 19 ಸದಸ್ಯರ ತಂಡ ಪ್ರಕಟಗೊಳಿಸಿದೆ. ಪ್ರಮುಖವಾಗಿ ರಾಹುಲ್​ ತೇವಾಟಿಯಾ, ವರುಣ್​ ಚಕ್ರವರ್ತಿ ಕೂಡ ತಂಡದಲ್ಲಿ ಚಾನ್ಸ್​ ಗಿಟ್ಟಿಸಿಕೊಂಡಿದ್ದಾರೆ. ಯುವ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್​ ಇಶಾನ್‌ ಕಿಶಾನ್‌, ಆಲ್‌ರೌಂಡರ್‌ ರಾಹುಲ್‌ ತೇವಾಟಿಯಾ, ಸೂರ್ಯಕುಮಾರ್‌ ಯಾದವ್‌ ಚೊಚ್ಚಲ ಅವಕಾಶ ಪಡೆದುಕೊಂಡಿದ್ದಾರೆ. ಕಳೆದ ಐಪಿಎಲ್​ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಇಶಾನ್‌ ಕಿಶನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಮತ್ತು ರಾಜಸ್ಥಾನ್‌ ರಾಯಲ್ಸ್ ತಂಡದಲ್ಲಿ ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ರಾಹುಲ್‌ ತೇವಾಟಿಯಾ ಮಿಂಚಿದ್ದರು.

ಓದಿ: ಹೊಸ ಆಟಗಾರರು ತಂಡಕ್ಕೆ ಸಾಕಷ್ಟು ಅನುಭವ ತರುತ್ತಾರೆ: ಶ್ರೇಯಸ್ ಅಯ್ಯರ್​ ಅಭಿಮತ

ತಂಡ ಇಂತಿದೆ: ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ರೋಹಿತ್ ಶರ್ಮಾ(ಉಪನಾಯಕ), ಕೆ.ಎಲ್​.ರಾಹುಲ್​, ಶಿಖರ್​ ಧವನ್​, ಶ್ರೇಯಸ್ ಅಯ್ಯರ್​, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್​(ವಿ.ಕೀ), ಇಶನ್ ಕಿಶನ್​(ವಿ.ಕೀ), ಯಜುವೇಂದ್ರ ಚಹಾಲ್​, ವರುಣ್​​ ಚಕ್ರವರ್ತಿ, ಅಕ್ಸರ್ ಪಟೇಲ್​, ವಾಷಿಂಗ್ಟನ್​ ಸುಂದರ್​, ರಾಹುಲ್​ ತೇವಾಟಿಯಾ, ಟಿ.ನಟರಾಜನ್​, ಭುವನೇಶ್ವರ್​ ಕುಮಾರ್​, ದೀಪಕ್​ ಚಹರ್, ನವದೀಪ್ ಸೈನಿ ಹಾಗೂ ಶಾರ್ದೂಲ್ ಠಾಕೂರ್​.

ಆದರೆ ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್​, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಅವಕಾಶ ಪಡೆದುಕೊಂಡಿಲ್ಲ. ಜೊತೆಗೆ ಕನ್ನಡಿಗರಾದ ಮನೀಷ್ ಪಾಂಡೆ, ಮಯಾಂಕ್​ ಅಗರವಾಲ್, ಸಂಜು ಸ್ಯಾಮ್ಸನ್​ ಕೂಡ ಅವಕಾಶ ವಂಚಿತರಾಗಿದ್ದಾರೆ. ಇಂಗ್ಲೆಂಡ್ ತಂಡದ ವಿರುದ್ಧ ಐದು ಟಿ-20 ಪಂದ್ಯಗಳು ನಡೆಯಲಿದ್ದು, ಮಾರ್ಚ್​ 12ರಿಂದ ಸರಣಿ ಆರಂಭಗೊಳ್ಳಲಿದೆ. ಗುಜರಾತ್​ನ ಅಹಮದಾಬಾದ್​ನಲ್ಲಿರುವ ವಿಶ್ವದ ಅತಿ ದೊಡ್ಡ ಮೈದಾನ ಮೊಟೆರೊದಲ್ಲಿ ಈ ಪಂದ್ಯಗಳು ನಡೆಯಲಿವೆ.

Last Updated : Feb 20, 2021, 11:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.